ಬಳ್ಳಾರಿ: ಜಿಲ್ಲೆಯಲ್ಲಿ ಬಿಜೆಪಿ (BJP) ವತಿಯಿಂದ ನಡೆದ ರಾಜ್ಯಮಟ್ಟದ ಎಸ್ಟಿ ಸಮಾವೇಶಕ್ಕೆ (Navashakti Samavesha) ಆಗಮಿಸಿದ್ದ ಯುವಕನೊಬ್ಬ ಕಾಲುವೆಯಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
ಬಳ್ಳಾರಿಯ (Ballri) ಹೊರವಲಯದಲ್ಲಿ ಆಯೋಜನೆ ಮಾಡಿದ್ದ, ಸಮಾವೇಶ ಮುಗಿದ ಬಳಿಕ ಶೌಚಾಲಯಕ್ಕೆ ತೆರಳಿ ಕಾಲುವೆಗೆ ಮುಖ ತೊಳೆಯಲು ಹೋದ ವೇಳೆ ಗೌತಮ್‌ನಗರದ ಎಚ್‌ಎಲ್‌ಸಿ ಕಾಲುವೆಗೆ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾನೆ. ಇದನ್ನೂ ಓದಿ: 3 ದಶಕಗಳ ಕಾಲ ನರ್ಮದಾ ಅಣೆಕಟ್ಟು ಯೋಜನೆ ಸ್ಥಗಿತಗೊಳಿಸಿದ ಮಹಿಳೆಯೊಂದಿಗೆ ಯಾತ್ರೆ ಮಾಡ್ತಿದ್ದೀರಾ: ರಾಗಾ ವಿರುದ್ಧ ಮೋದಿ ಕಿಡಿ
ಚೆಳ್ಳಕೇರಿ ತಾಲೂಕಿನ ಗೌರಿಪುರ ನಿವಾಸಿ ಉಮಾಪತಿ(26) ಮೃತ ವ್ಯಕ್ತಿ. ಸಮಾವೇಶದಿಂದ 2 ಕಿಮೀ ದೂರದಲ್ಲಿರುವ ಗೌತಮ್‌ನಗರ ಬಳಿ ಮುಖ ತೊಳೆಯಲು ಹೋದ ವೇಳೆ ಘಟನೆ ಸಂಭವಿಸಿದೆ. ಇದನ್ನೂ ಓದಿ: ಒಟ್ಟಿಗೆ ಕೂತು ಫಿಫಾ ವಿಶ್ವಕಪ್ ಪಂದ್ಯ ವೀಕ್ಷಿಸಲು 23 ಲಕ್ಷಕ್ಕೆ ಮನೆ ಖರೀದಿಸಿದ ಫುಟ್ಬಾಲ್ ಫ್ಯಾನ್ಸ್
ಎಚ್‌ಎಲ್‌ಸಿ ಕಾಲುವೆ ಸಮೀಪದಲ್ಲಿ ಸಮಾವೇಶ ಆಯೋಜಿಸಿದ್ದರಿಂದ ಕಾಲುವೆ ಬಳಿ ಪೊಲೀಸ್ (Police) ಸೂಕ್ತ ಭದ್ರತೆ ಒದಗಿಸಿದ್ದರು. ಆದಾಗ್ಯೂ ಈ ಘಟನೆ ಸಂಭವಿಸಿದೆ. ಈ ಕುರಿತು ಬಳ್ಳಾರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ (FIR) ದಾಖಲಾಗಿದೆ.