ಭೋಪಾಲ್: ಮಧ್ಯಪ್ರದೇಶ ವೈದ್ಯರು ಅಪರೂಪದ ಶಸ್ತ್ರಚಿಕಿತ್ಸೆವೊಂದನ್ನ ಮಾಡಿದ್ದು, ವ್ಯಕ್ತಿಯೊಬ್ಬರ ಹೊಟ್ಟೆಯಿಂದ ಒಂದು ಚೈನ್, 263 ನಾಣ್ಯಗಳು ಹಾಗೂ ಶೇವಿಂಗ್ ಬ್ಲೇಡ್‍ಗಳು ಸೇರಿ ಒಟ್ಟು 5 ಕೆಜಿಯಷ್ಟು ಕಬ್ಬಿಣವನ್ನ ಹೊರತೆಗೆದಿದ್ದಾರೆ.
ಇಲ್ಲಿನ ರೇವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಇಲ್ಲಿನ ಸಾತ್ನಾ ಜಿಲ್ಲೆಯ ಸೋಹಾವಲ್ ನಿವಾಸಿಯಾದ 32 ವರ್ಷದ ಮೊಹಮ್ಮದ್ ಮಕ್ಸೂದ್‍ಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ನವೆಂಬರ್ 18ರಂದು ಸಂಜಯ್ ಗಾಂಧಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.
Advertisement
Advertisement
ಎಕ್ಸ್-ರೇ ಹಾಗೂ ಇನ್ನಿತರೆ ಪರೀಕ್ಷೆಗಳನ್ನ ಮಾಡಿದ ನಂತರ ಮಕ್ಸೂದ್ ಅವರ ಹೊಟ್ಟೆನೋವಿಗೆ ಕಾರಣ ಪತ್ತೆ ಮಾಡಿದೆವು. 6 ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮಾಡಿ 10-12 ಶೇವಿಂಗ್ ಬ್ಲೇಡ್‍ಗಳು, 4 ದೊಡ್ಡ ಸೂಜಿಗಳು, ಒಂದು ಚೈನ್ ಹಾಗೂ 263 ನಾಣ್ಯಗಳನ್ನ ಹೊರತೆಗೆದರು. ಜೊತೆಗೆ ಗ್ಲಾಸ್ ಪೀಸ್‍ಗಳು ಇದ್ದವು. ಒಟ್ಟು 5 ಕೆಜಿ ತೂಕದ ವಸ್ತುಗಳನ್ನ ಮಕ್ಸೂದ್ ಅವರ ಹೊಟ್ಟೆಯಿಂದ ಶುಕ್ರವಾರದಂದು ಹೊರತೆಗೆಯಲಾಗಿದೆ ಎಂದು ಆಸ್ಪತ್ರೆಯ ವೈದ್ಯರಾದ ಡಾ ಪ್ರಿಯಾಂಕ್ ಶರ್ಮಾ ಹೇಳಿದ್ದಾರೆ.
Advertisement
Advertisement
ರೇವಾ ಗೆ ಕರೆತರುವ ಮುನ್ನ ಮಕ್ಸೂದ್ ಅವರು ಸಾತ್ನಾದಲ್ಲಿ 6 ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದರು. ಅವರ ಮನಸ್ಥಿತಿ ಸರಿಯಿರಲಿಲ್ಲ. ಹೀಗಾಗಿ ಯಾರಿಗೂ ಗೊತ್ತಿಲ್ಲದಂತೆ ಈ ವಸ್ತುಗಳನ್ನ ನುಂಗಿರಬಹುದು ಎಂದು ಡಾ. ಶರ್ಮಾ ಹೇಳಿದ್ದಾರೆ.
ಸದ್ಯ ಮಕ್ಸೂದ್ ಚೇತರಿಸಿಕೊಳ್ಳುತ್ತಿದ್ದು, ತಜ್ಞ ವೈದ್ಯರ ತಂಡ ಅವರನ್ನ ನೋಡಿಕೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.