CoronaDistrictsKarnatakaLatestMain Post

ಇಂದು 254 ಕೊರೊನಾ ಕೇಸ್, 3 ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ನಿನ್ನೆಗಿಂತ 30 ಹೆಚ್ಚು ಪಾಸಿಟಿವ್ ಕೇಸ್ ಪತ್ತೆಯಾಗಿದೆ. ಇಂದು ಒಟ್ಟು 254 ಹೊಸ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿದ್ದು, 3 ಮರಣ ಪ್ರಕರಣ ದಾಖಲಾಗಿದೆ.

ಇಂದು 254 ಕೊರೊನಾ ಕೇಸ್, 3 ಸಾವು

ರಾಜ್ಯದಲ್ಲಿ 546 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು 6,412 ಸಕ್ರಿಯ ಪ್ರಕರಣಗಳು ಇದ್ದು, ಈವರೆಗೆ ರಾಜ್ಯದಲ್ಲಿ ಒಟ್ಟು 29,94,255 ಮಂದಿಗೆ ಕೊರೊನಾ ಬಂದಿದೆ. 29,49,629 ಮಂದಿ ಈವರೆಗೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕೋವಿಡ್-19 ಮರಣ ಪ್ರಮಾಣ ಶೇ.1.18 ರಷ್ಟಿದ್ದರೇ, ಪಾಸಿಟಿವಿಟಿ ರೇಟ್ ಶೇ.0.38 ರಷ್ಟಿದೆ. ಇಂದು ದಾಖಲಾದ ಮೂರು ಮರಣ ಪ್ರಕರಣ ಬೆಂಗಳೂರು ನಗರ, ಧಾರವಾಡ, ಕಲಬುರಗಿ ಜಿಲ್ಲೆಯಲ್ಲಿ ದಾಖಲಾಗಿದೆ. ಇದನ್ನೂ ಓದಿ: ಕೊರೊನಾ ವೈರಸ್‌ ಡೆಲ್ಟಾ ರೂಪಾಂತರಿಗೆ ಕೋವ್ಯಾಕ್ಸಿನ್‌ ಶೇ. 50 ಪರಿಣಾಮಕಾರಿ

ಇಂದು 254 ಕೊರೊನಾ ಕೇಸ್, 3 ಸಾವು

ಇಂದು ರಾಜ್ಯದಲ್ಲಿ ಒಟ್ಟು 6,45,643 ಮಂದಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಒಟ್ಟು 65,371 ಸ್ಯಾಂಪಲ್ (ಆರ್‍ಟಿ ಪಿಸಿಆರ್ 47,654 + 17,717 ರ್ಯಾಪಿಡ್ ಆಂಟಿಜನ್)ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಭಾರತದಲ್ಲಿ ಮೂರನೇ ಅಲೆ ಸಾಧ್ಯತೆ ಕಡಿಮೆ: ಗುಲೇರಿಯಾ

ಇಂದು 254 ಕೊರೊನಾ ಕೇಸ್, 3 ಸಾವು

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 0, ಬಳ್ಳಾರಿ 1, ಬೆಳಗಾವಿ 4, ಬೆಂಗಳೂರು ಗ್ರಾಮಾಂತರ 2, ಬೆಂಗಳೂರು ನಗರ 152, ಬೀದರ್ 0, ಚಾಮರಾಜನಗರ 2, ಚಿಕ್ಕಬಳ್ಳಾಪುರ 0, ಚಿಕ್ಕಮಗಳೂರು 5, ಚಿತ್ರದುರ್ಗ 4, ದಕ್ಷಿಣ ಕನ್ನಡ 14, ದಾವಣಗೆರೆ 0, ಧಾರವಾಡ 5, ಗದಗ 0, ಹಾಸನ 15, ಹಾವೇರಿ 0, ಕಲಬುರಗಿ 1, ಕೊಡಗು 1, ಕೋಲಾರ 0, ಕೊಪ್ಪಳ 0, ಮಂಡ್ಯ 3, ಮೈಸೂರು 30, ರಾಯಚೂರು 0, ರಾಮನಗರ 0, ಶಿವಮೊಗ್ಗ 4, ತುಮಕೂರು 4, ಉಡುಪಿ 8, ಉತ್ತರ ಕನ್ನಡ, ವಿಜಯಪುರ ಮತ್ತು ಯಾದಗಿರಿಯಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ.

 

Related Articles

Leave a Reply

Your email address will not be published. Required fields are marked *