ಶಿವಮೊಗ್ಗ: ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡುವುದಿಲ್ಲ ಎಂದು ದೇವೇಗೌಡರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಪ್ರಜ್ವಲ್‍ರನ್ನು ಚುನಾವಣೆಗೆ ನಿಲ್ಲಿಸಬಾರದು ಎಂದು ನಾನು ಹೇಳಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಎಚ್‍ಡಿ ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಪ್ರವೇಶ ಕುರಿತಂತೆ ಇಂದು ಪ್ರತಿಕ್ರಿಯಿಸಿದ ಅವರು, ನಮ್ಮ ಕುಟುಂಬದಲ್ಲಿಯೇ ಈ ವಿಚಾರದಲ್ಲಿ ಕಲಹವಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಆದರೇ ಈ ಕುರಿತ ತೀರ್ಮಾನವನ್ನು ಎಚ್‍ಡಿ ದೇವೇಗೌಡ ಅವರು ಅಂತಿಮಗೊಳಿಸುತ್ತಾರೆ. ಈ ಬಾರಿಯ ಚುನಾವಣೆಯ ಟಿಕೆಟ್ ನೀಡುವ ವಿಚಾರವಾದಲ್ಲಿ ಯಾವುದೇ ಟೀಕೆಗಳಿಗೂ ಅವಕಾಶ ನೀಡದೇ ಎಚ್ಚರಿಕೆಯಿಂದ ಆಯ್ಕೆ ಮಾಡುತ್ತೇವೆ ಎಂದು ಹೇಳಿದರು.
Advertisement
Advertisement
ಪ್ರತಿ ಕ್ಷೇತ್ರದಲ್ಲಿಯು 4 ರಿಂದ 5 ಜನ ಟಿಕೆಟ್ ಅಕಾಂಕ್ಷಿಗಳು ಇರುವುದರಿಂದ ಒಬ್ಬರಿಗಷ್ಟೇ ಟಿಕೆಟ್ ನೀಡಲು ಸಾಧ್ಯ. ಈ ಕುರಿತು ನವೆಂಬರ್ 16 ರ ನಂತರ ಕೋರ್ ಕಮಿಟಿ ಸಭೆ ನಡೆಸಿ ಪಕ್ಷದ 150 ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬಿಡುಗಡೆಗೊಳಿಸುತ್ತೇವೆ. ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗೆ ಚುನಾವಣಾ ಕಾರ್ಯಗಳಲ್ಲಿ ತೊಡಗಿಕೊಳ್ಳುವಂತೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.
Advertisement
Advertisement
ಈ ಹಿಂದೆ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿ, ತನ್ನ ಮಗ ಪ್ರಜ್ವಲ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬುವುದು ಇನ್ನೂ ಖಚಿತವಾಗಿಲ್ಲ. ದೇವೇಗೌಡರಿಂದ ಗ್ರೀನ್ ಸಿಗ್ನಲ್ ಸಿಗಬೇಕಾಗಿದೆ ಎಂದು ಹೇಳಿದ್ದರು.
ಭವಾನಿ ರೇವಣ್ಣ ಅವರ ಹೇಳಿಕೆ ಬೆನ್ನಲ್ಲೇ ಜೆಡಿಎಸ್ ರಾಷ್ಟ್ರಾಧ್ಯಕ್ಷ ಹೆಚ್.ಡಿ ದೇವೇಗೌಡ ಅವರು ರೇವಣ್ಣನ ಪುತ್ರ ಪ್ರಜ್ವಲ್ ಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಅನುವತಿ ನೀಡಿಲ್ಲ. ನಮ್ಮ ಕುಟುಂಬದಿಂದ ರೇವಣ್ಣ ಮತ್ತು ಕುಮಾರಸ್ವಾಮಿ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಹೇಳಿದ್ದರು.
