IND vs SL 2nd ODI: ಜೆಫ್ರಿ ಸ್ಪಿನ್‌ ಜಾದುಗೆ ಮಂಕಾದ ಟೀಂ ಇಂಡಿಯಾ – ಲಂಕಾಗೆ 32 ರನ್‌ಗಳ ಜಯ

Public TV
2 Min Read
sri lanka ODI

– ಬ್ಯಾಟಿಂಗ್‌ ವೈಫಲ್ಯ: ಸೊನ್ನೆ ಸುತ್ತಿದ ಕೆ.ಎಲ್.ರಾಹುಲ್‌, ಶಿವಂ ದುಬೆ

ಕೊಲಂಬೊ: ಜೆಫ್ರಿ ವಾಂಡರ್ಸೆ ಸ್ಪಿನ್‌ ಮೋಡಿ ನೆರವಿನಿಂದ ಶ್ರೀಲಂಕಾ (Sri Lanka) ತಂಡವು ಟೀಂ ಇಂಡಿಯಾ (Team India) ವಿರುದ್ಧ 32 ರನ್‌ಗಳ ಜಯ ಸಾಧಿಸಿದೆ.

ಭಾನುವಾರ ಇಲ್ಲಿ ನಡೆದ 2ನೇ ಏಕದಿನ ಸರಣಿಯ ಪಂದ್ಯದಲ್ಲಿ 208 ರನ್‌ಗಳಿಗೆ ಭಾರತ ಆಲೌಟ್‌ ಆಗಿ ಲಂಕಾ ಎದುರು ಮಂಡಿಯೂರಿತು. ಪಂದ್ಯದಲ್ಲಿ ನಾಯಕ ರೋಹಿತ್‌ ಶರ್ಮಾ, ಅಕ್ಷರ್‌ ಪಟೇಲ್‌ ಹೊರತುಪಡಿಸಿ ಟೀಂ ಇಂಡಿಯಾ ಬ್ಯಾಟಿಂಗ್‌ ವೈಫಲ್ಯ ಕಂಡುಬಂತು. ಇದನ್ನೂ ಓದಿ: IND vs SL ODI: ಟೀಂ ಇಂಡಿಯಾ ಆಲೌಟ್‌; ಗೆಲುವಿಗೆ ಬೇಕಿದ್ದ 1 ರನ್‌ ಗಳಿಸಲು ವಿಫಲ – ಲಂಕಾ ವಿರುದ್ಧದ ಚೊಚ್ಚಲ ಪಂದ್ಯ ಟೈ

Jeffrey Vandersay trapped Virat Kohli in front

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಶ್ರೀಲಂಕಾ 50 ಓವರ್‌ಗೆ 9 ವಿಕೆಟ್‌ ನಷ್ಟಕ್ಕೆ 240 ರನ್‌ ಗಳಿಸಿತು. 241 ರನ್‌ ಗುರಿ ಬೆನ್ನತ್ತಿದ ಟೀಂ ಇಂಡಿಯಾ 42.2 ಓವರ್‌ಗೆ 208 ರನ್‌ ಗಳಿಸಿ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತು.

ಲಂಕಾ ಪರ ಅವಿಷ್ಕಾ ಫರ್ನಾಂಡೋ 40, ಕಾಮಿಂದು ಮೆಂಡಿಸ್ 40, ದುನಿತ್ ವೆಲ್ಲಲಾಗೆ 39, ಕುಸಾಲ್ ಮೆಂಡಿಸ್ 30, ಚರಿತ್ ಅಸಲಂಕಾ 25 ಗಳಿಸಿ ತಂಡದ ಮೊತ್ತ 200 ರ ಗಡಿ ದಾಟಲು ನೆರವಾದರು. ಟೀಂ ಇಂಡಿಯಾ ಪರ ವಾಷಿಂಗ್ಟನ್‌ ಸುಂದರ್‌ 3 ವಿಕೆಟ್‌ ಕಿತ್ತರು. ಉಳಿದಂತೆ ಕುಲದೀಪ್‌ ಯಾದವ್‌ 2, ಮೊಹಮ್ಮದ್‌ ಸಿರಾಜ್‌, ಅಕ್ಷರ್‌ ಪಟೇಲ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಸೂಪರ್‌ ಓವರ್‌ ಥ್ರಿಲ್ಲಿಂಗ್‌ – ಮೊದಲ ಎಸೆತದಲ್ಲೇ ಭಾರತಕ್ಕೆ ಗೆಲುವು – ಕ್ಲೀನ್‌ಸ್ವೀಪ್‌ನೊಂದಿಗೆ ಸರಣಿ ಜಯ

rohit sharma ODI

ಭಾರತ ತಂಡದ ಪರವಾಗಿ ನಾಯಕ ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಉತ್ತಮ ಆರಂಭ ಪಡೆದುಕೊಂಡರು. ಶರ್ಮಾ ಅರ್ಧಶತಕ ಬಾರಿಸಿ (64 ರನ್‌, 44 ಬಾಲ್‌, 5 ಫೋರ್‌, 4 ಸಿಕ್ಸರ್‌) ದೊಡ್ಡ ಹೊಡೆತಕ್ಕೆ ಮುಂದಾಗಿ ಔಟಾದರು. ಗಿಲ್‌ 35 ಹಾಗೂ ಅಕ್ಷರ್‌ ಪಟೇಲ್‌ 44 ರನ್‌ ಗಳಿಸಿದ್ದು ಬಿಟ್ಟರೆ ಭಾರತದ ಯಾವೊಬ್ಬ ಬ್ಯಾಟರ್‌ ಕೂಡ ಹೆಚ್ಚುಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಈ ಪಂದ್ಯದಲ್ಲೂ ಕೊಹ್ಲಿ ಮತ್ತೆ ವೈಫಲ್ಯ ಅನುಭವಿಸಿದರು. ಕೆ.ಎಲ್‌.ರಾಹುಲ್‌ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿದರು. ಪರಿಣಾಮವಾಗಿ ಟೀಂ ಇಂಡಿಯಾ 208 ರನ್‌ಗಳಿಗೆ ಆಲೌಟ್‌ ಆಯಿತು. ಜೆಫ್ರಿ ವಾಂಡರ್ಸೆ (6 ವಿಕೆಟ್‌), ಚರಿತ್ ಅಸಲಂಕಾ (3 ವಿಕೆಟ್‌) ಅಮೋಘ ಕೈಚಳಕದಿಂದ ಶ್ರೀಲಂಕಾ ಗೆಲುವು ದಾಖಲಿಸಿತು.

Share This Article