ಜೈಪುರ: ಕಾಮುಕರಿಂದ ತಪ್ಪಿಸಿಕೊಳ್ಳಲು 23 ವರ್ಷದ ನೇಪಾಳ ಮೂಲದ ಯುವತಿ ಮೂರನೇ ಮಹಡಿಯಿಂದ ಜಿಗಿದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಸಂತ್ರಸ್ತ ಯುವತಿ ಲೋಕೇಶ್ ಸೈನಿ (19) ಮತ್ತು ಕಮಲ್ ಸೈನಿ (24) ಎಂಬಿಬ್ಬರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶನಿವಾರ ರಾತ್ರಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ದಕ್ಷಿಣ ಜೈಪುರ ಎಸಿಪಿ ಕೆ.ಕೆ.ಅವಸ್ತಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾಮುಕರಿಂದ ತಪ್ಪಿಸಿಕೊಳ್ಳಲು 3ನೇ ಮಹಡಿಯಿಂದ ಹಾರಿದ್ಳು- ಹೈ ವೋಲ್ಟೆಜ್ ತಂತಿಯಲ್ಲಿ ಸಿಲುಕಿಕೊಂಡ ಬಾಲಕಿ!
ಆರೋಪಿಗಳು ಯುವತಿಯನ್ನು ಮುಹಾನ ಏರಿಯಾದ ಅಪಾರ್ಟ್ ಮೆಂಟ್ ನಲ್ಲಿ ಕೂಡಿ ಹಾಕಿ ಶುಕ್ರವಾರ ಮತ್ತು ಶನಿವಾರ ಅತ್ಯಾಚಾರ ಎಸೆಗಿದ್ದಾರೆ. ಕಾಮುಕರಿಂದ ತಪ್ಪಿಸಿಕೊಂಡು ಯುವತಿ ವಿವಸ್ತ್ರಳಾಗಿಯೇ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಹೊರ ಬಂದಿದ್ದಾಳೆ. ಘಟನಾ ಸ್ಥಳ ಜೈಪುರ ನಗರದಿಂದ 18 ಕಿ.ಮೀ ದೂರದಲ್ಲಿದೆ ಎಂದು ಪೊಲೀಸರು ಹೇಳಿದ್ದಾರೆ.
ಸದ್ಯ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ವೈದ್ಯಕೀಯ ಪರೀಕ್ಷೆ ಪೂರ್ಣಗೊಂಡಿದ್ದು, ಸಂತ್ರಸ್ತೆ ವಿಶ್ರಾಂತಿಯಲ್ಲಿದ್ದಾಳೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಮುಹಾನ ಪೊಲೀಸ್ ಠಾಣೆಯ ಅಧಿಕಾರಿ ದೇವೇಂದ್ರ ಕುಮಾರ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv