ಚಿತ್ರರಂಗದಲ್ಲಿ ರೇವ್ ಪಾರ್ಟಿ (Rave Party) ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಬಳಿಯ ಫಾರ್ಮ್ ಹೌಸ್‌ನಲ್ಲಿ ರೇವ್ ಪಾರ್ಟಿಯಲ್ಲಿ ಸೇರಿದ್ದ ಅನೇಕರನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿತ್ತು. ರೇವ್ ಪಾರ್ಟಿಯಲ್ಲಿ ಹೇಮಾ (Actress Hema) ಕೂಡ ಇದ್ದರು ಎಂದು ಪೊಲೀಸ್ ಕಮಿಷನರ್ ಕೂಡ ಸ್ಪಷ್ಟನೆ ನೀಡಿದ್ದರು. ತನಿಖೆ ಕೂಡ ಬಿರುಸಿನಿಂದ ನಡೆಯುತ್ತಿದೆ. ಈಗಾಗಲೇ ಅವರಿಗೆ 2ನೇ ನೋಟಿಸ್ ನೀಡಲಾಗಿದೆ. ಜೂನ್ 1ಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.
Advertisement
ಈ ನಡುವೆ ನಟಿ ಹೇಮಾ ಪರವಾಗಿ ತೆಲುಗು ಕಲಾವಿದರ ಸಂಘದ ಅಧ್ಯಕ್ಷ ವಿಷ್ಣು ಮಂಚು (Vishnu Manchu) ನಿಂತಿದ್ದಾರೆ. ಹೇಮಾರನ್ನು ಬೆಂಬಲಿಸಿ ಎಕ್ಸ್‌ನಲ್ಲಿ ವಿಷ್ಣು ಮಂಚು ಪೋಸ್ಟ್‌ವೊಂದು ಶೇರ್ ಮಾಡಿದ್ದಾರೆ. ಇತ್ತೀಚೆಗೆ ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆಯಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಮಾಧ್ಯಮಗಳು ನಟಿ ಹೇಮಾ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿವೆ. ಯಾರೂ ಸಹ ಈಗಲೇ ನಿರ್ಧಾರಕ್ಕೆ ಬಂದು ಸತ್ಯವಲ್ಲದ ವರದಿಗಳನ್ನು ಇತರರಿಗೆ ಹಂಚಿಕೊಳ್ಳುವುದು ಬೇಡ ಎಂದು ಮನವಿ ಮಾಡಿದ್ದಾರೆ.
Advertisement
Advertisement
‘ಹೇಮಾ ಮೇಲಿನ ಆರೋಪಗಳು ಸಾಬೀತಾಗುವವರೆಗೂ ಅವರು ನಿರಪರಾಧಿ. ಆಕೆ ಒಬ್ಬ ತಾಯಿ, ಹೆಂಡತಿ ಹಾಗೂ ಮಹಿಳೆ ಅದರ ಬಗ್ಗೆಯೂ ನಾವು ಯೋಚಿಸಬೇಕಿದೆ. ಆಕೆಯ ವ್ಯಕ್ತಿತ್ವದ ಬಗ್ಗೆ ಕೆಲ ಹೇಳಿಕೆಗಳನ್ನು ಪಾಸ್ ಮಾಡುವುದು ಸೂಕ್ತವಲ್ಲ. ಮೂವಿ ಆರ್ಟಿಸ್ಟ್ ಅಸೋಸಿಯೇಷನ್ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳನ್ನು ವಿರೋಧಿಸುತ್ತದೆ. ಹೇಮಾ ಅವರ ವಿರುದ್ಧ ಪೊಲೀಸರು ಘನವಾದ ಸಾಕ್ಷಿಯನ್ನು ಸಾಭೀತುಪಡಿಸಿದರೆ ಕಲಾವಿದರ ಸಂಘವು ಹೇಮಾ ವಿರುದ್ಧ ಶಿಸ್ತು ಕ್ರಮವನ್ನು ಜರುಗಿಸಲಿದೆ. ಆದರೆ ಅಲ್ಲಿಯವರೆಗೆ ದಯವಿಟ್ಟು ಈ ವಿಷಯದ ಬಗ್ಗೆ ಚರ್ಚೆ ಬೇಡ ಎಂದಿದ್ದಾರೆ. ಈ ಮೂಲಕ ನಟಿ ಹೇಮಾ ಪರವಾಗಿ ವಿಷ್ಣು ಮಂಚು ಬೆಂಬಲಕ್ಕೆ ನಿಂತಿದ್ದಾರೆ.
Advertisement
ಅಂದಹಾಗೆ, ಹೇಮಾ ಸುಮಾರು 250 ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಟಾರ್ ನಟರ ಚಿತ್ರಗಳಲ್ಲಿ ಖಾಯಂ ಪೋಷಕ ನಟಿಯಾಗಿ ಹೇಮಾ ಕೆಲಸ ಮಾಡಿದ್ದಾರೆ. ಕನ್ನಡದಲ್ಲೂ ಆಕ್ಟ್ ಮಾಡಿದ್ದ ಹೇಮಾ 2014ರಲ್ಲಿ ಪುನೀತ್ ರಾಜ್‌ಕುಮಾರ್ ನಟನೆಯ ‘ಪವರ್’ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ವಿನಯ ವಿಧೇಯ ರಾಮ, ಸನ್ ಆಫ್ ಸತ್ಯಮೂರ್ತಿ, ಡಿಕ್ಟೇಟರ್, ಅತ್ತಾರಿಂಟಿಕಿ ದಾರೇದಿ, ಮಿರ್ಚಿ, ರಭಸ, ಬೃಂದಾವನಂ, ರೆಬೆಲ್, ಜುಲಾಯ್, ಮಗಧೀರ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.