LatestMain PostNational

ಆಂಧ್ರ, ತೆಲಂಗಾಣದ 23 ಸ್ಥಳಗಳಲ್ಲಿ NIA ರೇಡ್ – PFI ಸದಸ್ಯರ ವಿಚಾರಣೆ

ಅಮರಾವತಿ: ರಾಷ್ಟ್ರೀಯ ತನಿಖಾ ದಳ(NIA) ಅಧಿಕಾರಿಗಳು ಭಾನುವಾರ ಆಂಧ್ರಪ್ರದೇಶದ(Andhra Pradesh) ವಿವಿಧ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಹಿಂಸಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರಚೋದಿಸುವ ಆರೋಪದ ಮೇಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ತೆಲಂಗಾಣದ(Telangana) ನಿಜಾಮಾಬಾದ್ ಜಿಲ್ಲೆಯ ಮನೆಯೊಂದರ ಮೇಲೆಯೂ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಸೋಮವಾರ ಹೈದರಾಬಾದ್‌ನಲ್ಲಿರುವ ಎನ್‌ಐಎ ಕಚೇರಿಗೆ ಭೇಟಿ ನೀಡುವಂತೆ ವ್ಯಕ್ತಿಯೊಬ್ಬರಿಗೆ ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಲೀಕ್ – ವಿಶ್ವವಿದ್ಯಾಲಯದಲ್ಲಿ ಭುಗಿಲೆದ್ದ ಪ್ರತಿಭಟನೆ

ಎನ್‌ಐಎ ಅಧಿಕಾರಿಗಳ 23 ತಂಡಗಳು ನಿಜಾಮಾಬಾದ್, ಕರ್ನೂಲ್, ಗುಂಟೂರು ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಿವೆ. ಭಯೋತ್ಪಾದನಾ ಚಟುವಟಿಕೆಗಳ ಮಾಹಿತಿಗೆ ಸಂಬಂಧಿಸಿದಂತೆ ದಾಳಿ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

ಶೋಧದ ವೇಳೆ ಅಧಿಕಾರಿಗಳು ಈಗಾಗಲೇ ಪಿಎಫ್‌ಐ ಜಿಲ್ಲಾ ಸಂಚಾಲಕ ಶಾದುಲ್ಲಾ ಮತ್ತು ಸದಸ್ಯರಾದ ಮೊಹಮ್ಮದ್ ಇಮ್ರಾನ್ ಮತ್ತು ಮೊಹಮ್ಮದ್ ಅಬ್ದುಲ್ ಮೊಬಿನ್ ಅವರನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಕರಾಟೆ ಕಲಿಸುವ ನೆಪದಲ್ಲಿ ಹಿಂಸಾಚಾರ ಮತ್ತು ಕಾನೂನುಬಾಹಿರ ತರಬೇತಿಗೆ ಪ್ರಚೋದನೆ ನೀಡಿರುವ ಮಾಹಿತಿಯ ಮೇರೆಗೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಯುಪಿ ಸಚಿವರಿಗೆ 500 ರೂ. ದಂಡ

Live Tv

Leave a Reply

Your email address will not be published.

Back to top button