ಕಾರವಾರ: ಬಲು ಅಪರೂಪದ ಇಂಡೊ ಫ್ಯಾಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್ ಕಳೇಬರಹವು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಳನಗದ್ದೆ ಕಡಲತೀರದಲ್ಲಿ ದೊರೆತಿದೆ.
Advertisement
ಸುಮಾರು 2.55 ಮೀಟರ್ ಉದ್ದದ 250 ಕೆ.ಜಿ ತೂಕದ ಇಂಡೊ ಫ್ಯಾಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್ ಕಳೇಬರಹ ಇದಾಗಿದ್ದು, ಆಹಾರ ಹುಡುಕಿ ಬಂದ ಈ ಡಾಲ್ಫಿನ್ ಬೊಟ್ ಗೆ ಹೊಡೆದೋ ಅಥವಾ ಆಹಾರದಲ್ಲಿ ತೊಂದರೆಯಾಗಿ ಸತ್ತಿರಬಹುದು ಎಂದು ಊಹಿಸಲಾಗಿದ್ದು, ಅರಣ್ಯಾಧಿಕಾರಿ ಪ್ರವೀಣ್ ರವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ.
Advertisement
Advertisement
20 ರಿಂದ 25 ಮೀಟರ್ ಆಳ ಸಮುದ್ರದಲ್ಲಿ ವಾಸವಿರುವ ಇಂಡೊ ಫ್ಯಾಸಿಫಿಕ್ ಹಂಪ್ ಬ್ಯಾಕ್ ಡಾಲ್ಫಿನ್ಗಳು, 15 ರಿಂದ 20 ಸೆಕೆಂಡ್ ಸಮುದ್ರದಿಂದ ಮೇಲೆ ಬಂದು ಬಳಿಕ ನೀರಿನಲ್ಲಿ ಸಾಗಿ ಮೀನುಗಳನ್ನು ಶಿಕಾರಿ ಮಾಡುತ್ತವೆ. ಈ ಸಸ್ತನಿಯು 10 ರಿಂದ 12 ತಿಂಗಳುಗಳಲ್ಲಿ ಗರ್ಭಧಾರಣೆ ಮಾಡುತ್ತವೆ. ಮರಿಗಳು ಸ್ವಾವಲಂಬಿಯಾಗಿ ಸಮುದ್ರದಲ್ಲಿ ಬದುಕುವವರೆಗೂ ಅವುಗಳ ಪೋಷಣೆ ಮಾಡುವ ಇವು ಬುದ್ಧಿವಂತ ಸಸ್ತನಿಯಾಗಿದೆ ಎಂದು ಅರಣ್ಯಾಧಿಕಾರಿ ಪ್ರವೀಣ್ ರವರು ಪಬ್ಲಿಕ್ ಟಿ.ವಿಗೆ ಮಾಹಿತಿ ನೀಡಿದ್ದಾರೆ.
Advertisement