ಶಿಮ್ಲಾ: ಖಾಸಗಿ ಬಸ್‍ವೊಂದು 900 ಆಳದ ಕಂದಕಕ್ಕೆ ಬಿದ್ದ ಪರಿಣಾಮ ಸುಮಾರು 28 ಜನ ಸಾವನ್ನಪ್ಪಿದ್ದು, ಹಲವರಿಗೆ ಗಾಯವಾಗಿರುವ ಘಟನೆ ಇಂದು ಬೆಳಿಗ್ಗೆ ಶಿಮ್ಲಾದಲ್ಲಿ ನಡೆದಿದೆ.
ಕಿನ್ನೊರ್ ಜಿಲ್ಲೆಯ ರೆಕಾಂಗ್ ಪಿಯೋನಿಂದ ಸೊಲಾನ್ ಕಡೆಗೆ ಹೋಗುತ್ತಿದ್ದ ಬಸ್ ರಸ್ತೆಯಲ್ಲಿ ಸ್ಕಿಡ್ ಆಗಿ ಶಿಮ್ಲಾ ಜಿಲ್ಲೆಯ ರಾಮ್‍ಪುರ್ ಬಳಿಯ ಖಾನೇರಿ ಬಳಿ 300 ಮೀಟರ್(ಸುಮಾರು 900 ಅಡಿ) ಆಳದ ಕಂದಕಕ್ಕೆ ಬಿದ್ದಿದೆ.
Advertisement
ಈ ಅವಘಢ ಸಂಭವಿಸಿದಾಗ ಬಸ್‍ನಲ್ಲಿ ಸುಮಾರು 40 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಬಸ್ ಚಾಲಕ ಹಾಗೂ ಕಂಡಕ್ಟರ್ ಗಾಯಗೊಂಡಿದ್ದಾರೆ.
Advertisement
Latest #Visuals from HP: 28 killed, 9 injured after a bus travelling to Solan from Kinnaur rolled down a gorge near Shimla's Rampur.. pic.twitter.com/OlJx8QKCaU
— ANI (@ANI) July 20, 2017
Advertisement
ಇಂದು ಬೆಳ್ಳಂಬೆಳಗ್ಗೆ ಬಸ್ ರೆಕಾಂಗ್ ಪಿಯೋನಿಂದ ಹೊರಟಿದ್ದು, ಸುಮಾರು 9 ಗಂಟೆ ವೇಳೆಗೆ ಖಾನೇರಿ ಅಸ್ಪತ್ರೆ ಬಳಿ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ ಎಂದು ಹೇಳಲಾಗಿದೆ.
Advertisement
ಪೊಲೀಸರು ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಅಧಿಕಾರಿಗಳಿಗೆ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವಂತೆ ಹಿಮಾಚಲ ಪ್ರದೇಶ ಮುಖ್ಯುಮಂತ್ರಿ ವೀರಭದ್ರ ಸಿಂಗ್ ಸೂಚನೆ ನೀಡಿದ್ದಾರೆ.
#HimachalPradesh: 15 killed, several others injured when travelling bus fell into deep gorge in #Shimla. #AIRPics: Shishu pic.twitter.com/r2j0toL7Eh
— All India Radio News (@airnewsalerts) July 20, 2017
#SpotVisuals 20 killed after a bus travelling to Solan from Kinnaur rolled down a gorge near Shimla's Rampur; Rescue operation underway pic.twitter.com/Gj8IoBBLn7
— ANI (@ANI) July 20, 2017
#SpotVisuals More than 20 killed after a bus travelling to Solan from Kinnaur rolled down a gorge near Shimla's Rampur. pic.twitter.com/51EVAimQud
— ANI (@ANI) July 20, 2017