ಬೀಜಿಂಗ್: ನೈರುತ್ಯ ಚೀನಾದಲ್ಲಿ(China) ಭಾನುವಾರ ಸಂಭವಿಸಿದ ಬಸ್(Bus) ಅಪಘಾತದಲ್ಲಿ(Accident) 27 ಜನರು ಸಾವನ್ನಪ್ಪಿದ್ದಾರೆ. ಇದು ಈ ವರ್ಷ ಚೀನಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಟ್ಟು 47 ಜನರನ್ನು ಹೊತ್ತೊಯ್ಯುತ್ತಿದ್ದ ಬಸ್ ರಸ್ತೆ ಬದಿಗೆ ಪಲ್ಟಿಯಾಗಿದೆ. ಈ ದುರ್ಘಟನೆ ಗ್ರಾಮೀಣ ಗೈಝೌ ಪ್ರಾಂತ್ಯದ ಹೆದ್ದಾರಿಯಲ್ಲಿ ಸಂಭವಿಸಿದೆ ಎಂದು ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಆಂಧ್ರ, ತೆಲಂಗಾಣದ 23 ಸ್ಥಳಗಳಲ್ಲಿ NIA ರೇಡ್ – PFI ಸದಸ್ಯರ ವಿಚಾರಣೆ
Advertisement
Advertisement
ಅಪಘಾತ ಸಂಭವಿಸಿದ ಸ್ಥಳ ಅಲ್ಪಸಂಖ್ಯಾತ ಹಾಗೂ ಬಡ ಕುಟುಂಬಗಳಿರುವ ದೂರದ ಪರ್ವತ ಪ್ರದೇಶವಾಗಿದೆ. ಘಟನಾ ಸ್ಥಳಕ್ಕೆ ತುರ್ತು ವೈದ್ಯಕೀಯ ಚಿಕಿತ್ಸೆ ನೀಡುವವರನ್ನು ಕಳುಹಿಸಲಾಗಿದ್ದು, ಬಸ್‌ನಲ್ಲಿದ್ದ ಉಳಿದ 20 ಪ್ರಯಾಣಿಕರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ಜೂನ್‌ನಲ್ಲಿ ಗೈಝೌ ಪ್ರಾಂತ್ಯದಲ್ಲಿ ಹೈಸ್ಪೀಡ್ ರೈಲೊಂದು ಹಳಿತಪ್ಪಿ ಚಾಲಕ ಸಾವನ್ನಪ್ಪಿದ್ದ. ಆದರೆ ಆತ ತನ್ನ ಸಾವಿಗೂ 5 ಸೆಕೆಂಡ್ ಮೊದಲು ತುರ್ತು ಬ್ರೇಕ್ ಅನ್ನು ಹಾಕಿ, ರೈಲಿನಲ್ಲಿದ್ದ ನೂರಾರು ಜೀವಗಳನ್ನು ರಕ್ಷಿಸಿದ್ದ. ಇದನ್ನೂ ಓದಿ: ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಲೀಕ್ – ವಿಶ್ವವಿದ್ಯಾಲಯದಲ್ಲಿ ಭುಗಿಲೆದ್ದ ಪ್ರತಿಭಟನೆ