– 2,000ಕ್ಕೂ ಹೆಚ್ಚು ಮನೆಗಳಿಗೆ ಪೈಪ್ಲೈನ್ ಮೂಲಕ ಗ್ಯಾಸ್ ಸಂಪರ್ಕ
ರಾಮನಗರ: ಇರಾನ್ – ಇಸ್ರೇಲ್ ನಡುವಿನ ಯುದ್ಧದ (Iran-Israel War) ಬಿಸಿ ತೈಲ ಹಾಗೂ ಗ್ಯಾಸ್ ಮೇಲೆ ತಟ್ಟಿದೆ. ಸಿಲಿಂಡರ್ಗಳಿಗಾಗಿ (Gas Cylinder) ಆಯಾ ವಿತರಕ ಏಜೆನ್ಸಿಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಸಿಲಿಂಡರ್ ಪಡೆಯುತ್ತಿದ್ದಾರೆ. ಆದರೆ ಬಿಡದಿ (Bidadi) ಭಾಗದ ಹಲವು ಗ್ರಾಮಗಳು ಸಿಲಿಂಡರ್ ಜಂಜಾಟದಿಂದ ಮುಕ್ತವಾಗಿ ದಿನದ 24 ಗಂಟೆ ಗ್ಯಾಸ್ ಬಳಸುತ್ತಿದ್ದಾರೆ.
ಹೌದು, ಬಿಡದಿ ಭಾಗದ 10 ಗ್ರಾಮಗಳು ಗ್ಯಾಸ್ ಸಿಲಿಂಡರ್ಗಳನ್ನ ಉಪಯೋಗಿಸುವುದನ್ನ ಬಿಟ್ಟು ಪೈಪ್ಲೈನ್ ಮೂಲಕ ಗ್ಯಾಸ್ (Pipeline Gas) ಬಳಸುತ್ತಿದ್ದಾರೆ. ಮನೆ ಮನೆಗೆ ಗ್ಯಾಸ್ ಪೈಪ್ಲೈನ್ ಮಾಡಿ ಗೈಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಸಹಭಾಗಿತ್ವದಲ್ಲಿ ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ ಲಿ. ಸಂಸ್ಥೆ ನಿರಂತರವಾಗಿ ಗ್ಯಾಸ್ ಪೂರೈಕೆ ಮಾಡುತ್ತಿದೆ. ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಮುಚ್ಚಲು ಕಾರಣರಾಗಿದ್ದ ಇರಾನ್ ನೌಕಾ ಕಮಾಂಡರ್ ಹತ್ಯೆ
ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ ಲಿ. ಕಂಪನಿಯವರು ಈಗಾಗಲೇ ಬಿಡದಿ ಭಾಗದ ಹಲವು ಕಡೆ ಅಂಡರ್ ಗ್ಯಾಸ್ ಪೈಪ್ಲೈನ್ ಮಾಡಿ ಮನೆ ಮನೆಗೆ ಗ್ಯಾಸ್ ಸಂಪರ್ಕ ನೀಡಿದ್ದಾರೆ. ಛತ್ರ, ಗೊಲ್ಲಹಳ್ಳಿ, ಬಾನಂದೂರು, ಇಟ್ಟಮಾಡು, ರಾಮನಹಳ್ಳಿ, ಅಬ್ಬನಕುಪ್ಪೆ, ವೃಷಬಾವಾತಿಪುರ, ಜೋಗರದೊಡ್ಡಿ ಗ್ರಾಮಗಳಲ್ಲಿ ಪೈಪ್ಲೈನ್ ಮೂಲಕ ಯಾವುದೇ ಅಡೆತಡೆ ಇಲ್ಲದೆ ಮನೆ ಮನೆಗೆ ಗ್ಯಾಸ್ ಕನೆಕ್ಷನ್ ನೀಡಲಾಗಿದೆ. ಗ್ಯಾಸ್ ಸಂಪರ್ಕ ಪಡೆದವರು ಸಿಲಿಂಡರ್ ಬುಕ್ಕಿಂಗ್ ಮಾಡುವುದನ್ನೇ ಬಿಟ್ಟಿದ್ದಾರೆ. ದಿನದ 24 ತಾಸು ಗ್ಯಾಸ್ ಪೂರೈಕೆ ಆಗುತ್ತಿದೆ. ಇಲ್ಲಿಯವರೆಗೂ ಗ್ಯಾಸ್ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎನ್ನುತ್ತಾರೆ ಇಲ್ಲಿನ ಜನರು. ಇದನ್ನೂ ಓದಿ: ಮುಡಾ ಹಗರಣ ಕೇಸ್ – ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಹೈಕೋರ್ಟ್ ತುರ್ತು ನೋಟಿಸ್
ಗೈಲ್ ಇಂಡಿಯಾ ಲಿಮಿಟೆಡ್ ಘಟಕ ಬಿಡದಿಯ ಬೈರಮಂಗಲ ಕ್ರಾಸ್ನ ಕೂಗಳತೆ ದೂರದಲ್ಲಿ ಗ್ಯಾಸ್ ಸ್ಟೋರೇಜ್ ಪ್ಲಾಂಟ್ ಇದ್ದು, ಪಿಎನ್ಜಿ ಗ್ಯಾಸ್ ಇದಾಗಿದೆ. ನಮ್ಮ ದೇಶದಲ್ಲೆ ಉತ್ಪಾದನೆಯಾಗುವ ನೈಸರ್ಗಿಕ ಅನಿಲವಾಗಿದೆ. ಈ ಘಟಕದಿಂದ ಬಿಡದಿ ಕೈಗಾರಿಕಾ ಪ್ರದೇಶದ ಹಲವು ಕಾರ್ಖಾನೆಗಳಿಗೆ ಸೇರಿದಂತೆ ಬಿಡದಿ, ರಾಮನಗರ ಹಾಗೂ ಚನ್ನಪಟ್ಟಣದ ಹಲವು ಭಾಗಗಳಿಗೆ ನಿರಂತರವಾಗಿ ಗ್ಯಾಸ್ ಪೂರೈಕೆಯಾಗುತ್ತಿದೆ. ಅದರಲ್ಲೂ ಬಿಡದಿ ಭಾಗದ ಹಲವು ಗ್ರಾಮಗಳಲ್ಲಿ 1,500 ಮನೆಗಳಿಗೆ ಈಗಾಗಲೇ ಸಂಪರ್ಕವನ್ನ ನೀಡಿದೆ. ರಾಮನಗರದಲ್ಲಿ 500 ಮನೆಗಳು ಹಾಗೂ ಚನ್ನಪಟ್ಟಣದಲ್ಲಿ 1,500 ಮನೆಗಳಿಗೆ ಸಂಪರ್ಕ ನೀಡಲಾಗಿದೆ. ಇನ್ನು ಕೆಲವು ಗ್ರಾಮಗಳಲ್ಲಿ ಪೈಪ್ ಲೈನ್ ಗ್ಯಾಸ್ ಸಂಪರ್ಕ ಪಡೆಯದವರು ಸಿಲಿಂಡರ್ಗಳು ಸಿಗದೆ ಪೈಪ್ಲೈನ್ ಗ್ಯಾಸ್ ಸಂಪರ್ಕ ಪಡೆಯಲು ಗೈಲ್ ಗ್ಯಾಸ್ ಕಂಪನಿಯವರಿಗೆ ಕರೆ ಮಾಡುತ್ತಿದ್ದಾರೆ. ತುರ್ತಾಗಿ ಬಂದು ಕನೆಕ್ಷನ್ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಇದನ್ನೂ ಓದಿ: ಪ್ರೀತಿಗೆ ಅಡ್ಡಿಯಾಗಿದ್ದಕ್ಕೆ ಅಪ್ರಾಪ್ತೆ, ಲವ್ವರ್ ಸೇರಿ ಹೆತ್ತಮ್ಮನ ಹತ್ಯೆ – ವರ್ಷದ ಬಳಿಕ ಬಯಲಾಯ್ತು ಕೊಲೆ ರಹಸ್ಯ

