ಬೆಂಗಳೂರು: ನ್ಯೂ ಇಯರ್‌ಗೆ ಕಿಕ್ಕೇರಿಸಲು ಸ್ಟೋರ್ ಮಾಡಲಾಗಿದ್ದ 24 ಕೋಟಿ ರೂ. ಮೌಲ್ಯದ ಬಾಂಬೆ ಡ್ರಗ್ಸ್ ಸಿಸಿಬಿ ಕೈಗೆ ಸಿಕ್ಕಿದೆ. ನೈಜಿರಿಯಾದ ಖತರ್ನಾಕ್ ಲೇಡಿ (Nigerian Women) ದಿನಸಿ ಐಟಂ ಜೊತೆ ಡ್ರಗ್ಸ್ ಇಟ್ಟು ಮಾರಾಟ ಮಾಡ್ತಿದ್ದಾಗಲೇ ಸಿಸಿಬಿ (CCB) ಬಲೆಗೆ ಬಿದ್ದಿರೊ ಸ್ಟೋರಿ ಇದೆ ನೋಡಿ…
ಹೊಸ ವರ್ಷಕ್ಕೆ ಕೌಂಟ್ ಡೌನ್ ಶುರುವಾಗಿದೆ. ನ್ಯೂ ಇಯರ್ ಸೆಲೆಬ್ರೆಷನ್‌ಗೆ ಭರ್ಜರಿ ಪ್ಲ್ಯಾನಿಂಗ್ ನಡೀತಿದೆ. ಈ ಮಧ್ಯೆ ಯುವ ಪೀಳಿಗೆ ಹಾದಿ ತಪ್ಪಿಸಿ ಡ್ರಗ್ ಕಿಕ್ಕೇರಿಸಲು ಪೆಡ್ಲರ್‌ಗಳು ತಯಾರಾಗಿದ್ದಾರೆ. ಕೋಟಿ ಕೋಟಿ ಬೆಲೆಯ ಡ್ರಗ್ಸ್ ಸ್ಟೋರ್ ಮಾಡಿದ್ದ ಲೇಡಿ ಪೆಡ್ಲರ್ ಸಿಸಿಬಿ ಬಲೆಗೆ ಬಿದ್ದಿದ್ದಾಳೆ. ಇದನ್ನೂ ಓದಿ: ಬೈಕ್‌ಗಳ ಮೇಲೆ ಭತ್ತದ ಹೊಟ್ಟು ತುಂಬಿದ್ದ ಲಾರಿ ಪಲ್ಟಿ – ಮೂವರು ಸ್ಥಳದಲ್ಲೇ ಸಾವು
Advertisement
Advertisement
ಸೋಪ್‌ನಲ್ಲಿ ಬಾಂಬೆಯಿಂದ ಬರ್ತಿತ್ತು ಎಂಡಿಎಂಎ
Advertisement
ಸಿಸಿಬಿಯ ಮಾದಕ ದ್ರವ್ಯ ನಿಗ್ರಹದಳ ಪೊಲೀಸ್ರ ಕೈಗೆ ಈ ವಿದೇಶಿ ಲೇಡಿ ಲಾಕ್ ಆಗಿದ್ದಾಳೆ. ಕೆ.ಆರ್ ಪುರದ ಟಿಸಿ ಪಾಳ್ಯದ ತನ್ನ ಅಂಗಡಿಯಲ್ಲಿ 24 ಕೋಟಿ ರೂ. ಮೌಲ್ಯದ 12 ಕೆಜಿ ಎಂಡಿಎಂಎ ವೈಟ್ ಮತ್ತು ಯೆಲ್ಲೊ ಕ್ರಿಸ್ಟಲ್ ಶೇಖರಣೆ ಮಾಡಿದ್ಳು. ಕರ್ನಾಟಕದ ಮಟ್ಟಿಗೆ ಇಷ್ಟು ದೊಡ್ಡಮಟ್ಟದ ಡ್ರಗ್ಸ್ ಪತ್ತೆಯಾಗಿರೋದು ಇದೆ ಮೊದಲು ಎಂದು ಹೇಳಲಾಗ್ತಿದೆ. ಇದನ್ನೂ ಓದಿ: ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಓಡೋಡಿ ಕಾರು ಹತ್ತಿದ ಲಕ್ಷ್ಮಣ್
Advertisement
