ಬೆಂಗಳೂರು: ನೋಟ್‍ಬ್ಯಾನ್ ಆಗಿ ಬುಧವಾರ ಒಂದು ವರ್ಷ ಪೂರೈಸುತ್ತಿರೋ ಹೊತ್ತಲ್ಲೇ ಆನೇಕಲ್ ಬಳಿ ಖೋಟಾನೋಟು ದಂಧೆ ನಡೆಸುತ್ತಿದ್ದ ವಿಚಾರ ಬಯಲಾಗಿದೆ. ಖೋಟಾ ನೋಟು ಮುದ್ರಿಸುತ್ತಿದ್ದ 3 ಆರೋಪಿಗಳನ್ನ ಕೇರಳ ಪೊಲೀಸರು ಆನೇಕಲ್ ತಾಲೂಕಿನ ಚಂದಾಪುರ ಸಮೀಪದ ರಾಮಸಾಗರದಲ್ಲಿ ಬಂಧಿಸಿದ್ದಾರೆ.
Advertisement
ಓಲ್ಡ್ ಜೋಸೆಫ್(30)ಖೋಟಾ ನೋಟು ಪ್ರಿಂಟ್ ಮಾಡುತಿದ್ದ. ಬಂಧಿತ ಆರೋಪಿಗಳು ಕೇರಳ ಮೂಲದವರಾಗಿದ್ದಾರೆ. ರಾಮಸಾಗರದ ನಾರಾಯಣ ರೆಡ್ಡಿ ಎಂಬವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಸೀರೆ ವ್ಯಾಪಾರ ಮಾಡುವುದಾಗಿ ಮನೆ ಬಾಡಿಗೆ ಪಡೆದಿದ್ದರು ಎಂದು ತಿಳಿದುಬಂದಿದೆ.
Advertisement
Advertisement
ಬಂಧಿತರು ಹೊಸ 2000 ಸಾವಿರ ರೂ. ಹಾಗು 500 ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸುತ್ತಿದ್ದರು. ಸದ್ಯ ಕೇರಳ ಪೊಲೀಸರು ಮೂವರು ಆರೋಪಿಗಳನ್ನ ಬಂಧಿಸಿದ್ದು, ಸುಮಾರು 50 ಲಕ್ಷ ರೂ. ಖೋಟಾ ನೋಟು ಹಾಗು ಪ್ರಿಂಟಿಂಗ್ ಮಿಷೀನ್ ವಶಕ್ಕೆ ಪಡೆದಿದ್ದಾರೆ.
Advertisement
ಆನೇಕಲ್ ತಾಲೂಕಿನ ಸೂರ್ಯ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.