ಲಕ್ನೋ: ಬದಲಾದ ಜೀವನಶೈಲಿಂದ (Life Style) ಇತ್ತೀಚೆಗೆ ಯುವಕ-ಯುವತಿಯರಲ್ಲಿ ಹೃದಯಾಘಾತ (Heart Attack) ಹೆಚ್ಚುತ್ತಿದೆ. ಹಾಗೆಯೇ ಮಧ್ಯಪ್ರದೇಶದಲ್ಲಿ ಸಾಯಿಬಾಬಾ ಮಂದಿರದಲ್ಲಿಯೇ ಯುವಕನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ವಿಷಯ ನಿನ್ನೆಯಷ್ಟೇ ಕೇಳಿಬಂದಿತ್ತು.
ಈ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ (Uttar Pradesh) ಮದುವೆ ವೇದಿಕೆಯಲ್ಲೇ 21 ವರ್ಷದ ಯುವತಿಯೊಬ್ಬಳು ತಾಳಿಕಟ್ಟುವ ಕೊನೆಯ ಕ್ಷಣದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಲಕ್ನೋನ ಮಲಿಹಾಬಾದ್ ನಗರ ವ್ಯಾಪ್ತಿಯ ಭದ್ವಾನ ಗ್ರಾಮದಲ್ಲಿ ಡಿಸೆಂಬರ್ 3ರಂದು ಶಿವಾಂಗಿ ಶರ್ಮಾ ವಿವಾಹ (Marriage) ಇತ್ತು. ಭಾವಿ ಪತಿಯೊಂದಿಗೆ ವೇದಿಕೆ ಮೇಲೆ ಶಿವಾಂಗಿ ಸಂತಸದಿಂದ ಕಾಲ ಕಳೆಯುತ್ತಿದ್ದರು. ಇದನ್ನೂ ಓದಿ: ಪ್ರೀತಿಗಾಗಿ ಎಲ್ಲಾ ಸಂಬಂಧ ಕಡಿದುಕೊಂಡ್ಳು- ಆತನನ್ನೇ ನಂಬಿದ್ದ ಆಕೆಗೆ ಸಿಕ್ಕಿದ್ದು ಸಾವು!
ಆಹಾರ ಬದಲಾಯಿಸಿದ ಬಳಿಕ ಶಿವಾಂಗಿ ಕುಸಿದಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅಷ್ಟೊತ್ತಿಗಾಗಲೇ ಆಕೆ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಇದಕ್ಕೆ ಹಠಾತ್ ಹೃದಯಾಘಾತವೇ ಕಾರಣ ಎಂದು ವೈದ್ಯರು ದೃಢಪಡಿಸಿದ್ದಾರೆ. ಇದನ್ನೂ ಓದಿ: ತುರಹಳ್ಳಿ ಫಾರೆಸ್ಟ್‌ನಲ್ಲಿ ಆಪರೇಷನ್ ಚಿರತೆ- ಬೆಂಗ್ಳೂರಿನಲ್ಲೂ `ರುದ್ರಪ್ರಯಾಗ’ದ ಥ್ರಿಲ್ಲರ್ ಸ್ಟೋರಿ
ಮದುವೆಗಿಂತ 15-20 ದಿನಕ್ಕೂ ಮೊದಲು ರಕ್ತದೊತ್ತಡ ಹಾಗೂ ಜ್ವರದಿಂದ ಬಳಲುತ್ತಿದ್ದ ಶಿವಾಂಗಿ ಚಿಕಿತ್ಸೆ ಪಡೆದಿದ್ದರು. ಇದಾದ ಬಳಿಕ ಸುಧಾರಿಸಿಕೊಂಡಿದ್ದರು. ಆದರೆ ಹಸೆಮಣೆ ಏರಬೇಕಾದ ದಿನವೇ ಹಸುನೀಗಿದ್ದಾರೆ. ಸದ್ಯ ಮದುವೆ ಸಂಭ್ರಮದಲ್ಲಿದ್ದ ಶಿವಾಂಗಿಯ ವೀಡಿಯೋ ಈಗ ಜಾಲತಾಣದಲ್ಲಿ ಹರಿದಾಡುತ್ತಿದೆ.