ಚಿಕ್ಕಮಗಳೂರು: ಹರಳಿ ಗಿಡದ ಸೊಪ್ಪು ತಿಂದು ಉಸಿರುಗಟ್ಟಿ ಸುಮಾರು 25 ಕುರಿಗಳು ಸಾವನ್ನಪ್ಪಿ ಹೊಲದ ತುಂಬೆಲ್ಲಾ ಬಿದ್ದಿರುವ ದಾರುಣ ಘಟನೆ ಚಿಕ್ಕಮಗಳೂರು ತಾಲೂಕಿನ ದೇವರಗೊಂಡನಹಳ್ಳಿ ಗ್ರಾಮದಲ್ಲಿ ನಡದಿದೆ.
ಶಿವಣ್ಣ ಎಂಬವರಿಗೆ ಈ ಕುರಿಗಳು ಸೇರಿದ್ದು, ಇಂದು ಬೆಳಗ್ಗೆ ಕುರಿಗಳನ್ನು ಮೇಯಲು ಬಿಟ್ಟಿದ್ದಾರೆ. ಬರಪೀಡಿತ ಪ್ರದೇಶವಾದ ಕಾರಣ ತಿನ್ನಲು ಹುಲ್ಲು ಇಲ್ಲವಾದ್ದರಿಂದ ಮೆಯುತ್ತಾ ಹೋದ ಕುರಿಗಳು ಹರಳಿ ಗಿಡದ ಸೊಪ್ಪನ್ನು ತಿಂದಿವೆ. ಸೊಪ್ಪನ್ನು ತಿಂದು ಹೊಲಕ್ಕೆ ಬರುತ್ತಿದ್ದಂತೆ ಕುರಿಗಳು ಉಸಿರುಗಟ್ಟಿ ನಿಂತ ಜಾಗದಲ್ಲೇ ಸಾಲು ಸಾಲಾಗಿ ಸಾವನ್ನಪ್ಪಿವೆ.
ಕುರಿಗಳಿಂದ ಶಿವಣ್ಣ ಅವರಿಗೆ ಸುಮಾರು 5 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪಶು ವೈದ್ಯಾಧಿಕಾರಿಗಳು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಇನ್ನು ಜೀವನಕ್ಕೆಂದು ನಂಬಿಕೊಂಡಿದ್ದ ಕುರಿಗಳು ಹೀಗೆ ಸಾವನ್ನಪ್ಪಿದ್ರಿಂದ ಶಿವಣ್ಣ ಕುಟುಂಬ ಕಂಗಾಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv