ಗದಗ: ಶಂಕಿತ ಡೆಂಗ್ಯೂ ಜ್ವರ ದಿಂದ ಎರಡು ದಿನದಲ್ಲಿ ಒಂದೇ ಗ್ರಾಮದ ಮೂವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರೋಣ ತಾಲೂಕಿನ ನಾಗರಸಕೊಪ್ಪ ಗ್ರಾಮದಲ್ಲಿ ನಡೆದಿದೆ.
ಶಂಕಿತ ಡೆಂಗ್ಯೂ ಜ್ವರಿಂದ ಇಂದು 28 ವರ್ಷದ ಹನುಮಂತ ಹಗೇದಾಳ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗುರುವಾರ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ 40 ವರ್ಷದ ಪರಸಪ್ಪ, 53 ವರ್ಷದ ಹೊಳಿಯವ್ವ ಲ್ಯಾವಕ್ಕಿ ಎಂಬ ಇಬ್ಬರು ಮೃತಪಟ್ಟಿದ್ದರು.
Advertisement
ಇವರು ಕಳೆದ ಎರಡು ವಾರಗಳಿಂದ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂಬುವುದಾಗಿ ಕುಟುಂಬದವರು ಹಾಗೂ ಸ್ಥಳಿಯರ ಆರೋಪಿಸಿದ್ದಾರೆ. ಈ ನಾಗರಸಕೊಪ್ಪ ಗ್ರಾಮದಲ್ಲಿ ಶೇ.60 ರಷ್ಟು ಜನ ಜ್ವರದಿಂದ ಬಳಲುತ್ತಿದ್ದು, ಸ್ಥಳಿಯ ಆಸ್ಪತ್ರೆ, ಗಜೇಂದ್ರಗಡ, ಗದಗ ಹಾಗೂ ಹುಬ್ಬಳ್ಳಿ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Advertisement
ಇಷ್ಟಾದರೂ ಸ್ಥಳಕ್ಕೆ ಬಾರದ ಆರೋಗ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಹಿಡಿಶಾಪ ಹಾಕಿದ್ದಾರೆ. ಸಾವಿನ ಬಳಿಕ ಗ್ರಾಮಕ್ಕೆ ಬಂದ ಆರೋಗ್ಯ ಇಲಾಖೆ ಐದು ಜನ ಅಧಿಕಾರಿಗಳನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಪಿಡಿಓಗೆ ದಿಗ್ಬಂಧನ ಹಾಕಿದ್ದರು. ಸ್ಥಳಕ್ಕೆ ಡಿಸಿ ಹಾಗೂ ಡಿಎಚ್‍ಓ ಸ್ಥಳಕ್ಕೆ ಆಗಮಿಸುವಂತೆ ಗ್ರಾಮಸ್ಥರು ಪಟ್ಟು ಹಿಡಿದರು. ಗಜೇಂದ್ರಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.