ಮೈಸೂರು: 2018ನೇ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ. ಇದು ನನ್ನ ಕೊನೆಯ ಚುನಾವಣೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮೈಸೂರಿನ ಹೂಟಗಳ್ಳಿಯ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ಬಾರಿಯೇ ನಾನು ಚುನಾವಣೆಯಿಂದ ದೂರ ಇರಬೇಕು ಅಂದುಕೊಂಡಿದ್ದೆ. ಆದರೆ ಹೈಕಮಾಂಡ್ ಒತ್ತಾಯದ ಮೇರೆಗೆ ಮತ್ತೆ ಚುನಾವಣೆಗೆ ನಿಲ್ಲುತ್ತಿದ್ದೇನೆ. ಅದು ನನ್ನ ಕ್ಷೇತ್ರ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಲ್ಲಬೇಕು ಎಂದು ತೀರ್ಮಾನಿಸಿದ್ದೇನೆ. ನೀವೆಲ್ಲಾ ಅಂದು ನನಗೆ ಸಹಾಯ ಮಾಡಿದಂತೆ ಇಂದು ನನಗೆ ಆಶೀರ್ವಾದ ಮಾಡಿ ಎಂದು ಹೇಳಿದರು.
Advertisement
ಯಡಿಯೂರಪ್ಪ ಖಾಲಿ ಬುಟ್ಟಿಯಲ್ಲಿ ಹಾವಿಟ್ಟುಕೊಂಡಿದ್ದೇನೆ ಎಂದು ಬೆದರಿಸುತ್ತಿದ್ದಾರೆ. ಸ್ವತಃ ಜೈಲಿಗೆ ಹೋಗಿರುವ ಗಿರಾಕಿ ಅವರು. ಅವರಿಗೆ ನನ್ನ ಬಗ್ಗೆ ಮಾತನಾಡೋಕೆ ನೈತಿಕತೆ ಎಲ್ಲಿದೆ. ನನ್ನನ್ನೇ ಬಳ್ಳಾರಿಗೆ ಬಾ ನೋಡ್ಕೋತಿನಿ ಅಂದಿದ್ದರು, ಅದಕ್ಕೆ ನಡೆದುಕೊಂಡೆ ಬಳ್ಳಾರಿಗೆ ಹೋಗಿದ್ದೆ. ಆಮೇಲೆ ರೆಡ್ಡಿ ಬ್ರದರ್ಸ್ ನಾಪತ್ತೆಯಾದರು. ಯಡಿಯೂರಪ್ಪರ ಮನೆಯಲ್ಲಿ ಹೆಗ್ಗಣ ಸತ್ತಿದೆ, ಆದರೆ ನೊಣ ಸತ್ತಿದೆ ಅಂತ ಕೂಗಾಡುತ್ತಾ ಓಡಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.
Advertisement
ಅವಕಾಶವಾದಿ ಜೆಡಿಎಸ್: ಜೆಡಿಎಸ್ ನವರು ಅವಕಾಶವಾದಿಗಳು, ಬಿಜೆಪಿ ತಿಪ್ಪರ ಲಾಗ ಹಾಕಿದರೂ ಅಧಿಕಾರಕ್ಕೆ ಬರಲ್ಲ. ಯಾರಿಗೂ ಬಹುಮತ ಬಾರದೇ ಹೋದರೆ ಸಮ್ಮಿಶ್ರ ಸರ್ಕಾರ ಮಾಡಲು ಕಾಯುತ್ತಿದ್ದಾರೆ. ಕುಮಾರಸ್ವಾಮಿ ಅವರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಆದ್ರೆ ಬೇರೆ ಯಾರೂ ಅಧಿಕಾರಕ್ಕೆ ಬರಲ್ಲ, ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಬಿಜೆಪಿ ಚುನಾವಣಾ ಪ್ರಣಾಳಿಕೆ ಸಮಿತಿ ರಚನೆ ಮಾಡಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ ಕೂಡ ಪ್ರಣಾಳಿಕೆ ರಚನೆಗೆ ಸಿದ್ಧಗೊಂಡಿದೆ. ನವೆಂಬರ್ 2ರಂದು ಬಿಜೆಪಿ ಹಮ್ಮಿಕೊಂಡಿರುವ ಪರಿವರ್ತನಾ ರ್ಯಾಲಿಗೆ ಪರ್ಯಾಯವಾಗಿ ಕಾರ್ಯತಂತ್ರ ರೂಪಿಸುವ ಸಲುವಾಗಿ ಅಕ್ಟೋಬರ್ 6ರಂದು ಶಾಸಕಾಂಗ ಸಭೆ ಕರೆಯಲು ರಾಜ್ಯ ಉಸ್ತುವಾರಿ ವೇಣುಗೋಪಾಲ್ ಸೂಚಿಸಿದ್ದಾರೆ.
Advertisement
ಸಿದ್ದರಾಮಯ್ಯ ಪತ್ನಿ ಹಾದಿಯನ್ನೇ ಸಚಿವ ಆಂಜನೇಯ ಪತ್ನಿ ಹಾಗೂ ಪುತ್ರಿ ತುಳಿದಿದ್ದು, ಆಂಜನೇಯ ಗೆಲುವಿಗಾಗಿ ಮೇಲುಕೋಟೆಯಲ್ಲಿ ಪೂಜೆ ಮಾಡಿಸಿದ್ದಾರೆ.