– ಯಾವ ಕ್ಷೇತ್ರದಲ್ಲಿ ಎಷ್ಟು ಅಭ್ಯರ್ಥಿಗಳು ಕಣಕ್ಕೆ? ಪುರುಷರು, ಮಹಿಳಾ ಅಭ್ಯರ್ಥಿಗಳೆಷ್ಟು?
ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣೆ (Lok Sabha Election 2024) ಕಣ ರಂಗೇರಿದೆ. ಸೋಮವಾರ 53 ಮಂದಿ ನಾಮಪತ್ರ ವಾಪಸ್ ಪಡೆದಿದ್ದು, ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ ಒಟ್ಟು 247 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದನ್ನೂ ಓದಿ: ಚಾಮರಾಜನಗರ ಕ್ಷೇತ್ರದ 8 ನಾಮಪತ್ರ ವಾಪಸ್ – ರಣಕಣದಲ್ಲಿ 14 ಅಭ್ಯರ್ಥಿಗಳು
ನಾಮಪತ್ರ ಹಿಂಪಡೆಯಲು ಇಂದು (ಏ.8) ಕೊನೆ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ 6ನೇ ತಾರೀಖಿನಂದು ಒಬ್ಬರು ಹಾಗೂ ಇಂದು 52 ಮಂದಿ ಸೇರಿದಂತೆ ಒಟ್ಟು 53 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ಕಣದಲ್ಲಿ ಈಗ 247 ಅಭ್ಯರ್ಥಿಗಳಿದ್ದು, ಅವರ ಪೈಕಿ ಪುರುಷರು 226 ಹಾಗೂ ಮಹಿಳಾ ಅಭ್ಯರ್ಥಿಗಳು 21 ಮಂದಿ ಚುನಾವಣೆ ಎದುರಿಸಲಿದ್ದಾರೆ.
ಯಾವ ಕ್ಷೇತ್ರದಲ್ಲಿ ಎಷ್ಟು ಅಭ್ಯರ್ಥಿಗಳು ಕಣಕ್ಕೆ?
ಉಡುಪಿ-ಚಿಕ್ಕಮಗಳೂರು: 10
ಹಾಸನ: 15
ದಕ್ಷಿಣ ಕನ್ನಡ: 9
ಚಿತ್ರದುರ್ಗ: 20
ತುಮಕೂರು: 18
ಮಂಡ್ಯ: 14
ಮೈಸೂರು: 18
ಚಾಮರಾಜನಗರ: 14
ಬೆಂಗಳೂರು ಗ್ರಾಮೀಣ: 15
ಬೆಂಗಳೂರು ಉತ್ತರ: 21
ಬೆಂಗಳೂರು ಕೇಂದ್ರ: 24
ಬೆಂಗಳೂರು ದಕ್ಷಿಣ: 22
ಚಿಕ್ಕಬಳ್ಳಾಪುರ: 29
ಕೋಲಾರ: 18