ನವದೆಹಲಿ: ಇಲ್ಲಿನ ಕನ್ನಾಟ್ ಪ್ಲೇಸ್‌ನಲ್ಲಿ ರಾತ್ರಿ ಪಾರ್ಟಿಗೆ ಹೋಗಿದ್ದ ಉದ್ಯಮಿಯೊಬ್ಬರನ್ನು ಮೂವರು ಡೆಲಿವರಿ ಬಾಯ್‌ಗಳು (Delivery Agents) ಹೆಲ್ಮೆಟ್‌ನಿಂದಲೇ ಹೊಡೆದು ಕೊಂದಿರುವ ಘಟನೆ ನಡೆದಿದೆ.
ಜನವರಿ 3 ರ ರಾತ್ರಿ ಈ ಘಟನೆ ನಡೆದಿತ್ತು. ಉದ್ಯಮಿ ಶಿವಂ ಗುಪ್ತಾ ಎರಡು ವಾರಗಳಿಗೂ ಹೆಚ್ಚು ಕಾಲ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ತೀವ್ರ ಗಾಯಗಳಿಂದಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಉದ್ಯಮಿ ಮೇಲೆ ಭೀಕರ ಹಲ್ಲೆ ನಡೆಸಿ ಹತ್ಯೆ ಮಾಡಿದ ಆರೋಪಿಗಳಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂರನೇ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ. ಇದನ್ನೂ ಓದಿ: ಚುನಾವಣೆಗೆ ಸ್ಪರ್ಧಿಸಲು ಮಗಳನ್ನೇ ಕೊಂದ ಪಾಪಿ ತಂದೆ!
ಜನವರಿ 3 ರಂದು ರಾತ್ರಿ ಕನ್ನಾಟ್ ಪ್ಲೇಸ್‌ನ ಪಾದಚಾರಿ ಮಾರ್ಗದಲ್ಲಿ ಗಾಯಗೊಂಡ ವ್ಯಕ್ತಿಯೊಬ್ಬ ಬಿದ್ದಿರುವ ಬಗ್ಗೆ ಪೊಲೀಸ್ ತಂಡಕ್ಕೆ ಕರೆ ಬಂದಿತು. ಗುಪ್ತಾ ಗಂಭೀರ ಗಾಯಗಳಿಂದ ಬಳಲುತ್ತಿದ್ದು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟಾಗಿದ್ದ ಉದ್ಯಮಿಯನ್ನು ಜನವರಿ 4 ರಂದು ಬೇರೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ದಿನಕಳೆದಂತೆ ಆರೋಗ್ಯ ಮತ್ತಷ್ಟು ಗಂಭೀರವಾಗಿ ಮೃತಪಟ್ಟಿದ್ದಾರೆ.
ದೆಹಲಿಯ ಪಹರ್‌ಗಂಜ್‌ನಲ್ಲಿ ಎರಡು ಅಂಗಡಿಗಳನ್ನು ನಡೆಸುತ್ತಿರುವ ಶಿವಂ ಅವರ ತಂದೆ ಅನಿಲ್ ಕಾಂತ್ ಗುಪ್ತಾ, ತಮ್ಮ ಏಕೈಕ ಮಗನನ್ನು ಕೊಂದವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಅನಿಲ್ ಕಾಂತ್ ಅವರ ಮಗ ಜನವರಿ 2 ರಂದು ಸಂಜೆ ಪಾರ್ಟಿಯಲ್ಲಿ ಭಾಗವಹಿಸುವುದಾಗಿ ಹೇಳಿ ಲಕ್ಷ್ಮಿ ನಗರದಿಂದ ಹೋಗಿದ್ದರು. ಮಾರನೆ ದಿನ ಈ ಘಟನೆ ನಡೆದಿದೆ. ಇದನ್ನೂ ಓದಿ: ಸಿನಿಮಾ ಸ್ಟೈಲ್‌ನಲ್ಲಿ ಯುವಕನನ್ನ ಅಡ್ಡಗಟ್ಟಿ 31 ಲಕ್ಷ ದರೋಡೆ – ಬೆಚ್ಚಿಬೀಳಿಸುವ ದೃಶ್ಯ ಸೆರೆ

