ಬೆಂಗಳೂರು: ವಿದೇಶದಿಂದ ದುಬಾರಿ ಬೆಲೆ ಗಾಂಜಾ ಬೀಜ ತಂದು ಅಪಾರ್ಟ್ಮೆಂಟ್ ಟಾಯ್ಲೆಟಿನಲ್ಲಿ ಗಾಂಜಾ ಬೆಳೆಯುತ್ತಿದ್ದ ಖತರ್ನಾಕ್ ಆಸಾಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪಶ್ಚಿಮ ಬಂಗಾಳ ಮೂಲದ ಅಮುತ್ರ್ಯ ರಿಷಿ, ಆದಿತ್ಯಕುಮಾರ್, ಮಂಗಲ್ ಬಂಧಿತ ಆರೋಪಿಗಳು. ಆರೋಪಿ ರಿಷಿ ನಗರದ ಖಾಸಗಿ ವಿಶ್ವ ವಿದ್ಯಾಲಯದಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದು, ಉಳಿದ ಆರೋಪಿಗಳು ವಿದ್ಯಾರ್ಥಿಗಳ ಹೆಸರಲ್ಲಿ ಕೆಂಗೇರಿಯ ಅಪಾರ್ಟ್ಮೆಂಟ್ ನಲ್ಲಿ ಮನೆ ಪಡೆದಿದ್ದರು.
Advertisement
Advertisement
ಮೋಜಿನ ಜೀವನ ನಡೆಸಲು ಮುಂದಾಗಿದ್ದ ಆರೋಪಿಗಳು ತಾವು ವಾಸವಿದ್ದ ಮನೆಯ ಟಾಯ್ಲೆಟಿನಲ್ಲಿ ಕೃತಕ ಎಲ್‍ಇಡಿ ಬಳಸಿ ಹೂವಿನ ಕುಂಡದಲ್ಲಿ ಗಾಂಜಾ ಸಸಿಗಳನ್ನು ಬೆಳೆಸುತ್ತಿದ್ದರು. ಈ ಬೀಜಗಳನ್ನು ಆರೋಪಿಗಳು ನೆದರ್ ಲ್ಯಾಂಡ್ ನಿಂದ ಆನ್‍ಲೈನ್ ಮೂಲಕ ಖರೀದಿ ಮಾಡಿದ್ದರು.
Advertisement
ಅಪಾರ್ಟ್ಮೆಂಟ್ ನಲ್ಲಿ ಬೆಳೆಯುತ್ತಿದ್ದ ಗಾಂಜಾವನ್ನು ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಮಾರಾಟ ಮಾಡುತ್ತಿದ್ದರು. ದುಬಾರಿ ಬೆಲೆಯ ಹೈಡ್ರೋ ಗಾಂಜಾ ಪ್ರತಿ ಗ್ರಾಂಗೆ 5 ರಿಂದ 6 ಸಾವಿರಕ್ಕೆ ಆರೋಪಿಗಳು ಮಾರಾಟ ಮಾಡುತ್ತಿದ್ದರು ಎಂಬ ಮಾಹಿತಿ ಲಭಿಸಿದ್ದು, ಪ್ರಕರಣದ ಪ್ರಮುಖ ಆರೋಪಿ ರಿಷಿ ವಿದೇಶದಿಂದ ಬೀಜಗಳನ್ನು ಖರೀದಿ ಮಾಡಿ ಆನ್ ಲೈನ್‍ಬಿಟ್ ಕಾಯಿನ್ ಮೂಲಕ ವ್ಯವಹಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.