ಬೆಂಗಳೂರು: 50% ರಿಯಾಯಿತಿ ದರದಲ್ಲಿ ಟ್ರಾಫಿಕ್ ಫೈನ್ ಕಟ್ಟುವುದಕ್ಕೆ ಸರ್ಕಾರ 2ನೇ ಅವಧಿಗೆ ಅವಕಾಶ ನೀಡಿದೆ. ಆದರೆ ದಂಡ ಕಟ್ಟಲು ಈ ಬಾರಿ ವಾಹನ ಸವಾರರು ಹೆಚ್ಚಾಗಿ ಆಸಕ್ತಿ ತೋರುತ್ತಿಲ್ಲ.
ಟ್ರಾಫಿಕ್ ಫೈನ್ (Traffic Fine) 50% ರಿಯಾಯಿತಿಯ (Discount) ಸಮಯವನ್ನು 2 ಅವಧಿಗೆ ವಿಸ್ತರಿಸಿರುವ ಆದೇಶ ಹೊರಡಿಸಿ ವಾರ ಕಳೆದರೂ, ಈವರೆಗೆ 1 ಲಕ್ಷ 74 ಸಾವಿರ ಕೇಸ್‌ಗಳಲ್ಲಿ ಕೇವಲ 5 ಕೋಟಿ ದಂಡ ಕಟ್ಟಿ ಜನ ನಿರ್ಲಕ್ಷ್ಯ ವಹಿಸಿದ್ದಾರೆ. ಮೊದಲ ಬಾರಿಗೆ ರಿಯಾಯಿತಿ ದರದಲ್ಲಿ ದಂಡಕ್ಕೆ ಸರ್ಕಾರ ಅವಕಾಶ ಕೊಟ್ಟಾಗ 9 ದಿನಗಳಲ್ಲಿ 43 ಲಕ್ಷ ಕೇಸ್‌ಗಳನ್ನು ಕ್ಲೀಯರ್ ಮಾಡಿ 126 ಕೋಟಿ ದಂಡ ಕಟ್ಟಿದ್ದರು. ಈ ವೇಳೆ ಪ್ರತಿಬಾರಿ ಉದ್ದುದ್ದ ಕ್ಯೂ ನಿಂತು ದಂಡ ಕಟ್ಟುತ್ತಿದ್ದ ಜನರೀಗ 2ನೇ ಅವಧಿಗೆ ಸರ್ಕಾರ ನೀಡಿರುವ 15 ದಿನದ ಅವಕಾಶಕ್ಕೆ ಡೋಂಟ್‌ಕೇರ್ ಎನ್ನುವಂತೆ ವರ್ತಿಸುತ್ತಿದ್ದಾರೆ. ಇದನ್ನೂ ಓದಿ: ಸಾಮೂಹಿಕ ಮದುವೆಯಲ್ಲಿ ವಧುವಿಗೆ ಸೀಮೆ ಹಸು, ವರನಿಗೆ ಕೊಳವೆ ಬಾವಿ ಆಫರ್
Advertisement
Advertisement
2ನೇ ಬಾರಿ 50% ರಿಯಾಯಿತಿ ದರದಲ್ಲಿ ದಂಡ ಕಟ್ಟಲು 8 ದಿನವಷ್ಟೇ ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಕೊನೆ ಕ್ಷಣದಲ್ಲಿ ವಾಹನ ಸವಾರರು ದಂಡ ಕಟ್ಟಲು ಮುಂದಾಗಬಹುದು ಎನ್ನುವ ನೀರಿಕ್ಷೆಯಲ್ಲಿ ಅಧಿಕಾರಿಗಳು ಇದ್ದಾರೆ. ಇದನ್ನೂ ಓದಿ: ವೋಟಿಗಾಗಿ ಫ್ರೀ ಸ್ಕೀಂಗಳ ಆಮಿಷ- ಉಚಿತ ಸೈಟ್ ನೀಡಲು ಮುಂದಾದ ಬಿಜೆಪಿ ಟಿಕೆಟ್ ಆಕಾಂಕ್ಷಿ