ಪೋರ್ಟ್ ಆಫ್ ಸ್ಪೈನ್: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ 105 ರನ್‍ಗಳಿಂದ ಜಯಿಸಿದ್ದರೂ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಎಡವಟ್ಟು ಮಾಡಿಕೊಂಡಿದ್ದಾರೆ.
ನಾಲ್ಕನೇಯವರಾಗಿ ಕ್ರೀಸ್ ಗೆ ಆಗಮಿಸಿದ ಯುವರಾಜ್ ಸಿಂಗ್ ಈ ಪಂದ್ಯಕ್ಕೆ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಧರಿಸಿದ್ದ ಜೆರ್ಸಿ ಧರಿಸಿ ಅಂಗಳಕ್ಕೆ ಇಳಿದಿದ್ದರು. ಹಾರ್ದಿಕ್ ಪಾಂಡ್ಯಾ ಔಟಾದ ಕೂಡಲೇ ಕ್ರೀಸ್ ಗೆ ಆಗಮಿಸಿದ ಯುವಿ 14 ರನ್(10 ಎಸೆತ, 1 ಬೌಂಡರಿ)ಸಿಡಿಸಿ 39ನೇ ಓವರ್‍ನಲ್ಲಿ ಔಟಾದರು.
Advertisement
ಟೂರ್ನ್ ಮೆಂಟ್‍ಗಳಲ್ಲಿ ಟೂರ್ನಿಯ ಲೋಗೋ ಇರುವ ಜೆರ್ಸಿಯನ್ನು ಆಟಗಾರರು ಧರಿಸಬೇಕು ಎನ್ನುವ ನಿಯಮವಿದ್ದರೆ, ಎರಡು ದೇಶಗಳ ಮಧ್ಯೆ ನಡೆಯುವ ಪಂದ್ಯಗಳಲ್ಲಿ ಕ್ರಿಕೆಟ್ ಮಂಡಳಿ ಆಟಗಾರರಿಗೆ ನೀಡಿದ ಜೆರ್ಸಿಗಳನ್ನು ಧರಿಸಬೇಕು. ಹೀಗಾಗಿ ಪಂದ್ಯದಲ್ಲಿ ಯುವಿ ಚಾಂಪಿಯನ್ಸ್ ಟ್ರೋಫಿ ಜೆರ್ಸಿಯನ್ನು ಧರಿಸಿ ಕಣಕ್ಕೆ ಇಳಿದಿದ್ದನ್ನು ನೋಡಿ ಟ್ವಿಟ್ಟರ್‍ನಲ್ಲಿ ಜನ ಪ್ರಶ್ನೆ ಮಾಡುತ್ತಿದ್ದಾರೆ.
Advertisement
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ 43 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 310 ರನ್ ಗಳಿಸಿತು. ವಿಂಡೀಸ್ 43 ಓವರ್ ಗಳಲ್ಲಿ 6ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತ್ತು.
Advertisement
5 ಪಂದ್ಯಗಳ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಎರಡನೇ ಪಂದ್ಯವನ್ನು ಭಾರತ ಜಯಿಸುವ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
Advertisement
ಇದನ್ನೂ ಓದಿ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‍ನಲ್ಲಿ ಹೊಸ ದಾಖಲೆ ಬರೆದ ಯುವಿ
https://twitter.com/CricketHuddle/status/879256198310240257
Why Yuvraj Singh wear Champions Trophy Jersey …..?
— Biswadeep Das (@6vikram6) June 25, 2017
@YUVSTRONG12 Sir ji apne Champions Trophy wali jersey kyun pehni hai WI tour pe??? #INDvWI #YuvrajSingh
— Keshab Kumar Rath (@KKRRath) June 25, 2017
Yuvraj Singh wore Champions Trophy jersey during second ODI against West Indies
— Govind Singh Rautela (@govind_rautela) June 26, 2017
#TeamIndia's @imkuldeep18 claimed a three-wicket haul on his ODI debut against West Indies #WIvIND pic.twitter.com/ZcDibcN4JO
— BCCI (@BCCI) June 26, 2017
#TeamIndia opener @ajinkyarahane88 celebrates his match-winning century against West Indies at Queen's Park Oval #WIvIND pic.twitter.com/dBgSAo0W8G
— BCCI (@BCCI) June 26, 2017
#WIvIND – @imkuldeep18 gets his ODI debut cap from @YUVSTRONG12 #TeamIndia pic.twitter.com/kq5RRZaWfK
— BCCI (@BCCI) June 25, 2017