ನೈಜಿರಿಯನ್ ಮೂಲದ ಮಹಿಳೆ ತನ್ನ ಅಂಗಡಿಯನ್ನ ಡ್ರಗ್ಸ್ ಶಾಪ್ ಆಗಿ ಪರಿವರ್ತಿಸಿದ್ಳು. ಮುಂಬೈನಿಂದ ಗ್ರಾಸರಿ ಐಟಂಗಳ ಪ್ಯಾಕೇಟ್‌ನಲ್ಲಿ ಡ್ರಗ್ಸ್ ತರಿಸ್ತಿದ್ದ ನೈಜಿರಿಯನ್ ಮೂಲದ ರೋಜ್ಲೈಮ್ (40)ನ ಸಿಸಿಬಿ ಪೊಲೀಸ್ರು ಬಂಧಿಸಿದ್ದಾರೆ. ಮುಂಬೈನ ಮಹಿಳೆಯೊಬ್ಬಳು ಗ್ರಾಸರಿ ಐಟಂ ಹಾಗೂ ಡೆಟಾಲ್ ಸೋಪ್‌ನಲ್ಲಿ ಡ್ರಗ್ಸ್ ಅಡಗಿಸಿ ಬೆಂಗಳೂರಿಗೆ ಡ್ರಗ್ಸ್ ಸಫ್ಲೈ ಮಾಡ್ತಿದ್ಳು. ಮುಂಬೈನಲ್ಲಿರೋ ವಿದೇಶಿ ಮಹಿಳೆ ಜುಲೀಯಟ್ ಇಲ್ಲಿನ ನೈಜಿರೀಯಾ ಮಹಿಳೆಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ಳು. ಈ ಡ್ರಗ್ಸ್ ಅನ್ನ ಸ್ಥಳೀಯ ನಿವಾಸಿಗಳು ಹಾಗೂ ಕೆಲ ಸಪ್ಲೈಯರ್ಸ್ ಗೆ ನೈಜಿರಿಯನ್ ಪ್ರಜೆಗಳಿಗೆ ಮಹಿಳೆ ರಿಟೇಲ್ ನಲ್ಲಿ ಮಾರಾಟ ಮಾಡ್ತಿದ್ಳು. ಈ ಬಗ್ಗೆ ಮಾಹಿತಿ ತಿಳಿದು ಶುಕ್ರವಾರ ಅಂಗಡಿ ಬಳಿ ಸಿಸಿಬಿ ಟೀಂ ಹೋಗಿತ್ತು. ಈ ವೇಳೆ ದೆಹಲಿಯಿಂದ ಡ್ರಗ್ಸ್ ತಂದು ಕೊಡಬೇಕಾದ್ರೆ ರೆಡ್ ಹ್ಯಾಂಡಗಿ ರೋಜ್ಲೈಮ್ ಸಿಕ್ಕಿ ಬಿದ್ದಿದ್ದಾಳೆ.
ಇನ್ನೂ ದೆಹಲಿಯಿಂದ ಡ್ರಗ್ಸ್ ತಂದಿದ್ದ ಜೂಲಿಯಟ್ ಎಂಬ ಮಹಿಳೆ ಪರಾರಿಯಾಗಿದ್ದು, ಸದ್ಯ ಸಿಸಿಬಿ ಪೊಲೀಸ್ರು 24 ಕೋಟಿ ಡ್ರಗ್ಸ್ ಜೊತೆಗೆ 70 ಸಿಮ್‌ಗಳನ್ನು ಸೀಜ್ ಮಾಡಿದ್ದಾರೆ. 5 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ರೋಜ್ಲೈಮ್ ವೀಸಾ ಅವಧಿ ಮುಗಿದರೂ ಬೆಂಗಳೂರಿನಲ್ಲಿ ವಾಸವಿದ್ದಾಳೆ. ಸದ್ಯ ಕೆ.ಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಾರಿಯಾಗಿರೋ ಜೂಲಿಯೇಟ್‌ಗಾಗಿ ಶೋಧ ನಡೆಸಿದ್ದಾರೆ. ಇದನ್ನೂ ಓದಿ: ಅಭಿಮಾನದಿಂದ ನಟರನ್ನು ನಂಬಿ ಯಾರೂ ಮೋಸಹೋಗಬೇಡಿ: ಎ6 ಜಗದೀಶ್ ತಾಯಿ ಕಣ್ಣೀರು