ಓದಲು ಇಷ್ಟವಿಲ್ಲವೆಂದು ಮೂವರು ನಾಪತ್ತೆ- ವಾರವಾದರೂ ಪತ್ತೆಯಾಗದ ಹೆಣ್ಣು ಮಕ್ಕಳನ್ನು ನೆನೆದು ಪೋಷಕರು ಕಣ್ಣೀರು

Advertisements

ಬೆಂಗಳೂರು: ಶಾಲೆಗೆ ಹೋಗಿದ್ದ ಮೂವರು ಹೆಣ್ಣು ಮಕ್ಕಳು ಓದಲು ಇಷ್ಟವಿಲ್ಲ ಎಂದು ಒಂಬತ್ತು ದಿನದ ಹಿಂದೆ ನಾಪತ್ತೆಯಾಗಿದ್ದು, ಮಕ್ಕಳನ್ನು ನೆನೆದು ಪೋಷಕರು ಈಗ ಕಣ್ಣೀರು ಹಾಕುತ್ತಿದ್ದಾರೆ.

Advertisements

ಒಂಬತ್ತು ದಿನಗಳ ಹಿಂದೆ ಶಕ್ತೀಶ್ವರಿ(15), ವರುಣಿಕ(16), ನಂದಿನಿ(15) ನಾಪತ್ತೆಯಾಗಿದ್ದರು. ಈ ಮೂವರು ವಿದ್ಯಾರ್ಥಿನಿಯರು(Student) ಬೆಂಗಳೂರಿನ(Bengaluru) ಪುಲಿಕೇಶಿ ನಗರದ ಖಾಸಗಿ ಶಾಲೆಯಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದರು. ಆದರೆ ಕಳೆದ 9 ದಿನಗಳ ಹಿಂದೆ ಸ್ಕೂಲ್(School) ಮುಗಿಸಿ ಹಾಸ್ಟೆಲ್‍ಗೆ ಹೋಗಬೇಕಿತ್ತು. ಆದರೆ ಸಂಜೆಯಾದರೂ ಕೂಡ ಮೂವರು ಹಾಸ್ಟೆಲ್‍ಗೆ(Hostel) ಹೋಗಿರಲಿಲ್ಲ.

Advertisements

ಈ ಕುರಿತು ರಾತ್ರಿ ಹೊತ್ತಿಗೆ ವಿಚಾರ ತಿಳಿದ ಪೋಷಕರು, ಸ್ಕೂಲ್‍ನ ಆಡಳಿತ ಮಂಡಳಿ ಬಳಿ ಕೇಳಿದ್ದಾರೆ. ಸ್ಕೂಲ್‍ನಿಂದ ಹೊರಗೆ ಹೋದಮೇಲೆ ನಾವು ಜವಾಬ್ದಾರಲ್ಲ ಎಂದು ಹೇಳಿದ್ದಾರೆ. ಅದೇ ರೀತಿ ಹಾಸ್ಟೆಲ್‍ನವರನ್ನು ಕೇಳಿದರೆ ಅವರು, ಒಳಗೆ ಬಂದ ನಂತರವಷ್ಟೇ ನಮ್ಮ ಜವಾಬ್ದಾರಿ ಎಂದಿದ್ದಾರೆ. ಇಬ್ಬರ ಮಾತಿನಿಂದ ಬೇಸರಗೊಂಡ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆದರೆ ದೂರು ನೀಡಿ 9 ದಿನವಾದರೂ ಪೊಲೀಸರು ಇನ್ನೂ ಹುಡುಕಾಟ ನಡೆಸುತ್ತಿದ್ದು, ಒಂದು ಸಣ್ಣ ಸುಳಿವು ಕೂಡ ಸಿಕ್ಕಿಲ್ಲ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಲವ್ ಜಿಹಾದ್ ಕೇಸ್ – ಮಗಳ ಮದ್ವೆಗೆ ನನ್ನ ಸಂಪೂರ್ಣ ಒಪ್ಪಿಗೆಯಿದೆ ಎಂದ ತಾಯಿ

ಮೂವರು ವಿದ್ಯಾರ್ಥಿಗಳಿಗೆ ಕ್ಲಾಸ್ ರೂಮ್‍ನಲ್ಲಿ ಕೆಲ ಶಿಕ್ಷಕರೇ, ನೀವು ಸ್ಲಂನವರು ಎಂದು ಇತರೆ ವಿದ್ಯಾರ್ಥಿಗಳ ಎದುರು ಅವಮಾನವಾಗುವ ರೀತಿ ಮಾತನಾಡಿದ್ದಾರೆ. ಇದರಿಂದ ನೊಂದ ವಿದ್ಯಾರ್ಥಿಗಳು ನಮಗೆ ಓದೋಕೆ ಇಷ್ಟ ಇಲ್ಲ ಎಂದು ಮನೆಬಿಟ್ಟು ಹೋಗಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಕೋಳಿವಾಡ ಸಮಿತಿಯಿಂದ್ಲೇ ಬಾಗ್ಮನೆ ಒತ್ತುವರಿ ಬಯಲು

Advertisements

ಮಕ್ಕಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸರು, ಶಾಲೆಯವರು ನಿರ್ಲಕ್ಷ್ಯ ವರ್ತನೆ ತೋರುತ್ತಿದ್ದಾರೆ ಅನ್ನೋದು ಪೋಷಕರ ಆರೋಪ. ಮಕ್ಕಳು ಮಿಸ್ ಆಗಿ 9 ದಿನ ಕಳೆದಿದೆ. ಪೊಲೀಸರು ಹುಡುಕಾಟ ನಡೆಸುತ್ತಿಲ್ಲ. ಶಾಲೆಯವರಿಗೆ ಕೇಳೋಕೆ ಹೋದರೆ ಗೇಟ್‍ನಿಂದ ಒಳಗೂ ಬಿಡುತ್ತಿಲ್ಲ. ಇದರಿಂದ ಬೇಸರಗೊಂಡ ಪೋಷಕರು, ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

Live Tv

Advertisements
Exit mobile version