Bengaluru CityDistrictsKarnatakaLatestMain Post
ಮಾಧ್ಯಮ ಮಾನ್ಯತಾ ಸಮಿತಿ ರಚನೆ: ಪಬ್ಲಿಕ್ ಟಿವಿಯ ರವೀಶ್ ಸದಸ್ಯರಾಗಿ ನೇಮಕ

Advertisements
ಬೆಂಗಳೂರು: ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವಾರ್ತಾ ಇಲಾಖೆ ಆಯುಕ್ತರ ಅಧ್ಯಕ್ಷತೆಯಲ್ಲಿ 12 ಸದಸ್ಯರ ಸಮಿತಿ ರಚಿಸಲಾಗಿದ್ದು, ಪಬ್ಲಿಕ್ ಟಿವಿಯ ರಾಜಕೀಯ ವಿಭಾಗದ ಮುಖ್ಯಸ್ಥ ಹೆಚ್ ಎಸ್ ರವೀಶ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಾರೆ.
ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ, ಟಿವಿ9 ಹರಿಪ್ರಸಾದ್, ವಿಜಯಕುಮಾರ್ ಮಲಗಿಹಾಳ್, ಶಂಕರ ಪಾಗೋಜಿ, ವಿನೋದ್ ಕುಮಾರ್ ನಾಯಕ್, ಪುಣ್ಯವತಿ, ಹನುಮಂತರಾವ್ ಭೈರಾಮಡಗಿ, ಮೋಹನ್ ಕುಲಕರ್ಣಿ, ಕೆಎಸ್ ಗಣೇಶ್ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಇದನ್ನೂ ಓದಿ: ಆ.5 ರಿಂದ 15 ರವರೆಗೆ ASI ಪ್ರವಾಸಿ ತಾಣಗಳ ಪ್ರವೇಶ ಉಚಿತ
ಕರ್ನಾಟಕ ಮಾಧ್ಯಮ ಮಾನ್ಯತಾ ಸಮಿತಿ ಅವಧಿ ಎರಡು ವರ್ಷಗಳಾಗಿದ್ದು, ಪತ್ರಕರ್ತರನ್ನು ಗುರುತಿಸಿ ಮಾಧ್ಯಮ ಮಾನ್ಯತೆ ನೀಡಲು ರಾಜ್ಯ ಸರ್ಕಾರಕ್ಕೆ ಸಮಿತಿ ನೆರವಾಗಲಿದೆ.