ಭಾರತದಲ್ಲಿ ಹೋಂಡಾ ಕಂಪನಿಯು ಅತ್ಯಾಕರ್ಶಕ ವಿನ್ಯಾಸದೊಂದಿಗೆ ಸಿದ್ಧಪಡಿಸಿರುವ H’ness CB350 ಮತ್ತು CB350RS 2023ರ ಮಾದರಿ ಆಕರ್ಷಕ ಬೈಕ್ ಗಳನ್ನು ಬಿಡುಗಡೆ ಮಾಡಿದೆ. ಮಾರ್ಚ್ ಅಂತ್ಯದ ವೇಳೆಗೆ ಶೋರೂಮ್‌ಗಳಿಗೆ ವಿತರಣೆಯಾಗಲಿದ್ದು, ಏಪ್ರಿಲ್ 1ರಿಂದ ಮಾರುಕಟ್ಟೆಗೆ ಬರಲಿವೆ. ಜೊತೆಗೆ ಹೊಸ ಮಾನದಂಡಗಳಿಗೆ ಅನುಗುಣವಾಗಿರಲಿವೆ.
ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಹೋಂಡಾ ಬೈಕ್ 2.09 ಲಕ್ಷ ರೂ. ಬೆಲೆಯಿಂದ ಆರಂಭವಾಗಲಿದೆ. ಹೋಂಡಾ CB350 ಹಾಗೂ CB350RS 6 ವೆರೈಟಿಗಳಲ್ಲಿ ಮಾರುಕಟ್ಟೆಗೆ ಬರುತ್ತಿದೆ. H’ness CB350 (DLx) 2.09 ಲಕ್ಷರೂ, H’ness CB350 (DLX Pro) 2.12 ಲಕ್ಷ ರೂ. H’ness CB350 (DLX Pro Chrome) 2.14 ಲಕ್ಷ ರೂ., CB350RS (DLX) 2.14 ಲಕ್ಷ ರೂ, CB350RS (DLX Pro) ರೂ. 2.17 ಲಕ್ಷ ರೂ. ಹಾಗೂ CB350RS (DLX Pro Dual-Tone) ರೂ. ಬೆಲೆ ಇರಲಿದೆ. ಇದನ್ನೂ ಓದಿ: ಬೋಲ್ಟ್ ಬಿಗಿಯಿಲ್ಲವೆಂದು 3,470 ಕಾರುಗಳನ್ನು ಹಿಂದಕ್ಕೆ ಪಡೆದ ಟೆಸ್ಲಾ
Advertisement
Advertisement
ನೀಲಿ, ಬೂದು ಬಣ್ಣ, ಕಪ್ಪು ಮಿಶ್ರಿತ ಕೆಂಪು ಬಣ್ಣಗಳಿಂದ ಕೂಡಿರುವ ಈ ಬೈಕ್‌ಗಳು, ಬೈಕ್ ಪ್ರಿಯರಿಗೆ ನೆಚ್ಚಿನ ಆಯ್ಕೆಯಾಗುವ ವಿಶ್ವಾಸ ಮೂಡಿಸಿವೆ. ಹೆಡ್ ಲ್ಯಾಂಪ್ (ಹೆಡ್‌ಲೈಟ್) ವಿನ್ಯಾಸ ನೋಡಲು ಅತ್ಯಾಕರ್ಷವಾಗಿದೆ. ಜೊತೆಗೆ ಸಿಂಗಲ್ ಪೀಸ್ ಲೆದರ್ ಸೀಟ್ ಇದ್ದು, ಹಲವು ವೈಶಿಷ್ಟ್ಯತೆಗಳಿಂದ ಕೂಡಿದೆ. ಈ ಎರಡೂ ಹೊಸ ಮಾದರಿಯ ಬೈಕ್‌ಗಳು 350 ಸಿಸಿ ಇಂಜಿನ್‌ಗಳನ್ನ ಹೊಂದಿರುತ್ತವೆ. ಜೊತೆಗೆ 5,500 ಆರ್‌ಪಿಎಂ(ರೆವೊಲ್ಯೂಷನ್ಸ್ ಪರ್ ಮಿನಿಟ್) ಮತ್ತು 3,000 ಆರ್‌ಎಂಪಿ ಸ್ಪೀಟ್ ಮಿತಿ ಇರಲಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿವೆ. ಇದನ್ನೂ ಓದಿ: ಕಾರುಗಳಿಗೂ ಚಾಟ್‌ಜಿಪಿಟಿ ಅಳವಡಿಸಲು General Motors ಚಿಂತನೆ
Advertisement
ಇದರೊಂದಿಗೆ ಹೋಂಡಾ ಸಂಸ್ಥೆ CB350RS ಮತ್ತು ಹೆಚ್‌ನೆಸ್ CB350 ಬೈಕ್‌ಗಳಿಗಾಗಿ ಪರಿಕರಗಳ ಪ್ಯಾಕ್‌ಗಳನ್ನು ಬಿಡುಗಡೆ ಮಾಡಿದೆ. ಒಟ್ಟು 6 ಆಕ್ಸೆಸರಿ ಪ್ಯಾಕ್‌ಗಳಿವೆ. ಹೆಚ್‌ನೆಸ್ CB350ಗೆ 4 ಮತ್ತು CB350RS ಮೋಟಾರ್‌ಸೈಕಲ್‌ಗೆ 2 ಪ್ಯಾಕ್‌ಗಳಿವೆ. ಇದರಲ್ಲಿ ವಿಶೇಷ ಅಂದ್ರೆ ಬಿಡಿಭಾಗಗಳ ಪ್ಯಾಕ್ ಅನ್ನು ಬಂಡಲ್‌ನಲ್ಲಿಯೂ ಖರೀದಿಸಬಹುದು ಅಥವಾ ಬಿಡಿಭಾಗಗಳಾಗಿಯೇ ಖರೀದಿಸಬಹುದು ಎಂದು ಹೇಳಿದೆ.