ವಾಷಿಂಗ್ಟನ್: ಟ್ವಿಟ್ಟರ್‍ನಲ್ಲಿ ರೆಸ್ಟೋರೆಂಟ್ ಹೊಗಳಿದ ಯುತಿವತಿಗೆ ಮಾಲೀಕರೊಬ್ಬರು ಲೈಫ್ ಲಾಂಗ್ ಫ್ರೀ ಚಿಕನ್ ಕೊಡಲು ನಿರ್ಧರಿಸಿದ ಪ್ರಸಂಗ ಅಮೆರಿಕದಲ್ಲಿ ನಡೆದಿದೆ.
ಇಂತಹ ವಿಶೇಷ ಆಫರ್ ಪಡೆದ ಯುವತಿ ಲಹಾರ ಖ್ಯಾತಿಯ ಮೇರಿಲ್ಯಾಂಡ್‍ನ 24 ವರ್ಷದ ಸಂಗೀತಗಾರತಿ ಬಾರಿ ಹಾಲ್. ಲಹಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಾಷಿಂಗ್ಟನ್ ಡಿಸಿಯಲ್ಲಿರುವ ರೋಮಿಂಗ್ ರೂಸ್ಟರ್ ರೆಸ್ಟೋರೆಂಟ್ ಬಗ್ಗೆ ಹೊಗಳಿದ್ದರು. ಇದರಿಂದಾಗಿ ರೆಸ್ಟೋರೆಂಟ್‍ಗೆ ಭಾರೀ ಸಂಖ್ಯೆಯಲ್ಲಿ ಗ್ರಾಹಕರು ಭೇಟಿ ನೀಡುತ್ತಿದ್ದಾರೆ. ಹೀಗಾಗಿ ರೆಸ್ಟೋರೆಂಟ್ ಆದಾಯವೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.
Advertisement
ರೋಮಿಂಗ್ ರೂಸ್ಟರ್ ನಲ್ಲಿ ಅದ್ಭುತ ಸ್ಯಾಂಡ್‍ವಿಚ್ ಚಿಕನ್ ಸವಿದೆ. ಅದು ನಮ್ಮ ಕುಟುಂಬ ಹಾಗೂ ರೆಸ್ಟೋರೆಂಟ್ ನಡುವೆ ಬಂಧ ಏರ್ಪಡಿಸಿದೆ. ನಾವು ಈಗ ರೋಮಿಂಗ್ ರೂಸ್ಟರ್ ನ ಸಾಮಾನ್ಯ ಗ್ರಾಹಕರಾಗಿದ್ದೇವೆ ಎಂದು ಲಹಾರ ಟ್ವೀಟ್ ಮಾಡಿದ್ದರು.
Advertisement
Advertisement
ರೆಸ್ಟೋರೆಂಟ್ ಹೊಗಳಿದ್ದ ಲಹಾರ ಅವರ ಟ್ಟೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಹೀಗಾಗಿ ರೆಸ್ಟೋರೆಂಟ್‍ಗೆ ಪ್ರಚಾರ ತಂದುಕೊಟ್ಟ ಲಹಾರ ಅವರಿಗೆ ಮಾಲೀಕರಲ್ಲಿ ಒಬ್ಬರಾದ ಮೈಕಲ್ ಹಾಬ್‍ಡೆಮೆರಿಯನ್ ಲೈಫ್ ಲಾಂಗ್ ಚಿಕನ್ ನೀಡಲು ನಿರ್ಧರಿಸಿದ್ದಾರೆ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ರೆಸ್ಟೋರೆಂಟ್ ಮಾಲೀಕ ಮೈಕಲ್, ಅವರ ಒಂದು ಟ್ವೀಟ್‍ನಿಂದ ನಮ್ಮ ವ್ಯವಹಾರವು ಹೆಚ್ಚಾಗಿದೆ. ಅವರಿಗೆ ಜೀವನ ಪರ್ಯಂತ ಲಹಾರ ಅವರಿಗೆ ಫ್ರೀ ಚಿಕನ್ ನೀಡಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
While Popeyes is cool and all if you live in the DMV area you should check out Roaming Rooster in DC. It’s Black owned, and the founder Mike is Ethiopian born. He grew the family business from a food truck and has always been kind pic.twitter.com/kxS40kETlc
— Grandzaddy Bri ???? Smartistabeauty (@BriHallOfficial) August 26, 2019