ದುಬೈ: ಭಾರತದ ಅತಿ ದೊಡ್ಡ ಆನ್ ಲೈನ್ ಎಜುಕೇಷನ್ ಸ್ಟಾರ್ಟ್ ಅಪ್ ಬೆಂಗಳೂರು ಮೂಲದ ಬೈಜೂಸ್ 3 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯ( ಐಸಿಸಿ)ಟೂರ್ನಿಯನ್ನು ಪ್ರಾಯೋಜಿಸಲಿದೆ.
2021 ರಿಂದ 2023ರವರೆಗೆ ಬೈಜೂಸ್ ನಮ್ಮ ನಮ್ಮ ಜಾಗತಿಕ ಪಾಲುದಾರ ಎಂದು ಐಸಿಸಿ ಸೋಮವಾರ ಪ್ರಕಟಿಸಿದೆ.
Advertisement
Advertisement
ಈ ಅವಧಿಯಲ್ಲಿ ಮುಂದೆ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್, ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಮಹಿಳಾ ವಿಶ್ವಕಪ್ ಟೂರ್ನಿಯ ಪ್ರಾಯೋಜಕತ್ವವನ್ನು ಬೈಜೂಸ್ ಪಡೆದಿದೆ. ಪ್ರಾಯೋಜಕತ್ವದ ಜೊತೆ ಐಸಿಸಿ ಟೂರ್ನಿಯ ಬ್ರಾಡ್‌ಕಾಸ್ಟ್ ಮತ್ತು ಡಿಜಿಟಲ್ ಹಕ್ಕುಗಳನ್ನು ಪಡೆದಿದೆ.
Advertisement
ಬೈಜೂಸ್ ಸಂಸ್ಥಾಪಕ ಮತ್ತು ಸಿಇಒ ಬೈಜು ರವೀಂದ್ರನ್ ಪ್ರತಿಕ್ರಿಯಿಸಿ, ಜಾಗತಿಕ ವೇದಿಕೆಯಲ್ಲಿ ನಮ್ಮ ರಾಷ್ಟ್ರವನ್ನು ಪ್ರತಿನಿಧಿಸುವುದು ಭಾರತೀಯ ಕಂಪನಿಯಾಗಿ ನಮಗೆ ಹೆಮ್ಮೆಯ ವಿಷಯ. ವಿಶ್ವಾದ್ಯಂತ ಕ್ರಿಕೆಟ್ ಶತಕೋಟಿ ಜನರನ್ನು ಪ್ರೇರೇಪಿಸಿದಂತೆಯೇ, ನಾವು ಸಹ ಒಂದು ಕಲಿಕೆಯ ಕಂಪನಿಯಾಗಿ ಪ್ರತಿ ಮಗುವಿನ ಜೀವನದಲ್ಲಿ ಕಲಿಕೆಯನ್ನು ಪ್ರೇರೇಪಿಸುತ್ತಿದ್ದೇವೆ ಎಂದು ಭಾವಿಸುತ್ತೇವೆ ಎಂದು ಹೇಳಿದ್ದಾರೆ.
Advertisement
ಭಾರತೀಯ ಕ್ರಿಕೆಟ್ ತಂಡದ ಜೆರ್ಸಿ ಹಕ್ಕನ್ನು 2017 ಮಾರ್ಚ್ ತಿಂಗಳಲ್ಲಿ ಐದು ವರ್ಷಗಳ ಅವಧಿಗಾಗಿ ಬರೋಬ್ಬರಿ 1079 ಕೋಟಿ ರೂಪಾಯಿ ನೀಡಿ ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ ಒಪ್ಪೋ ಬಿಡ್ ಗೆದ್ದಿತ್ತು. ಆದರೆ ಅನೇಕ ಕಾರಣಗಳಿಂದಾಗಿ ಒಪ್ಪೋ ತನ್ನ ಬಿಡ್ ಹಕ್ಕನ್ನು ಬೈಜೂಸ್‌ಗೆ ನೀಡಿತ್ತು. 2019ರಿಂದ ಬೈಜೂಸ್ ಟೀಂ ಇಂಡಿಯಾದ ಜೆರ್ಸಿ ಪಾಲುದಾರವಾಗಿದೆ.