ಕಲಬುರಗಿ: ಮೂರು ದಿನದ ಹಿಂದೆ ಜನಿಸಿದ ಮಗುವಿನ (Baby) ಹೃದಯದಲ್ಲಿ (Heart) ರಂಧ್ರ ಕಾಣಿಸಿಕೊಂಡ ಪರಿಣಾಮ ಮಗು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದು, ಮಗುವಿನ ಚಿಕಿತ್ಸೆಗಾಗಿ ದಂಪತಿ ಪರದಾಡುತ್ತಿರುವ ಘಟನೆ ಜಿಲ್ಲೆಯಲ್ಲಿ ಕಂಡುಬಂದಿದೆ.
Advertisement
ಚಿತ್ತಾಪುರ ತಾಲೂಕಿನ ರಾಂಪೂರಹಳ್ಳಿ ಗ್ರಾಮದ ಮಲ್ಲಿಕಾರ್ಜುನ ಮತ್ತು ಗಂಗಮ್ಮ ದಂಪತಿಯ 3 ದಿನದ ಗಂಡು ಮಗುವಿಗೆ ಹೃದಯದಲ್ಲಿ ರಂಧ್ರ ಇರುವ ಬಗ್ಗೆ ಕಲಬುರಗಿ ಜಿಲ್ಲಾಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ಚಿಕಿತ್ಸೆಗಾಗಿ ಬೆಂಗಳೂರಿಗೆ ಮಗುವನ್ನು ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ‘ಸೀರೆ ಬಿಚ್ಚಿ ಹೊಡಿತೀನಿ’ ಎಂದು ಮಹಿಳೆಗೆ ಅವಾಜ್: ಸೌಂದರ್ಯ ಜಗದೀಶ್ ಪುತ್ರ, ನಟ ಸ್ನೇಹಿತ್ ಮೇಲೆ ಕೇಸ್
Advertisement
Advertisement
ಆದರೆ ಮಗುವನ್ನು ಸರ್ಕಾರಿ ಆಸ್ಪತ್ರೆಯಿಂದ ಬೆಂಗಳೂರಿಗೆ ಕರೆದೊಯ್ಯಲು ಅಂಬುಲೆನ್ಸ್ ಸೇವೆ ನಿರಾಕರಿಸುತ್ತಿದ್ದಾರೆ. ಖಾಸಗಿ ಅಂಬುಲೆನ್ಸ್ನಲ್ಲಿ ಕರೆದ್ಯೊಯಲು 25 ಸಾವಿರ ರೂ. ಬೇಕು ನಮ್ಮ ಬಳಿ ಅಷ್ಟೊಂದು ಹಣ ಇಲ್ಲ ಎಂದು ಬಡ ದಂಪತಿ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಕಾಬೂಲ್ ಶಿಕ್ಷಣ ಕೇಂದ್ರದಲ್ಲಿ ಬಾಂಬ್ ಸ್ಫೋಟ – 19 ಮಂದಿ ದುರ್ಮರಣ