ಉಡುಪಿ: ಪ್ರಧಾನಿ ನರೇಂದ್ರ ಮೋದಿ ಜಾತಕದಲ್ಲಿ ಕಂಟಕ ಇರುವುದರಿಂದ ಪಂಚರಾಜ್ಯಗಳ ಚುನಾವಣೆಯಲ್ಲಿ ಸೋಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಕೆಲವು ಆರೋಪಗಳು ಬರುತ್ತಿದೆ ಎಂದು ಖ್ಯಾತ ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಹೇಳಿದ್ದಾರೆ.
ಉಡುಪಿಯ ಕಾಪುವಿನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಪ್ರಕಾಶ್ ಅಮ್ಮಣ್ಣಾಯ, ಮೋದಿ ಜಾತಕದಲ್ಲಿ ಬುಧಭುಕ್ತಿ ಇದೆ. ಬುಧಭುಕ್ತಿ ವಿಮೋಚನೆಯಾದ ನಂತರ ಮತ್ತೆ ಜಾತಕದಲ್ಲಿ ಒಳ್ಳೇ ದಿನಗಳು ಇದೆ ಎಂದು ಹೇಳಿದರು. ಪ್ರಧಾನಿ ಮೋದಿ ನೇತೃತ್ವದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಎನ್‍ಡಿಎ ಮಿತ್ರಕೂಟಕ್ಕೆ 280 ಸೀಟುಗಳು ಬರಲಿದೆ. ಹೆಚ್ಚು ಮಿತ್ರಪಕ್ಷಗಳು ಜೊತೆಯಾದರೆ ಸೀಟುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಿದರು.
ಜಾತ್ರೆಯ ಬಲೂನು: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಮೋದಿಯ ಗರ್ವಭಂಗ ಅಂತ ಬೀಗುತ್ತಿರುವವರು ಜಾತ್ರೆಯ ಬಲೂನುಗಳು ಎಂದು ವಿಪಕ್ಷಗಳನ್ನು ಬಣ್ಣಿಸಿದ್ದಾರೆ. ಮೋದಿ ಫುಟ್ಬಾಲ್ ಇದ್ದಂತೆ. ಚೌಕಟ್ಟಿನೊಳಗೆ ಫುಟ್ ಬಾಲ್ ಓಡಾಡುತ್ತದೆ. ಎಲ್ಲೆಲ್ಲೋ ಹಾರಿ ಹೋಗಲ್ಲ. ಬಲೂನು ಊದಿಕೊಂಡು ಆಗಸದಲ್ಲಿ ಹಾರಾಟ ಮಾಡಿ ಕೆಲವೇ ಕ್ಷಣಗಳಲ್ಲಿ ಒಡೆದುಹೋಗುತ್ತದೆ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಜಾತಕದಲ್ಲಿ ಬುಧಭುಕ್ತಿ ಇರುವುದರಿಂದ ಪ್ರಧಾನಿ ನರೇಂದ್ರ ಮೋದಿಗೆ ಕೊಂಚ ಹಿನ್ನಡೆಯಾಗುತ್ತದೆ. ಫೆಬ್ರವರಿ ನಂತರ ಕೇತುಭುಕ್ತಿ ಆಗಮನವಾಗಿ ಪ್ರಧಾನಿ ಮೋದಿಗೆ ಬರುವ ಸಮಸ್ಯೆಗಳೆಲ್ಲಾ ಪರಿಹಾರವಾಗುತ್ತದೆ ಎಂದು ಹೇಳಿದರು. ಪಂಚ ರಾಜ್ಯಗಖ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಅವಕಾಶ ಇತ್ತು. ಆದ್ರೆ ರಾಜಕೀಯ ನಾಟಕದಲ್ಲಿ ಕೊನೆ ಕ್ಷಣದ ಬದಲಾವಣೆಯಾಗಿದೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv