ರಾಜ್ಯದಲ್ಲಿ ಹಲವೆಡೆ ಮಳೆ – ಸಿಡಿಲಿಗೆ ಮೂವರು ಬಲಿ

Public TV
2 Min Read
WEATHER

– ಕಾರಿನ ಮೇಲೆ ಮರ ಬಿದ್ದು ಚಾಲಕ ದುರ್ಮರಣ
– ಮಡಿಕೇರಿಯಲ್ಲಿ ಲಾರಿ ಪಲ್ಟಿ

ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಒಂದು ವಾರದಿಂದ ಮಳೆಯಾಗುತ್ತಿದೆ. ಇಂದು ಸಹ ಕೆಲವೆಡೆ ಗುಡುಗು ಸಿಡಿಲು (Lightning Strike) ಸಹಿತ (Rain) ಮಳೆಯಾಗಿದೆ. ಮಳೆಯಿಂದ ಕೆಲವೆಡೆ ಜನ ಸಂಭ್ರಮ ಪಟ್ಟರೆ, ಇನ್ನೂ ಕೆಲವೆಡೆ ಆವಾಂತರಗಳನ್ನು ಸೃಷ್ಟಿಸಿದೆ.

Rain EFFECT 1

ಬೀದರ್ (Bidar) ಜಿಲ್ಲೆಯ ಹಲವೆಡೆ ಸಾಧಾರಣ ಮಳೆಯಾಗಿದ್ದು, ನಿಟ್ಟೂರು (ಬಿ) ಗ್ರಾಮದಲ್ಲಿ ತಾಯಿಯ ಎದುರೇ ಸಿಡಿಲಿಗೆ ಮಗ ಬಲಿಯಾಗಿದ್ದಾನೆ. ಸುನೀಲ್ ವಿಜಯಕುಮಾರ್ ಮಗರೆ (32) ಮೃತ ದುರ್ದೈವಿ. ತಮ್ಮ ಜಮೀನಿನಲ್ಲಿ ಜೆಸಿಬಿಯಲ್ಲಿ ಕೆಲಸ ಮಾಡಿಸುತ್ತಿರುವಾಗ ಸಿಡಿಲು ಬಡಿದಿದೆ. ಇದರಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯುವಕನ ತಾಯಿ, ಅಣ್ಣ, ಚಿಕ್ಕಪ್ಪ ಸಮೀಪದಲ್ಲೇ ಇದ್ದು, ಸಿಡಿಲಿನಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಪ್ರೀತಿ ತಿರಸ್ಕರಿಸಿದ್ದಕ್ಕೆ ಹುಬ್ಬಳ್ಳಿಯಲ್ಲಿ ಹಿಂದೂ ಯವತಿಯ ಮೇಲೆ ಮುಸ್ಲಿಂ ಯುವಕನಿಂದ ಹಲ್ಲೆ

ಆಳಂದ ತಾಲೂಕಿನ ವಿವಿಧೆಡೆ ಗುಡುಗು, ಬಿರುಗಾಳಿ ಸಹಿತ ಮಳೆಯಾಗಿದೆ. ಇನ್ನೂ ದೇವಂತಗಿ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕ ಸಾವನ್ನಪ್ಪಿದ್ದಾನೆ. ಚಂದ್ರಕಾಂತ್ ಭಜಂತ್ರಿ (12) ಸಿಡಿಲಿಗೆ ಬಲಿಯಾದ ಬಾಲಕ. ಜಮೀನಿನಿಂದ ಮನೆಗೆ ಮರಳಿ ಬರುವಾಗ ಯುವಕ ಸಿಡಿಲು ಬಡಿದು ಮೃತಪಟ್ಟಿದ್ದಾನೆ.

ಕೊಪ್ಪಳದ ಯಲಬುರ್ಗಾ ತಾಲೂಕಿನ ಕೋನಸಾಗರ ಗ್ರಾಮದಲ್ಲಿ ಸಿಡಿಲಿಗೆ ಬಾಲಕನೊಬ್ಬ ಬಲಿಯಾಗಿದ್ದಾನೆ. ಗ್ರಾಮದ ಶ್ರೀನಿವಾಸ ಗೊಲ್ಲರ (16) ಮೃತಪಟ್ಟ ಬಾಲಕ ಎಂದು ತಿಳಿದು ಬಂದಿದೆ. ಈ ವೇಳೆ ಸ್ಥಳದಲ್ಲೇ ಇದ್ದ ಬಾಲಕನ ತಂದೆಗೆ ಗಾಯವಾಗಿದೆ. ಜಮೀನಿನಲ್ಲಿ ಕುರಿ ಮೇಯಿಸುತ್ತಿದ್ದಾಗ ಸಿಡಿಲು ಬಡಿದಿದೆ ಎಂದು ತಿಳಿದು ಬಂದಿದೆ. ಇನ್ನೂ ಇರಕಲ್‍ಗಡದಲ್ಲಿ ಸಿಡಿಲಿಗೆ ಒಂದು ಎತ್ತು ಹಾಗೂ 7 ಕುರಿಗಳು ಸಿಡಿಲಿಗೆ ಬಲಿಯಾಗಿವೆ.

Rain EFFECT

ಚಿಕ್ಕಮಗಳೂರಿನ (Chikkamagaluru) ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ, ಕಾರಿನ ಮೇಲೆ ತೆಂಗಿನಮರ ಹಾಗೂ ವಿದ್ಯುತ್ ಕಂಬ ಬಿದ್ದು, ಕಾರಿನ ಚಾಲಕ ಸ್ಥಳದಲ್ಲೇ ಸಾವ್ನನಪ್ಪಿದ್ದು, ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ. ಮಾಚೇನಹಳ್ಳಿ ಗ್ರಾಮದ ದೇವರಾಜ್ (38) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಳೆದ 10 ದಿನಗಳಿಂದ ಚಿಕ್ಕಮಗಳೂರು ತಾಲೂಕಿನಲ್ಲಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ.

Rain EFFECT 2

ಕೊಡಗಿನ ಹಲವೆಡೆ ಭಾರೀ ಮಳೆಯಾಗಿದೆ. ಮಳೆಯ ಪರಿಣಾಮ ಲಾರಿಯ ಚಕ್ರ ಜಾರಿ, ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಮಡಿಕೇರಿ (Madikeri) ಸಮೀಪದ ಜೋಡುಪಾಲ ಬಳಿ ನಡೆದಿದೆ. ಬೆಂಗಳೂರಿನಿಂದ ಮಂಗಳೂರಿಗೆ ಲಾರಿ ತೆರಳುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಲಾರಿ ಚಾಲಕ ಪಾರಾಗಿದ್ದಾನೆ. ಇದನ್ನೂ ಓದಿ: ಚುನಾವಣೆಗೂ ಮುನ್ನವೇ ಖಾತೆ ತೆರೆದ ಬಿಜೆಪಿ – ʻಮ್ಯಾಚ್‌ ಫಿಕ್ಸಿಂಗ್‌ʼ ಎಂದ ಕಾಂಗ್ರೆಸ್‌

Share This Article