ಬೆಂಗಳೂರು: ನಮ್ಮ ಪ್ರೀತಿಯ ಅಪ್ಪು ಪುನೀತ್ ರಾಜ್‍ಕುಮಾರ್ ನಿಧನರಾಗಿ 2 ವಾರಗಳೇ ಕಳೆದ್ರೂ ಕಂಠೀರವ ಸ್ಟುಡಿಯೋದಲ್ಲಿರುವ ರಾಜಕುಮಾರನ ಸಮಾಧಿ ದರ್ಶನಕ್ಕೆ ಜನಸಾಗರವೇ ಹರಿದು ಬರ್ತಿದೆ. ಮಳೆ ಇರಲಿ, ಚಳಿ ಇರಲಿ ಯಾವುದನ್ನು ಲೆಕ್ಕಿಸದೇ ಹಿರಿಯರು, ಕಿರಿಯರು, ಅಂಗವಿಕಲರು ಸೇರಿದಂತೆ ಜನ ಗುಂಪು ಗುಂಪಾಗಿ ಆಗಮಿಸ್ತಿದ್ದಾರೆ.
Advertisement
ರಾಜ್ಯ ಅಂತಾರಾಜ್ಯ ಸೇರಿದಂತೆ ಪ್ರತಿನಿತ್ಯ ನಾನಾ ಭಾಗಗಳಿಂದ ಆಗಮಿಸಿ ದರ್ಶನ ಪಡೆಯುತ್ತಿದ್ದಾರೆ. ಕಳೆದ 13 ದಿನದಲ್ಲಿ 2 ಲಕ್ಷದ 26 ಸಾವಿರ ಜನರಿಂದ ಅಪ್ಪು ಸಮಾಧಿ ದರ್ಶನ ಪಡೆದ್ರು. ಒಟ್ಟಿನಲ್ಲಿ ಅಪ್ಪು ನಿಧನವಾಗಿ ವಾರಗಳು ಉರುಳಿದರೂ ಸಮಾಧಿ ದರ್ಶನ ಪಡೆಯುವವರ ಸಂಖ್ಯೆ ಇನ್ನೂ ತಗ್ಗಿಲ್ಲ. ಲಕ್ಷಾಂತರ ಜನರಿಂದ ಅಂತಿಮ ದರ್ಶನದ ಬಳಿಕವೂ ಜನ ಸಾಗರ ತಗ್ಗಿಲ್ಲ. ಇದನ್ನೂ ಓದಿ: ನಾಳೆ 3 ಗಂಟೆಗೆ ಅರಮನೆ ಮೈದಾನದಲ್ಲಿ ಪುನೀತ ನಮನ- 1,500 ಮಂದಿಗೆ ಮಾತ್ರ ಅವಕಾಶ
Advertisement
Advertisement
ಯಾವ್ಯಾವ ದಿನ ಎಷ್ಟೆಷ್ಟು ಅಭಿಮಾನಿಗಳಿಂದ ದರ್ಶನ..?
ನವೆಂಬರ್ 2 ರಂದು 1 ಸಾವಿರ, ನವೆಂಬರ್ 3 ರಂದು 25 ಸಾವಿರ, ನವೆಂಬರ್ 4 ರಂದು 25 ಸಾವಿರ, ನವೆಂಬರ್ 5 ರಂದು 35 ಸಾವಿರ, ನವೆಂಬರ್ 6 ರಂದು 22 ಸಾವಿರ, ನವೆಂಬರ್ 7 ರಂದು 36 ಸಾವಿರ, ನವೆಂಬರ್ 8 ರಂದು 14 ಸಾವಿರ, ನವೆಂಬರ್ 9 ರಂದು 14 ಸಾವಿರ, ನವೆಂಬರ್ 10 ರಂದು 8 ಸಾವಿರ, ನವೆಂಬರ್ 11 ರಂದು 5 ಸಾವಿರ, ನವೆಂಬರ್ 12 ರಂದು 8 ಸಾವಿರ, ನವೆಂಬರ್ 13 ರಂದು 10 ಸಾವಿರ, ನವೆಂಬರ್ 14 ರಂದು 23 ಸಾವಿರ ಮಂದಿ ದರ್ಶನ ಪಡೆದಿದ್ದಾರೆ.
Advertisement
ಅಕ್ಟೋಬರ್ 29ರ ಶುಕ್ರವಾರದಮದು ಬೆಳಗ್ಗೆ ಅಪ್ಪು ಆಯಾಸಗೊಂಡಿದ್ದರು. ಕೂಡಲೇ ಅವರು ಸ್ಥಳೀಯ ರಮಣಶ್ರೀ ಕ್ಲಿನಿಕ್ ಗೆ ತೆರಳಿದ್ದಾರೆ. ಅಲ್ಲಿ ಇಸಿಜಿ ಮಾಡಿಸಿಕೊಂಡು ಇನ್ನೇನು ಮನೆ ಕಡೆ ತೆರಳುವಷ್ಟರಲ್ಲಿ ಅಲ್ಲಿಯೇ ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಕಾರಿನಲ್ಲಿಯೇ ವಿಕ್ರಂ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಅದು ಫಲಕಾರಿಯಾಗದೇ ನಿಧನರಾಗಿದ್ದರು.