ಅಗರ್ತಲಾ: ತ್ರಿಪುರಾಕ್ಕೆ ಪ್ರವೇಶಿಸಿದ ಮೂವರು ಬಾಂಗ್ಲಾದೇಶದ ಮಹಿಳೆಯರನ್ನು 2020ರ ಮಾರ್ಚ್‍ನಲ್ಲಿ ಬಂಧಿಸಲಾಗಿತ್ತು. ಆದರೆ ಭಾನುವಾರ ಈ ಮೂವರು ಮಹಿಳೆಯರು ಉತ್ತರ ತ್ರಿಪುರಾದ ಯುನೊಕೋಟಿ ಜಿಲ್ಲಾಡಳಿತದ ಕಸ್ಟಡಿಯಿಂದ ನಾಪತ್ತೆಯಾಗಿದ್ದಾರೆ.
ಬಾಂಗ್ಲಾದೇಶದ ಹಬಿಗಂಜ್ ಜಿಲ್ಲೆಯ ನಬಿಗಂಜ್ ನಿವಾಸಿಗಳಾದ ಇಸ್ತಮುರ್ ಅಲಿ ಮತ್ತು ಲಾಲ್ಮತಿ ರಾಣಿ ಸರ್ಕಾರ್, ಜನತಾ ರಾಣಿ ಸರ್ಕಾರ್ ಮತ್ತು ಖೇಲಾ ರಾಣಿ ಸರ್ಕಾರ್ ಅವರನ್ನು ಮಾರ್ಚ್ 2020ರಲ್ಲಿ ತ್ರಿಪುರಾಕ್ಕೆ ಪ್ರವೇಶಿಸಿದ್ದಕ್ಕಾಗಿ ಕೈಲಾಶಹರ್‍ನ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಶ್ರೀಕಾಕುಳಂನ ರೈಲು ಅಪಘಾತಕ್ಕೆ ಐವರು ಬಲಿ
Advertisement
Advertisement
ಮೂವರು ಮಹಿಳೆಯರು ಯಾವುದೇ ಪಾಸ್‍ಪೋರ್ಟ್ ಇಲ್ಲದೇ ನೆರೆಯ ಅಸ್ಸಾಂಗೆ ಹೋಗಲು ಯತ್ನಿಸಿದ್ದರು. ಹಾಗಾಗಿ ಮೂವರನ್ನು ಬಂಧಿಸಲಾಗಿತ್ತು. ಏಳು ತಿಂಗಳ ಹಿಂದೆ ಅವರ ಜೈಲು ಶಿಕ್ಷೆ ಮುಗಿದ ನಂತರ, ಎಲ್ಲಾ ನಾಲ್ವರು ಬಾಂಗ್ಲಾದೇಶಿಯರನ್ನು ಯುನೋಕೋಟಿ ಜಿಲ್ಲಾಡಳಿತದ ವಶದಲ್ಲಿದ್ದರು. ಭಾನುವಾರ ಅವರನ್ನು ಅವರ ದೇಶಕ್ಕೆ ವಾಪಸ್ ಕಳುಹಿಸಲು ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದರೆ ಅಷ್ಟರಲ್ಲಿ ಕಸ್ಟಡಿಯಿಂದ ಕಾಲ್ಕೆತ್ತಿದ್ದಾರೆ. ಇದೀಗ ಪರಾರಿಯಾಗಿರುವ ಮೂವರು ವಿದೇಶಿ ಮಹಿಳೆಯರಿಗಾಗಿ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಅಗರ್ತಲಾದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಠಾಣೆಯಲ್ಲೇ ಕರ್ತವ್ಯನಿರತ ಹೆಡ್ ಕಾನ್ಸ್‌ಟೇಬಲ್ ಸಾವು