ಚಾಮರಾಜನಗರ: ನಾನು ಕೋಲು ಹಿಡಿದು ರಾಜಕಾರಣ ಮಾಡಲ್ಲ. 80ರ ನಂತರ ಚುನಾವಣೆಗೆ ನಿಲ್ಲಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಕೊಳ್ಳೇಗಾಲದ ಬಸ್ತಿಪುರ ಬಡಾವಣೆಯಲ್ಲಿ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 40 ವರ್ಷ ಪ್ರಾಮಾಣಿಕವಾಗಿ ಜನಸೇವೆ ಮಾಡಿದ್ದೇನೆ. ಮುಂದೆಯೂ ಸಹ ಮಾಡುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಮಧ್ಯಂತರ ಚುನಾವಣೆಗೆ ಆಗ್ರಹ – ನನ್ನ ಮಹಾ ಸರ್ಕಾರವನ್ನು ಜನರೇ ಉರುಳಿಸಲಿ ಎಂದ ಉದ್ಧವ್ ಠಾಕ್ರೆ
Advertisement
Advertisement
ನಾನು ಶಾಸಕನಾಗಿ 39 ವರ್ಷ ಪೂರೈಸಿದ್ದೇನೆ. ಮುಂದಿನ 5 ವರ್ಷ ಅಧಿಕಾರ ಮುಗಿಯುವುದರೊಳಗೆ ನನಗೆ 80 ವರ್ಷ ಕಳೆಯುತ್ತದೆ. ಹಾಗಾಗಿ 2023ರ ಚುನಾವಣೆಯೇ ನನ್ನ ಕೊನೆಯ ಚುನಾವಣೆ ಆಗಲಿದೆ. 80 ವರ್ಷ ಕಳೆದ ನಂತರ ನಾನು ಕೋಲು ಹಿಡಿದು ರಾಜಕಾರಣ ಮಾಡುವುದಿಲ್ಲ ಎಂದು ತಮ್ಮ ರಾಜಕೀಯ ನಿವೃತ್ತಿಯ ಸೂಚನೆ ನೀಡಿದ್ದಾರೆ. ಇದನ್ನೂಓದಿ: ಅಮರನಾಥದಲ್ಲಿ ಮೇಘಸ್ಪೋಟ, 8 ಮಂದಿ ಸಾವು – NDRF, BSF ತಂಡಗಳಿಂದ ಕಾರ್ಯಾಚರಣೆ
Advertisement
Advertisement
ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಬಳಿಕ ಸಿದ್ದರಾಮಯ್ಯ ಅವರು `ಸಿದ್ದಪ್ಪ ಸ್ವಾಮಿ ಬನ್ನಿ, ಪವಾಡ ಗೆದ್ದಯ್ಯ ನೀವೇ ಬನ್ನಿ’ ಹಾಗೂ `ಆನು ಮಲೆ ಜೇನು ಮಲೆ, ಗುಂಜುಮಲೆ ಗುಲಗಂಜಿಮಲೆ’ ಮಲೆ ಮಹದೇಶ್ವರ ಪದಗಳನ್ನಾಡಿ ಮಹದೇಶ್ವರದ ಬೆಟ್ಟದಲ್ಲಿ ನಡೆದ ಪ್ರಸಂಗವನ್ನು ಹಂಚಿಕೊಂಡರು. ಇದನ್ನೂ ಓದಿ: ಅಮರನಾಥದಲ್ಲಿ ಮೇಘಸ್ಪೋಟ, 8 ಮಂದಿ ಸಾವು – NDRF, BSF ತಂಡಗಳಿಂದ ಕಾರ್ಯಾಚರಣೆ
ಸಿದ್ದರಾಮೋತ್ಸವ ಅಲ್ಲ ಇದು ಅಮೃತ ಮಹೋತ್ಸವ: ನಾನು ಶಾಲೆಗೆ ಸೇರುವಾಗ ಅಂದಿನ ಮುಖ್ಯಶಿಕ್ಷಕರಾಗಿದ್ದ ರಾಜಪ್ಪ ಅವರು ಕೊಟ್ಟ ದಿನಾಂಕವೇ ನನ್ನ ಜನ್ಮದಿನಾಂಕವಾಗಿದೆ. ನನ್ನ ಹಿತೈಷಿಗಳು, ಅಭಿಮಾನಿಗಳು ಹಾಗೂ ಸ್ನೇಹಿತರು ಒಟ್ಟಾಗಿ ಸೇರಿ 75ನೇ ಜನ್ಮ ದಿನಾಚರಣೆಯನ್ನು ದಾವಣಗೆರೆಯಲ್ಲಿ ಆಚರಿಸುತ್ತಿದ್ದಾರೆ. ಸಿದ್ದರಾಮೋತ್ಸವ ಎಂಬುದಾಗಿ ಆರ್‌ಎಸ್‌ಎಸ್ ನವರು ಕರೆದಿದ್ದಾರೆ. ಸಿದ್ದರಾಮೋತ್ಸವ ಅಂಥಾ ಎಲ್ಲೂ ಇಲ್ಲ. ಆ ರೀತಿ ಉತ್ಸವ ನಡೆಯೋದು ಇಲ್ಲ. ಸಿದ್ದರಾಮಯ್ಯ-75 ಅಮೃತ ಮಹೋತ್ಸವ ಎಂದು ಆಚರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.