– ಬ್ಯಾಡಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಈಗಿನಿಂದಲೇ ಸಿದ್ಧತೆ
– ಮಾರ್ಚ್ 6ವರೆಗೆ ಆರೋಪಿಗಳು ಪೊಲೀಸ್ ಕಸ್ಟಡಿಗೆ
ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ (Pakistan Zindabad) ಪರ ಘೋಷಣೆ ಕೂಗಿ ಬಂಧನಕ್ಕೆ ಒಳಗಾದ ಬ್ಯಾಡಗಿ ಮೆಣಸಿಕಾಯಿ ವ್ಯಾಪಾರಿ ಮೊಹಮ್ಮದ್ ಶಫಿ ನಾಶಿಪುಡಿ (Mohammed Nashipudi) ಕೋಟ್ಯಂತರ ರೂ. ವ್ಯವಹಾರ ಮಾಡುತ್ತಿರುವ ವಿಚಾರ ಪೊಲೀಸ್ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
Advertisement
ಹೌದು. ಧ್ವನಿ ಪರೀಕ್ಷೆಗೆ (Voice Test) ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಮಯದಲ್ಲಿ ಪೊಲೀಸರ ಮುಂದೆ ನಾಶಿಪುಡಿ, ಸರ್ ನಾನು ನೂರಾರು ಕೋಟಿ ರೂ.ಗೆ ಬಾಳ್ತೀನಿ. ನಾನು ಪಾಕ್ ಪರ ಘೋಷಣೆ ಕೂಗಿಲ್ಲ ಎಂದು ಹೇಳಿದ್ದ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಮೂವರನ್ನು ಯಾಕೆ ಅರೆಸ್ಟ್ ಮಾಡಿದ್ದಾರೆ ಗೊತ್ತಿಲ್ಲ: ಪ್ರಿಯಾಂಕ್ ಖರ್ಗೆ
Advertisement
Advertisement
ನಾಸೀರ್ ಹುಸೇನ್ ಬೆಂಬಲಿಗನಾಗಿದ್ದ ನಾಶಿಪುಡಿ, ಮುಂದಿನ ಬಾರಿ ಬ್ಯಾಡಗಿ ವಿಧಾನಸಭಾ ಕ್ಷೇತ್ರದಿಂದ (Byadgi Vidhan Sabha Constituency) ಸ್ಪರ್ಧಿಸಲು ಈಗಿನಿಂದಲೇ ಸಿದ್ಧತೆ ಸಹ ನಡೆಸಿದ್ದ. ನಾಶಿಪುಡಿ ಕುಟುಂಬ ಸುಮಾರು 50 ವರ್ಷಗಳಿಂದ ಮೆಣಸಿನಕಾಯಿ ವ್ಯಾಪಾರ ಮಾಡಿಕೊಂಡು ಬಂದಿದೆ. ಆದರೆ ವಿಧಾನಸೌಧದಲ್ಲಿ ನಡೆದ ವಿಜಯೋತ್ಸವ ಕಾರ್ಯಕ್ರಮದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪದ ಎ1 ಆರೋಪಿಯಾಗಿ ಮಹಮ್ಮದ್ ಶಫಿ ನಾಶಿಪುಡಿ ಅರೆಸ್ಟ್ ಆಗಿದ್ದಾನೆ.
Advertisement
3 ದಿನ ಪೊಲೀಸ್ ಕಸ್ಟಡಿಗೆ:
ಕೋರಮಂಗಲದ 39ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶರ ಮುಂದೆ ಬಂಧಿತ ಮೂವರನ್ನು ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿ ನೀಡಿ ಆದೇಶ ನೀಡಿದ್ದಾರೆ. ಮಾರ್ಚ್ 6 ರವರೆಗೂ ಕಸ್ಟಡಿಗೆ ಪಡೆದಿರುವ ವಿಧಾನಸೌಧ ಪೊಲೀಸರು ಮೂವರನ್ನು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಖಾಸಗಿ ಫೋರೆನ್ಸಿಕ್ ವರದಿ ತರಿಸಿ ಬಹಿರಂಗಪಡಿಸಿದ ಬಿಜೆಪಿ ನಡೆ ದೇಶದ್ರೋಹದ ಕೆಲಸ: ಪ್ರಿಯಾಂಕ್ ಖರ್ಗೆ
ಬಂಧಿತ ಮೂವರ ಪೈಕಿ ನಾಶೀಪುಡಿ, ಮುನಾವರ್ ಸ್ನೇಹಿತರಾಗಿದ್ದರೆ ಮಹಮ್ಮದ್ ಇಲ್ತಾಜ್‌ಗೂ ಇಬ್ಬರು ಆರೋಪಿಗಳಿಗೂ ಪರಿಚಯವಿಲ್ಲ. ಬಂಧಿತ ಮೂವರ ಮೊಬೈಲನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲು ಪೊಲೀಸರು ಈಗ ಮುಂದಾಗಿದ್ದಾರೆ.
ಎಫ್‌ಎಸ್‌ಎಲ್ ವರದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದು ದೃಢಪಡುತ್ತಿದ್ದಂತೆ ವಿಧಾನಸೌಧ ಪೊಲೀಸರು 40ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಿ 15 ಮಂದಿ ಧ್ವನಿಯ ಮಾದರಿಯನ್ನು ಸಂಗ್ರಹಿಸಿದ್ದರು. ಸೋಮವಾರ ಮಧ್ಯಾಹ್ನ ಪೊಲೀಸರ ಕೈಗೆ ಎಫ್‌ಎಸ್‌ಎಲ್ ವರದಿ ಸೇರುತ್ತಿದ್ದಂತೆ ಘೋಷಣೆ ಕೂಗಿದ ಮೂವರನ್ನು ಬಂಧಿಸಲಾಗಿದೆ.
ಸದ್ಯ ಮೂವರನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳ ಪೂರ್ವ ಪರ ಏನು? ಅವರ ಉದ್ದೇಶ ಏನಾಗಿತ್ತು? ಈ ವೇಳೆ ಬೇರೆ ಯಾರಾದರೂ ಇವರಿಗೆ ಬೆಂಬಲ ನೀಡಿದ್ರಾ? ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಆಕಸ್ಮಿಕವೇ? ಅಥವಾ ಉದ್ದೇಶ ಪೂರ್ವಕವೇ ಎಂಬುದನ್ನು ಪರಿಶೀಲನೆ ನಡೆಸಲಿದ್ದಾರೆ..
ಬಂಧನಕ್ಕೆ ಒಳಗಾದವರು ಯಾರು?
* ಎ1- ಮೊಹಮ್ಮದ್ ಶಾಫಿ ನಾಶಿಪುಡಿ: 45 ವರ್ಷ, ಬ್ಯಾಡಗಿ
* ಎ2- ಮುನಾವರ್ ಅಹ್ಮದ್ : 29 ವರ್ಷ, ಜಯಮಹಲ್, ಬೆಂಗಳೂರು
* ಎ3- ಮೊಹಮ್ಮದ್ ಇಲ್ತಾಜ್; 31 ವರ್ಷ, ಕಿಶಾನ್‌ಗಂಜ್, ದೆಹಲಿ