ಬೆಂಗಳೂರು: ಬಿಬಿಎಂಪಿ ನೂತನ ವಾರ್ಡ್ ವಿಂಗಡಣೆಯನ್ನು ರಾಜ್ಯ ಸರ್ಕಾರ ಅಧಿಕೃತ ಮಾಡಿದೆ. 243 ವಾರ್ಡ್‍ಗಳನ್ನೊಳಗೊಂಡ ಒಳಗೊಂಡ ನೂತನ ವಾರ್ಡ್ ಪಟ್ಟಿಗೆ ಸರ್ಕಾರ ಅಧಿಕೃತ ಮುದ್ರೆ ಒತ್ತಿದೆ.
ವಾರ್ಡ್ ವಿಂಗಡಣೆ ಸಂಬಂಧ ಸಾರ್ವಜನಿಕರಿಂದ ಆಕ್ಷೇಪಣೆಯನ್ನು ಸರ್ಕಾರಿ ಸ್ವೀಕಾರ ಮಾಡಿತ್ತು. ಬಳಿಕ ಕೆಲವೊಂದು ಮಾರ್ಪಾಡು ಮಾಡಿ ವಾರ್ಡ್‍ಗಳ ಪಟ್ಟಿ ಅಂತಿಮಗೊಳಿಸಿದೆ. 24 ವಾರ್ಡ್‍ಗಳ ಹೆಸರನ್ನು ಬದಲಾವಣೆ ಮಾಡಲಾಗಿದೆ. ಈ ಬಾರಿ ವಾರ್ಡ್ ವಿಂಗಡಣೆಯಲ್ಲಿ ಕಾವೇರಿನಗರದ ವಾರ್ಡ್ ನಂ.55ಕ್ಕೆ ಪುನೀತ್ ರಾಜ್‍ಕುಮಾರ್ ವಾರ್ಡ್ ಎಂದು ಹೆಸರಿಡಲಾಗಿದೆ. ಇದನ್ನೂ ಓದಿ: ಗುಣಮುಖರಾಗಿರುವ ಬೆನ್ನಲ್ಲೇ ಗಾಳಿಪಟ -2 ಆಡಿಯೋ ಲಾಂಚ್‌ನಲ್ಲಿ ನಟ ದಿಗಂತ್
Advertisement
Advertisement
ಅಲ್ಲದೆ ಛತ್ರಪತಿ ಶಿವಾಜಿ, ಚಾಣಕ್ಯ, ವೀರಮದಕರಿ, ರಣಧೀರ ಕಂಠೀರವ, ವೀರ ಸಿಂಧೂರ ಲಕ್ಷ್ಮಣ, ವಿಜಯನಗರ ಕೃಷ್ಣದೇವರಾಯ, ನಾಲ್ವಡಿ ಕೃಷ್ಣರಾಜ ಒಡೆಯರ್ ಪಾರ್ಕ್, ದೀನದಯಾಳ್ ವಾರ್ಡ್ ಅಂತ ಹೊಸ ಹೆಸರುಗಳನ್ನೂ ಇಡಲಾಗಿದೆ. ಈ ಮಧ್ಯೆ ವಾರ್ಡ್ 77ಕ್ಕೆ ಮೋದಿ ಗಾರ್ಡನ್ ಹೆಸರು ಇಡಲಾಗಿತ್ತು.
Advertisement
ಇದಕ್ಕೆ ವಿರೋಧ ವ್ಯಕ್ತವಾದ ಕಾರಣ ಹಳೆಯ ದೇವರಜೀವನಹಳ್ಳಿ ವಾರ್ಡ್ ಅಂತಲೇ ಹೆಸರು ಉಳಿಸಿಕೊಳ್ಳಲಾಗಿದೆ. ಅದೇ ರೀತಿ ಕೆಂಗೇರಿ ಉಪನಗರ ವಾರ್ಡ್ ಹೆಸರಿಗೂ ವಿರೋಧ ಬಂದ ಕಾರಣ ಕೆಂಗೇರಿ ವಾರ್ಡ್ ಅಂತಲೇ ಹೆಸರು ಉಳಿಸಿಕೊಳ್ಳಲಾಗಿದೆ. ಇದನ್ನೂ ಓದಿ: ನಟ ಅನಂತ್ ನಾಗ್ ಸೇರಿದಂತೆ ಮೂವರಿಗೆ ಗೌರವ ಡಾಕ್ಟರೇಟ್