ತಿರುನಲ್ವೇಲಿ: ತಮಿಳುನಾಡಿನ (Tamil Nadu) ತಿರುನಲ್ವೇಲಿಯಲ್ಲಿರುವ ಥಿಯೇಟರ್‌ವೊಂದಕ್ಕೆ ಇಂದು ಮುಂಜಾನೆ ಇಬ್ಬರು ಅಪರಿಚಿತ ದುಷ್ಕರ್ಮಿಗಳು ಮೂರು ಪೆಟ್ರೋಲ್ ಬಾಂಬ್‌ಗಳನ್ನು ಎಸೆದಿದ್ದಾರೆ.
ನಟ ಶಿವಕಾರ್ತಿಕೇಯನ್ (Sivakarthikryan) ಅಭಿನಯದ ಅಮರನ್ ಚಿತ್ರದಲ್ಲಿ (Amaran Film) ಮುಸ್ಲಿಮರನ್ನು ನಕಾರಾತ್ಮಕವಾಗಿ ಚಿತ್ರಿಸಿರುವುದನ್ನು ವಿರೋಧಿಸಿ ಹಲವಾರು ಗುಂಪುಗಳು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಈ ದಾಳಿ ನಡೆದಿದೆ. ಇದನ್ನೂ ಓದಿ: ಇದು ವೈಯಕ್ತಿಕ ದ್ವೇಷ: ಧನುಷ್ ವಿರುದ್ಧ ನಯನತಾರಾ ಗರಂ
Advertisement
Advertisement
ಚಿತ್ರವು ಅಲಂಗಾರ್ ಚಿತ್ರಮಂದಿರಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ಪ್ರದರ್ಶನಗೊಳ್ಳುತ್ತಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳ ಪ್ರಕಾರ, ಹೆಚ್ಚಿನ ತನಿಖೆಯ ನಂತರವೇ ದಾಳಿಯ ಹಿಂದಿನ ನಿಖರವಾದ ಉದ್ದೇಶವನ್ನು ನಿರ್ಧರಿಸಲಾಗುತ್ತದೆ. ಘಟನೆಯು ಶುಕ್ರವಾರ ಸ್ಥಳೀಯರ ನಡುವಿನ ವಿವಾದಕ್ಕೆ ಸಂಬಂಧಿಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ತಮಿಳು ನಿರ್ದೇಶಕ ಸುರೇಶ್ ಸಂಗಯ್ಯ ನಿಧನ
Advertisement
Advertisement
ಸ್ಥಳದಿಂದ ಪರಾರಿಯಾಗುವ ಮೊದಲು ಇಬ್ಬರು ವ್ಯಕ್ತಿಗಳು ಥಿಯೇಟರ್‌ಗೆ ಪೆಟ್ರೋಲ್ ಬಾಂಬ್ ಎಸೆದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ದಾಳಿಯಿಂದ ಯಾವುದೇ ಹಾನಿ ಸಂಭವಿಸಿಲ್ಲ. ತನಿಖೆ ಮುಂದುವರಿದಿದ್ದು, ದುಷ್ಕರ್ಮಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಧನುಷ್, ರಶ್ಮಿಕಾ ಮಂದಣ್ಣ ನಟನೆಯ ‘ಕುಬೇರ’ ಚಿತ್ರದ ಗ್ಲಿಂಪ್ಸ್ ರಿಲೀಸ್