ಚಿಕ್ಕಮಗಳೂರು: ಕಾಫಿನಾಡ ಪ್ರವಾಸಿ ತಾಣ ಮುಳ್ಳಯ್ಯನಗಿರಿ (Mullayanagiri), ದತ್ತಪೀಠ (Duttapeeta) ಭಾಗಕ್ಕೆ 3 ದಿನಗಳ ಕಾಲ ಪ್ರವಾಸಿಗರನ್ನು ನಿಷೇಧಿಸಲಾಗಿದೆ.
ದತ್ತಮಾಲಾ ಅಭಿಯಾನದ ಹಿನ್ನೆಲೆ ಪ್ರವಾಸಿಗರಿಗೆ 3 ದಿನ ಗಿರಿ ಭಾಗ ಬಂದ್ ಮಾಡಲಾಗಿದೆ. ನವೆಂಬರ್ 4 ಬೆಳಗ್ಗೆ 6 ಗಂಟೆಯಿಂದ ನವೆಂಬರ್ 6ರ ಬೆಳಗ್ಗೆ 10 ಗಂಟೆಯವರೆಗೆ ಪ್ರವಾಸಿಗರನ್ನು ನಿಷೇಧಿಸಲಾಗಿದೆ. ದತ್ತಪೀಠ, ಸೀತಾಳಯ್ಯನಗಿರಿ, ಮುಳ್ಳಯ್ಯನಗಿರಿ, ಹೊನ್ನಮ್ಮನಹಳ್ಳ, ಮಾಣಿಕ್ಯಾಧಾರ, ಗಾಳಿಕೆರೆಗೂ ಪ್ರವಾಸ ನಿಷೇಧಿಸಲಾಗಿದೆ. ಇದನ್ನೂ ಓದಿ: ಹುಲಿ ಉಗುರು ಪ್ರಕರಣ – ಸ್ಯಾಂಡಲ್ವುಡ್ ನಟರ ಬಳಿಕ ರಾಜಕಾರಣಿಗಳಿಗೂ ಸಂಕಷ್ಟ
Advertisement
Advertisement
ಅಕ್ಟೋಬರ್ 30 ರಿಂದ ನವೆಂಬರ್ 5 ರವರೆಗೆ ಮುಳ್ಳಯ್ಯನಗಿರಿ ಭಾಗದಲ್ಲಿ ದತ್ತಮಾಲಾ ಅಭಿಯಾನ ನಡೆಯಲಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದಿಂದ ಮುಳ್ಳಯ್ಯನಗಿರಿಗೆ ಪ್ರವಾಸಿಗರ ನಿಷೇಧ ಹೇರಲಾಗಿದೆ. ದತ್ತಪೀಠಕ್ಕೆ ಡಿಸಿ, ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ವಿಜಯದಶಮಿ ವೇಳೆ ಪಲ್ಲಕ್ಕಿ ತಡೆದು ಅಲ್ಲಾ ಹು ಅಕ್ಬರ್ ಘೋಷಣೆ ಕೂಗಿದ ಕಿಡಿಗೇಡಿಗಳು
Advertisement
Web Stories