ಮುಂಬೈ: ರಾಷ್ಟ್ರೀಯ ರಾಸಾಯನಿಕ ಹಾಗೂ ರಸಗೊಬ್ಬರ (ಆರ್ಸಿಎಫ್) ಘಟಕದಲ್ಲಿ ಏರ್ ಕಂಡಿಷನರ್ ಕಂಪ್ರೆಸರ್ (AC Compressor) ಸ್ಫೋಟಗೊಂಡ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ (Maharashtra) ರಾಯಗಢ ಜಿಲ್ಲೆಯ ಅಲಿಬಾಗ್ನಲ್ಲಿ ನಡೆದಿದೆ.
ಅಲಿಬಾಗ್ನ ಥಾಲ್ನಲ್ಲಿರುವ ಆರ್ಸಿಎಫ್ ಘಟಕದಲ್ಲಿ ಕಾರ್ಮಿಕರ ಗುಂಪು ಏರ್ ಕಂಡಿಷನರ್ನ್ನು (Air Conditioner) ದುರಸ್ತಿ ಮಾಡುತ್ತಿದ್ದಾಗ ಇದಕ್ಕಿದ್ದಂತೆ ಎಸಿ ಕಂಪ್ರೆಸರ್ ಸ್ಫೋಟಗೊಂಡಿದೆ. ಈ ವೇಳೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿದೆ. ಇದನ್ನೂ ಓದಿ: 1 ಮತ ಅಂತರದ ಗೆಲುವು – ಚುನಾವಣೆ ಮುಗಿದು 1 ವರ್ಷ, 10 ತಿಂಗಳ ಬಳಿಕ ಮರು ಮತ ಎಣಿಕೆ
Advertisement
Advertisement
ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿ ಅಲಿಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ದೀಪಾವಳಿಯಲ್ಲಿ ನಿಷೇಧಿತ ಪಟಾಕಿ ಸಿಡಿಸಿದ್ರೆ 6 ತಿಂಗಳು ಜೈಲು ಶಿಕ್ಷೆ