ಕೈರೋ: ಈಜಿಪ್ಟ್ ನ ಉತ್ತರ ಭಾಗದ ಸಿನಾಯ್ ಪ್ರಾಂತ್ಯದ ಮಸೀದಿಯೊಂದರಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಬಾಂಬ್ ಸ್ಫೋಟಿಸಿ ಹಾಗೂ ಗುಂಡಿನ ದಾಳಿ ನಡೆಸಿ 230 ಮಂದಿಯನ್ನ ಕೊಂದಿದ್ದಾರೆ.
ಘಟನೆಯಲ್ಲಿ 109ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಎಲ್-ಆರಿಷ್ ಪ್ರಾಂತ್ಯದ ರಾಜಧಾನಿ ಬಿರ್ ಅಲ್ ಅಬ್ದ್ ನಗರ ಅಲ್-ರವ್ದಾಹ್ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.
Advertisement
Advertisement
ಶುಕ್ರವಾರದ ಪ್ರಾರ್ಥನೆ ಮುಗಿಯುತ್ತಿದ್ದಂತೆಯೇ ಮಸೀದಿಯ ಬಳಿ ಉಗ್ರರು ಬಾಂಬ್ ದಾಳಿ ನಡೆಸಿದ್ದಾರೆ. ಜೀಪಿನಲ್ಲಿ ಗನ್‍ಗಳನ್ನು ಹಿಡಿದು ಬಂದಿದ್ದ ಸುಮಾರು 40 ಉಗ್ರರು, ಆತಂಕದಿಂದ ಓಡುತ್ತಿದ್ದ ಜನರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರ ಅಟ್ಟಹಾಸಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಗಣ್ಯರು ಖಂಡನೆ ವ್ಯಕ್ತಪಡಿಸಿದ್ದಾರೆ.
Advertisement
Advertisement
ಇನ್ನು ಘಟನೆಯಲ್ಲಿ ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಳಿಕ ಮಸೀದಿಯ ಸುತ್ತಮುತ್ತ ಹೈ ಅಲರ್ಟ್ ಘೋಷಿಸಲಾಗಿದೆ. ಈವರೆಗೆ ಘಟನೆಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ ಅಂತ ವರದಿಯಾಗಿದೆ.
The terror attack in #Egypt is yet another mindless and inhuman act of intolerant elements. Needs to be condemned and fought against unequivocally. My thoughts and prayers with all the innocent lives lost today. May the families find strength in these difficult times.
— Pranab Mukherjee Legacy Foundation- PMLF (@CitiznMukherjee) November 24, 2017
Horrible and cowardly terrorist attack on innocent and defenseless worshipers in Egypt. The world cannot tolerate terrorism, we must defeat them militarily and discredit the extremist ideology that forms the basis of their existence!
— Donald J. Trump (@realDonaldTrump) November 24, 2017
Devastating news of the attack in #Egypt. Targeting worshippers takes this to a whole new level. My heart goes out to them. May the Almighty grant Mercy to all involved as well as families and victims of this senseless act.
— Mufti Menk (@muftimenk) November 24, 2017
https://twitter.com/kabhishek744/status/934115547943288832