-ಗೆಳಯನ ಹುಟ್ಟುಹಬ್ಬ ಆಚರಿಸಿ ವಾಪಾಸ್ಸಾಗ್ತಿದ್ದ ಮೂವರು ಏಮ್ಸ್ ವೈದ್ಯರ ಸಾವು
ನವದೆಹಲಿ: ಮಥುರಾ ಸಮೀಪದ ಯಮುನಾ ಎಕ್ಸ್ ಪ್ರೆಸ್ ನಲ್ಲಿ ಕಂಟೈನರ್ ಗೆ ಕಾರ್ ಡಿಕ್ಕಿಯಾಗಿ ಮೂವರು ದೆಹಲಿಯ ಏಮ್ಸ್ ವೈದ್ಯರು ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ.
ಈ ಘಟನೆ ಇಂದು ಮುಂಜಾನೆ ನಡೆದಿದೆ. ಘಟನೆಯ ಸಂದರ್ಭದಲ್ಲಿ ಕಾರ್ ನಲ್ಲಿದ್ದ ಇತರೇ ನಾಲ್ಕು ವೈದ್ಯರಿಗೆ ಗಾಯಗಳಾಗಿದ್ದು, ವೈದ್ಯರು ದೆಹಲಿಯಿಂದ ಆಗ್ರಾ ಕಡೆ ಪ್ರಯಾಣ ಬೆಳೆಸಿದ್ದರು ಎನ್ನಲಾಗಿದೆ.
Advertisement
Advertisement
ಅಪಘಾತದಲ್ಲಿ ಗಾಯಗೊಂಡ ವೈದ್ಯರನ್ನು ಡಾ. ಕ್ಯಾಥರೀನ್ ಹಾಲಮ್, ಡಾ. ಜಿತೇಂದರ್ ಮೌರ್ಯ ಮತ್ತು ಡಾ. ಅಭಿನವ್ ಸಿಂಗ್ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹರ್ಷದ್ ವಾಂಖೆಡೆ (34), ಡಾ.ಯಶ್‍ಪ್ರೀತ್ ಸಿಂಗ್ (25), ಡಾ. ಹೆಂಬಲಾ (24) ಎಂಬವರು ಘಟನೆಯಲ್ಲಿ ಮೃತಪಟ್ಟಿದ್ದಾರೆ.
Advertisement
ಅಪಘಾತವು ಭಾನುವಾರ ರಾತ್ರಿ 2.30 ಸುಮಾರಿಗೆ ನಡೆದಿದ್ದು, ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಹರ್ಷದ್ ವಾಂಖೆಡೆ ಎಂಬವರ ಹುಟ್ಟುಹಬ್ಬ ಸಂಭಮಾಚರಣೆಯಲ್ಲಿ ಭಾಗವಹಿಸಿ ಆಗ್ರಾದಿಂದ ಹಿಂದಿರುಗುವ ವೇಳೆ ಅಪಘಾತ ಸಂಭವಿಸಿದೆ. ಘಟನೆ ವೇಳೆ ಡಾ. ಹರ್ಷದ್ ಅವರು ಕಾರನ್ನು ಚಾಲಯಿಸುತ್ತಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
Advertisement
#UPDATE Three doctors from AIIMS Delhi killed, three injured in an accident on Yamuna Expressway near Mathura pic.twitter.com/szlBvhH1Jz
— ANI UP/Uttarakhand (@ANINewsUP) March 18, 2018
ಕಾರು ಚಾಲಯಿಸುವ ವೇಳೆ ಚಾಲಕ ನಿದ್ರೆಗೆ ಜಾರಿದ್ದೆ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು, ಅಪಘಾತದಲ್ಲಿ ಗಾಯಗೊಂಡವರು ಪ್ರಾಥಮಿಕ ತನಿಖೆ ವೇಳೆ ನೀಡಿದ ಪ್ರಕಾರ ಕಾರಿನಲ್ಲಿದ್ದ ಎಲ್ಲರೂ ನಿದ್ರೆಗೆ ಜಾರಿದ್ದರು ಎಂದು ಮಾಹಿತಿ ಲಭ್ಯವಾಗಿದೆ.
ಘಟನೆ ವೇಳೆ ಕಾರು ವೇಗವಾಗಿ ಚಲಿಸುತ್ತಿದ್ದ ಕಾರಣದಿಂದ ಅಪಘಾತವಾದ ಬಳಿಕ ಸುಮಾರು 300 ಮೀ ದೂರ ರಸ್ತೆಯಲ್ಲಿ ಜಾರಿಕೊಂಡಿ ಹೋಗಿದೆ. ಅಪಘಾತ ನಡೆದ ಅರ್ಧ ಗಂಟೆಯಲ್ಲಿ ಎಲ್ಲರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ಹೇಳಿದರು.
ಘಟನೆ ವೇಳೆ ಕಾರಿನಲ್ಲಿದ್ದ ಡಾ. ಅಭಿನವ್ ಸಿಂಗ್ ಬಿಹಾರ, ಡಾ. ಕ್ಯಾಥರೀನ್ ಹಾಲಮ್ ತ್ರಿಪುರ, ಡಾ. ಮಹೇಶ್ ಕುಮಾರ್ ಬಿಹಾರ, ಜಿತೇಂದರ ಮೌರ್ಯ ಅಮೀರ್ ಪುರ ಮೂಲದವರು ಎಂದು ತಿಳಿದು ಬಂದಿದೆ.