ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಮತ್ತೆ ಏರಿಕೆಯಾಗಿದೆ. ನಿನ್ನೆ 1,736 ಇದ್ದ ಸೋಂಕಿನ ಸಂಖ್ಯೆ ಇಂದು ರಾಜ್ಯದಲ್ಲಿ 2,136ಕ್ಕೆ ಏರಿಕೆ. ನಿನ್ನೆ ಯಾವುದೇ ಸಾವು ಪ್ರಕರಣ ವರದಿಯಾಗಿರಲಿಲ್ಲ. ಇಂದು ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.
ಇಂದು ರಾಜ್ಯದಲ್ಲಿ 1,845 ಮಂದಿ ಕೊರೊನಾದಿಂದ ಗುಣಮುಖರಾಗಿ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ 39,61,187 ಮಂದಿ ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ. ಇದುವೆರೆಗೆ ಒಟ್ಟು 40,108 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಇಂದಿನ ಪಾಸಿಟಿವಿಟಿ ದರ ಶೇ.6.59 ಇದೆ. 11,185 ಸಕ್ರಿಯ ಪ್ರಕರಣಗಳಿವೆ. ಇದನ್ನೂ ಓದಿ: ಮಾಧ್ಯಮ ಮಾನ್ಯತಾ ಸಮಿತಿ ರಚನೆ: ಪಬ್ಲಿಕ್ ಟಿವಿಯ ರವೀಶ್ ಸದಸ್ಯರಾಗಿ ನೇಮಕ
ಇಂದು 32,399 ಮಂದಿಯನ್ನು (8,160 ರ್ಯಾಪಿಡ್ ಆ್ಯಂಟಿಜನ್, 24,239 ಆರ್ಟಿ-ಪಿಸಿಆರ್) ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರೊಂದಿಗೆ ಇಲ್ಲಿಯವರೆಗೆ 6,79,03,781 ಮಂದಿಯನ್ನು ಟೆಸ್ಟ್ ಮಾಡಲಾಗಿದೆ. ಇಂದು 2,99,216 ಮಂದಿ ಕೊರೊನಾ ಲಸಿಕೆ ಪಡೆದುಕೊಂಡಿದ್ದಾರೆ.
ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ ಬೆಂಗಳೂರು ನಗರದಲ್ಲಿ 1,584 ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 30, ಬಾಗಲಕೋಟೆ 26, ಬಳ್ಳಾರಿ 31, ಬೆಳಗಾವಿ 27, ಬೀದರ್ 5, ಚಾಮರಾಜನಗರ 18, ಚಿಕ್ಕಬಳ್ಳಾಪುರ 7, ಚಿಕ್ಕಮಗಳೂರು 4, ಚಿತ್ರದುರ್ಗ 1, ದಕ್ಷಿಣ ಕನ್ನಡ 14, ದಾವಣಗೆರೆ 14, ಧಾರವಾಡ 78, ಗದಗ 1, ಹಾಸನ 33, ಹಾವೇರಿ 3, ಕಲಬುರಗಿ 36, ಕೊಡಗು 14, ಕೋಲಾರ 23, ಕೊಪ್ಪಳ 5, ಮಂಡ್ಯ 14, ಮೈಸೂರು 71, ರಾಯಚೂರು 27, ರಾಮನಗರ 3, ಶಿವಮೊಗ್ಗ 16, ತುಮಕೂರು 23, ಉಡುಪಿ 12, ಉತ್ತರ ಕನ್ನಡ 9, ವಿಜಯಪುರ 6 ಹಾಗೂ ಯಾದಗಿರಿಯಲ್ಲಿ 1 ಪ್ರಕರಣ ಪತ್ತೆಯಾಗಿದೆ. ಇದನ್ನೂ ಓದಿ: ಆ.5 ರಿಂದ 15 ರವರೆಗೆ ASI ಪ್ರವಾಸಿ ತಾಣಗಳ ಪ್ರವೇಶ ಉಚಿತ