ನವದೆಹಲಿ: ಉತ್ತರಪ್ರದೇಶದ ಉಗ್ರ ನಿಗ್ರಹ ದಳ ಹಾಗೂ ದೆಹಲಿ ಪೊಲೀಸ್ ವಿಶೇಷ ಘಟಕ ಮೂವರು ಶಂಕಿತ ಉಗ್ರರನ್ನು ಬಂಧಿಸಿದೆ.
6 ರಾಜ್ಯಗಳ ಪೊಲೀಸರ ನೆರವಿನಿಂದ ಉತ್ತರಪ್ರದೇಶದ ಉಗ್ರ ನಿಗ್ರಹ ದಳ ಮುಂಬೈ, ಲುಧಿಯಾನಾ ಮತ್ತು ಬಿಜನೂರ್‍ನಲ್ಲಿ ಈ ಮೂವರು ಶಂಕಿತ ಐಸಿಸ್ ಉಗ್ರರರನ್ನ ಬಂಧಿಸಿದೆ. ಮಹಾರಾಷ್ಟ್ರದ ಮುಂಬೈ, ಪಂಜಾಬಿನ ಜಲಂಧರ್, ಬಿಹಾರದ ನರ್ಕಾಟಿಯಾಗಂಜ್, ಉತ್ತರಪ್ರದೇಶದ ಬಿಜನೂರ್ ಹಾಗೂ ಮುಜಫರ್‍ನಗರಗಳಲ್ಲಿ ಹುಡುಕಾಟ ನಡೆದಿತ್ತು.
Advertisement
ಉಗ್ರ ನಿಗ್ರಹ ದಳ ಮೂಲಗಳ ಮಾಹಿತಿಯ ಪ್ರಕಾರ ಮುಂಬೈನ ಮುಂಬ್ರಾದಲ್ಲಿ ಬಂಧಿಸಲಾದ 26 ವರ್ಷದ ಆರೋಪಿ ಮಹಾರಾಷ್ಟ್ರದ ಐಸಿಸ್ ಉದ್ಯೋಗಿ ಎನ್ನಲಾಗಿದೆ. ಈತನ ಬಳಿಯಿದ್ದ ಹಲವಾರು ಸಿಮ್ ಕಾರ್ಡ್‍ಗಳನ್ನ ಜಪ್ತಿ ಮಾಡಲಾಗಿದೆ.
Advertisement
ಉತ್ತರಪ್ರದೇಶದ ಉಗ್ರ ನಿಗ್ರಹ ದಳ, ದೆಹಲಿ ವಿಶೇಷ ಪೊಲೀಸ್ ಘಟಕ, ಅಂಧ್ರಪ್ರದೇಶದ ಸಿಐಡಿ, ಮಹಾರಾಷ್ಟ್ರ ಉಗ್ರ ನಿಗ್ರಹ ದಳ, ಬಿಹಾರ ಪೊಲೀಸರು ಹಾಗು ಪಂಜಾಬ್ ಪೊಲೀಸರು ಈ ಕಾರ್ಯಾಚರಣೆಯ ಭಾಗವಾಗಿದ್ದರು.
Advertisement
ಈ ಬಗ್ಗೆ ತನಿಖೆ ಮುಂದುವರೆದಿದ್ದು, ಬಂಧಿತ ಉಗ್ರರು ಸೇರಿದಂತೆ ಇತರೆ 6 ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಉತ್ತರಪ್ರದೇಶದ ಎಡಿಜಿ ದಲ್ಜೀತ್ ಸಿಂಗ್ ಚೌಧರಿ ಹೇಳಿದ್ದಾರೆ.