ಕೈರೋ: ಉತ್ತರ ಈಜಿಪ್ಟ್‌ನ (Egypt) ದಕಹ್ಲಿಯಾ ಪ್ರಾಂತ್ಯದಲ್ಲಿ ಪ್ರಯಾಣಿಸುತ್ತಿದ್ದ ಮಿನಿಬಸ್‌ವೊಂದು ಕಾಲುವೆಗೆ (Canal) ಉರುಳಿಬಿದ್ದ ಪರಿಣಾಮ 22 ಮಂದಿ ಮೃತಪಟ್ಟಿದ್ದು, 7 ಮಂದಿ ಗಾಯಗೊಂಡಿದ್ದಾರೆ.
22 killed as minibus falls into canal in Egypt
Read @ANI Story | https://t.co/YpHLGNq9Do#Egypt #RoadAccident #Minibus pic.twitter.com/UK2pC7sCfp
— ANI Digital (@ani_digital) November 12, 2022
Advertisement
ರಾಜಧಾನಿ ಕೈರೋದ ಈಶಾನ್ಯಕ್ಕೆ 100 ಕಿಮೀ ದೂರದಲ್ಲಿರುವ ದಕಾಹ್ಲಿಯಾ ಪ್ರಾಂತ್ಯದಲ್ಲಿ ಅಪಘಾತ (Egypt Bus Accident) ಸಂಭವಿಸಿದೆ. ಬಸ್‌ನಲ್ಲಿ ಸುಮಾರು 46 ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನಿಂದ ಸ್ಟೇರಿಂಗ್ ನಿಯಂತ್ರಣ ಕಳೆದುಕೊಂಡಿದ್ದು, ಕಾಲುವೆಗೆ ಉರುಳಿದೆ. ಅಪಘಾತದಲ್ಲಿ 3 ಮಕ್ಕಳು ಸೇರಿ 22 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯದ (Health Ministry) ಅಧಿಕಾರಿ ಡಾ.ಶೆರಿಫ್ ಮಕೀನ್ ತಿಳಿಸಿದ್ದಾರೆ. ಇದನ್ನೂ ಓದಿ: ವಿನಯ್ ಗುರೂಜಿ ವಿರುದ್ಧ ಅಪಪ್ರಚಾರ – ಪ್ರತಿಭಟನೆಗೆ ಸಜ್ಜಾದ ಭಕ್ತವೃಂದ
Advertisement
Advertisement
ಘಟನಾ ಸ್ಥಳಕ್ಕೆ ಒಟ್ಟು 18 ಅಂಬುಲೆನ್ಸ್ಗಳನ್ನು ಕಳುಹಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ. ಮೃತರು ಹಾಗೂ ಗಾಯಗೊಂಡ ಕುಟುಂಬಗಳಿಗೆ ಈಗಾಗಲೇ ಪರಿಹಾರ ಘೋಷಿಸಲಾಗಿದೆ. ಇದನ್ನೂ ಓದಿ: 150 ವರ್ಷಗಳ ಬಳಿಕ ಧಾರವಾಡಕ್ಕೆ ಭೇಟಿ ನೀಡಿದ ಕನ್ನಡ ನಿಘಂಟು ತಜ್ಞ ಕಿಟೆಲ್ ಕುಟುಂಬ
Advertisement
10.3 ಕೋಟಿ ಜನಸಂಖ್ಯೆ ಹೊಂದಿರುವ ಈಜಿಪ್ಟ್ನಲ್ಲಿ ರಸ್ತೆ ಅಪಘಾತಗಳು ಸಹಜವಾಗಿದೆ. ಕಳಪೆ ರಸ್ತೆಗಳು ಹಾಗೂ ಟ್ರಾಫಿಕ್ ನಿಯಮ ಉಲ್ಲಂಘನೆಯಿಂದಾಗಿ ಅಪಘಾತಗಳು ಹೆಚ್ಚಾಗಿವೆ. ಪ್ರತಿ ವರ್ಷವೂ ಸಾವಿರಾರು ಜೀವಗಳನ್ನು ಬಲಿ ತೆಗೆದುಕೊಳ್ಳುತ್ತಿವೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ (Transport Safety Record) 2021ರಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ ಸುಮಾರು 7 ಸಾವಿರ ಜನರು ಸಾವನ್ನಪ್ಪಿದ್ದಾರೆ. ಕಳೆದ ಜುಲೈನಲ್ಲೂ ಭಾರೀ ರಸ್ತೆ ಅಪಘಾತ ಸಂಭವಿಸಿ 25 ಜನರು ಸ್ಥಳದಲ್ಲೇ ಮೃತಪಟ್ಟಿದ್ದರು. 35 ಮಂದಿ ಗಾಯಗೊಂಡಿದ್ದರು.