ರಾಮನಗರ: ಹೊಸ ವರ್ಷದ ಸಂಭ್ರಮಾಚರಣೆ ಎಂದರೆ ಏನೇ ಪಾರ್ಟಿ ಆಯೋಜಿಸಿದ್ರೂ ಎಣ್ಣೆ ಬೇಕೇ ಬೇಕು. ಅಬ್ಬರದ ಪಾರ್ಟಿಗೆ ಹೋಗುವುದಕ್ಕೆ ಆಗಲ್ಲ ಎಂದರೂ ಸ್ನೇಹಿತರ ಜೊತೆ ಮದ್ಯ ಪಾರ್ಟಿ ಮಾಡಲೇಬೇಕು. ಹಾಗಾಗಿಯೇ ನ್ಯೂ ಇಯರ್ ನೆಪದಲ್ಲಿ ಕುಡಿದು-ಕುಣಿದು ಕುಪ್ಪಳಿಸುವ ಯುವ ಸಮೂಹವನ್ನೇ ಗುರಿಯಾಗಿಸಿಕೊಂಡಿರುವ ಅಬಕಾರಿ ಇಲಾಖೆ, ವರ್ಷಾಚರಣೆಗೆ ಭರ್ಜರಿ ಎಣ್ಣೆ ವ್ಯಾಪಾರ ನಡೆಸಿದೆ.
ಪ್ರತಿನಿತ್ಯ ಮಾರಾಟ ಮಾಡುತ್ತಿದ್ದ ಮದ್ಯ ಪ್ರಮಾಣಕ್ಕಿಂತ ಹೆಚ್ಚುವರಿಯಾಗಿಯೇ ಡಿ.31ರ ರಾತ್ರಿ ವ್ಯಾಪಾರ ನಡೆಸಿದೆ. ಒಂದೇ ರಾತ್ರಿ 3,25,60,134 ರೂ. ಮೌಲ್ಯದ ಮದ್ಯ ವ್ಯಾಪಾರ ನಡೆಸಿದೆ. ಆದರೆ 2018ರ ಡಿ. 31ರ ರಾತ್ರಿ ಸೇಲ್ ಆಗಿದ್ದ ಎಣ್ಣೆಗಿಂತ ಈ ಬಾರಿ 11 ಲಕ್ಷ ರೂ. ಮೌಲ್ಯದಷ್ಟು ಕಡಿಮೆ ಎಣ್ಣೆ ಸೇಲ್ ಆಗಿದೆ.
Advertisement
Advertisement
2020 ಹೊಸ ವರ್ಷಾಚರಣೆ ಕುಡುಕರ ಪಾಲಿಗೆ ಕಿಕ್ ಕೊಂಚ ಪ್ರಮಾಣ ಕಡಿಮೆಯಾಗಿತ್ತು ಎನ್ನಬಹುದು. ಅದರಲ್ಲೂ ಸ್ವಲ್ಪ ಚಳಿಗಾಲದ ಎಫೆಕ್ಟ್ ಬಿಯರ್ ಸ್ವಲ್ಪ ಕಡಿಮೆ ಸೇಲ್ ಆಗುವಂತೆ ಮಾಡಿದೆ. ಹೊಸ ವರ್ಷವನ್ನು ಬರಮಾಡಿಕೊಂಡ ರಾಮನಗರ ಸೇರಿದಂತೆ ಜಿಲ್ಲೆಯ ಎಲ್ಲಾ ಮದ್ಯದಂಗಡಿಗಳಲ್ಲಿ ಮುಗಿಬಿದ್ದು ಕೇಸ್ ಗಟ್ಟಲ್ಲೇ ಮದ್ಯ ಮತ್ತು ಬಿಯರ್ ಬಾಟಲ್‍ಗಳನ್ನು ಖರೀದಿ ಮಾಡಿದ ಮದ್ಯ ಪ್ರಿಯರು, ಹೊಸ ವರ್ಷವನ್ನು ಅದ್ಧೂರಿಯಾಗಿ ಪಾರ್ಟಿ ಮಾಡುವ ಮೂಲಕ ಆಚರಿಸಿದ್ದಾರೆ.
Advertisement
ಕಳೆದ ಎರಡು ದಿನಗಳಲ್ಲಿ ಪಾನೀಯ ನಿಗಮದಿಂದ ಎಲ್ಲಾ ಬಾರ್ & ರೆಸ್ಟೊರೆಂಟ್ ಮತ್ತು ಮದ್ಯದಂಗಡಿಗಳು ಬರೋಬ್ಬರಿ 3.25 ಕೋಟಿ ರೂ. ಮೌಲ್ಯದ ಮದ್ಯ ಖರೀದಿ ಮಾಡಿ ಮಾರಾಟ ಮಾಡಿವೆ. ಇದನ್ನು ಇತರೆ ದಿನಕ್ಕೆ ಹೋಲಿಸಿದರೆ, ಮದ್ಯದ ಪ್ರಮಾಣ ಶೇ.55ರಷ್ಟು ಏರಿಕೆಯಾಗಿದೆ ಎನ್ನಬಹುದು.