ಧಾರವಾಡ: ಕೋಳಿಗೆ ಎರಡು ಕಾಲು ಇರೋದು ಸರ್ವೇ ಸಾಮಾನ್ಯ. ಆದರೆ ಧಾರವಾಡದಲ್ಲಿ ಒಂದು ಕೋಳಿ ಮರಿಗೆ ಮೂರು ಕಾಲುಗಳಿದ್ದು, ಈ ಅಪರೂಪದ ಕೋಳಿಮರಿ ಎಲ್ಲರನ್ನು ಅಚ್ಚರಿಗೊಳಿಸಿದೆ.
ಹೌದು, ಧಾರವಾಡ ಹೊರವಲಯದ ಆಂಜನೆಯನಗರದ ಬಳಿಯ ಕೋಳಿ ಫಾರ್ಮನಲ್ಲಿ ಈ ಕೋಳಿ ಮರಿ ಪತ್ತೆಯಾಗಿದೆ. ಕೋಳಿ ಫಾರ್ಮನ ಮಾಲೀಕ ಇಲ್ಮುದ್ದಿನ್ ಮೊರಬ ಈ ಅಪರೂಪ ಮರಿಯನ್ನು ಸಾಕುತ್ತಿದ್ದಾರೆ. ಎರಡು ಕಾಲುಗಳ ಜೊತೆ ಇನ್ನೊಂದು ಕಾಲು ಬೆನ್ನಿನ ಕೆಳ ಭಾಗದಲ್ಲಿದೆ. 15 ದಿನ ಈ ಮರಿಗೆ ಓಡಾಡಲು ಏನು ತೊಂದರೆ ಆಗಿರಲಿಲ್ಲ. ಆದರೆ ಇದಕ್ಕೆ ಇರುವ ಪ್ರತ್ಯೇಕ ಕಾಲಿನಿಂದಲೇ ಈಗ ಕೊಂಚ ತೊಂದರೆಯಾಗುತ್ತದೆ. ಇದನ್ನೂ ಓದಿ:ಕಾಫಿನಾಡಿನಲ್ಲಿ ಕಂಡುಬಂತು 4 ಕಾಲಿನ ಫಾರಂ ಕೋಳಿ
Advertisement
Advertisement
ಈ ಕೋಳಿಮರಿಯನ್ನು ಮೊರಬ ಕುಟುಂಬ ಮಾರಾಟ ಮಾಡದೇ ತಮ್ಮ ಬಳಿಯೇ ಇಟ್ಟುಕೊಂಡು ಸಾಕುತ್ತಿದ್ದಾರೆ. ಈ ಕೋಳಿ ಮರಿಗೆ ಮೂರು ಕಾಲು ಇರುವುದನ್ನ ಕೇಳಿದ ಜನರು ಕೂಡಾ ಅತ್ಯಂತ ಕುತೂಹಲದಿಂದ ಇದನ್ನು ನೋಡಲು ಬರುತ್ತಿದ್ದಾರೆ. ಜೊತೆಗೆ ಇದರ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟಿದ್ದಾರೆ.