ಚಿತ್ರದುರ್ಗ: ಎರಡನೇ ಹಂತದ ಪರೀಕ್ಷೆ ಬಳಿಕ ಹಿರಿಯೂರಿನ ಖ್ಯಾತ ಕಾದಂಬರಿಕಾರ ಡಿ.ಸಿ.ಪಾಣಿ 3ನೇ ಹಂತದ ಲಸಿಕೆ ಪರೀಕ್ಷೆಗೆ ಒಳಗಾಗಿದ್ದು, ಅಂತಿಮ ಹಂತದ ಪರೀಕ್ಷೆ ಬಳಿಕ ಅಂದರೆ ಇನ್ನೆರೆಡು ತಿಂಗಳಲ್ಲಿ ಕೋವಾಕ್ಸಿನ್ ಲಭ್ಯವಾಗುವ ಸಾಧ್ಯತೆ ಇದೆಯಾ ಎಂಬ ಪ್ರಶ್ನೆ ಇದೀಗ ಮೂಡಿದೆ.
Advertisement
ಕೋವಾಕ್ಸಿನ್ ಲಸಿಕೆಯ ಅಂತಿಮ ಹಂತದ ಪ್ರಯೋಗ ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆಯಲ್ಲಿ ನಡೆಯಿತು. ಈ ಪ್ರಯೋಗಕ್ಕೆ ಒಳಗಾಗಿರುವ ಜಿಲ್ಲೆಯ ಹಿರಿಯೂರು ಪಟ್ಟಣದ ಖ್ಯಾತ ಕಾದಂಬರಿಕಾರ ಡಿ.ಸಿ ಪಾಣಿಯವರು ಇನ್ನೆರೆಡು ತಿಂಗಳಲ್ಲಿ ಕೋವಾಕ್ಸಿನ್ ಲಭ್ಯವಾಗುವ ಸಾಧ್ಯತೆ ಇದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
Advertisement
ಅಕ್ಟೋಬರ್ 14ರಂದು ನನಗೆ 3ನೇ ಹಂತದ ಲಸಿಕೆ ಪ್ರಯೋಗ ಮಾಡಲಾಯಿತು. ಇದೇ ಕೊನೆಯ ಪ್ರಯೋಗವಾಗಿದೆ. ಪ್ರಥಮ ಬಾರಿಗೆ ಆಗಸ್ಟ್ 16ರಂದು ಮೊದಲ ಹಂತ ಹಾಗೂ ಸೆಪ್ಟೆಂಬರ್ 29ರಂದು 2ನೇ ಹಂತದ ಲಸಿಕೆ ಪ್ರಯೋಗ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ನನ್ನ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಹೀಗೆ ಯಶಸ್ವಿಯಾಗಿದ್ದರಿಂದ ಇನ್ನು 15 ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯೋಗ ನಡೆಯಬಹುದು ಎಂದು ಹೇಳಿದ್ದಾರೆ.
Advertisement
ದೇಶ ಕೋವಿಡ್ ನಿಂದಾಗಿ ಕಂಗಾಲಾಗಿರುವ ಹಿನ್ನೆಲೆ ಸ್ವತಃ ನಾನೇ ಪರೀಕ್ಷೆಗೆ ಒಳಗಾಗಬೇಕು ಎಂಬ ಉದ್ದೇಶದಿಂದ ಪ್ರಯೋಗಕ್ಕೆ ಒಳಗಾದೆ. ಈವರೆಗೆ ಸರ್ಕಾರ ನೀಡುವ ಯಾವುದೇ ಸೌಕರ್ಯನ್ನು ಪಡೆದಿಲ್ಲ ಎಂದು ತಿಳಿಸಿದ್ದಾರೆ.
ಕೋವಾಕ್ಸಿನ್ ಹೆಸರಿನ ಲಸಿಕೆಯನ್ನು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಕಂಡುಹಿಡಿದಿದೆ. ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಮತ್ತು ರಾಷ್ಟ್ರೀಯ ವೈರಾಲಜಿ ಇನ್‍ಸ್ಟಿಟ್ಯೂಟ್(ಎನ್‍ಐವಿ) ಸಹಭಾಗಿತ್ವದಲ್ಲಿ ಲಸಿಕೆಯನ್ನು ಅಭಿವೃದ್ಧಿ ಪಡಿಸಿದೆ.