ಚನ್ನಗಿರಿ ತಾಲೂಕಿನ ತ್ಯಾವಣಿಗೆ ಗ್ರಾಮದಲ್ಲಿ ನಮ್ಮ ಹೆಚ್ ಡಿ ಕೆ, ಜೆ ಡಿ ಎಸ್ ಪಕ್ಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. pic.twitter.com/ZI12JJGtQQ
— Namma HDK (@nammahdk) November 9, 2017
ನಮ್ಮ ಹೆಚ್ ಡಿ ಕೆ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿ, ಆಲಿಸಿದರು. ಚನ್ನಗಿರಿ ಪಟ್ಟಣದಲ್ಲಿ ನಡೆಯುತ್ತಿರುವ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ನಮ್ಮ ಹೆಚ್ ಡಿ ಕೆ ಪಾಲ್ಗೊಂಡಿದ್ದಾರೆ. pic.twitter.com/p4Irm0mw7x
— Namma HDK (@nammahdk) November 9, 2017
ನಮ್ಮ ಹೆಚ್ ಡಿ ಕೆ ಜೆ ಡಿ ಎಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿದರು. ಕರ್ನಾಟಕ ವಿಕಾಸ ವಾಹಿನಿ ಯಾತ್ರೆ ಈಗ ಚನ್ನಗಿರಿ ಪಟ್ಟಣವನ್ನು ಪ್ರವೇಶಿಸಿದೆ. pic.twitter.com/3AGMi4kxO3
— Namma HDK (@nammahdk) November 9, 2017
ಜೆ ಡಿ ಎಸ್ ಪಕ್ಷಕ್ಕೆ ಬೆಂಬಲ ಘೋಷಿಸಿ ಶಿವಮೊಗ್ಗ ತುಂಗಾ ನಗರದಲ್ಲಿ ನಡೆಸಿದ ಸಭೆಯಲ್ಲಿ ನಮ್ಮ ಹೆಚ್ ಡಿ ಕೆ ಮಾತನಾಡಿದರು. pic.twitter.com/dMxfWLYOaM
— Namma HDK (@nammahdk) November 9, 2017
ನಮ್ಮ ಹೆಚ್ ಡಿ ಕೆ ಶಿವಮೊಗ್ಗ ಟಿಪ್ಪು ನಗರದ ಜೆ ಡಿ ಎಸ್ ಕಚೇರಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಜೆ ಡಿ ಎಸ್ ಕಾರ್ಯಕರ್ತ ಹಮೀದ್ ಪಕ್ಷದ ಚಟುವಟಿಕೆಗಳಿಗೆ ಕೊಡುಗೆಯಾಗಿ ನೀಡುತ್ತಿರುವ ದ್ವಿ ಚಕ್ರ ವಾಹನಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. pic.twitter.com/imDRdFs6aQ
— Namma HDK (@nammahdk) November 9, 2017
ನಮ್ಮ ಹೆಚ್ ಡಿ ಕೆ, ಬುಳ್ಳಾಪುರದಿಂದ ನಿರ್ಗಮಿಸುವ ಸಂದರ್ಭ ಎದುರಾದ ವಿಕಲಚೇತನರೊಬ್ಬರ ಮನವಿ ಸ್ವೀಕರಿಸಿ, ಆಲಿಸಿದರು. pic.twitter.com/mOcAY1AiTi
— Namma HDK (@nammahdk) November 9, 2017
ಬುಳ್ಳಾಪುರ ಗ್ರಾಮದ ರೈತ ಕುಮಾರ ನಾಯ್ಕ್ ಮನೆಯಲ್ಲಿ ನಮ್ಮ ಹೆಚ್ ಡಿ ಕೆ ಬೆಳಗಿನ ಉಪಹಾರ ಸೇವಿಸಿದರು.
ಕುಮಾರ ನಾಯ್ಕ್ ಕುಟುಂಬದ ಸದಸ್ಯರು ಸಂಭ್ರಮದಿಂದ ಉಪಹಾರ ಬಡಿಸಿ, ಉಪಚರಿಸಿದರು. pic.twitter.com/Y8sHAiFFT4
— Namma HDK (@nammahdk) November 9, 2017
ಬುಳ್ಳಾಪುರ ಗ್ರಾಮದ ರೈತ ಕುಮಾರ ನಾಯ್ಕ್ ಮನೆಯಲ್ಲಿ ನಮ್ಮ ಹೆಚ್ ಡಿ ಕೆ ಬೆಳಗಿನ ಉಪಹಾರ ಸೇವಿಸಿದರು.
ಕುಮಾರ ನಾಯ್ಕ್ ಕುಟುಂಬದ ಸದಸ್ಯರು ಸಂಭ್ರಮದಿಂದ ಉಪಹಾರ ಬಡಿಸಿ, ಉಪಚರಿಸಿದರು. pic.twitter.com/GQZAmbBu14
— Namma HDK (@nammahdk) November 9, 2017
ನಮ್ಮ ಹೆಚ್ ಡಿ ಕೆ ವಾಸ್ತವ್ಯ ಮಾಡಿದ್ದ ಬುಳ್ಳಾಪುರದ ಕರಿಬಸಪ್ಪ ಅವರ ಮನೆಯಿಂದ ನಿರ್ಗಮಿಸುವ ಮುನ್ನ, ಕುಟುಂಬ ಸದಸ್ಯರೊಂದಿಗೆ ಛಾಯಾಚಿತ್ರ ತೆಗೆಸಿಕೊಂಡರು. pic.twitter.com/rj9d3wQI0T
— Namma HDK (@nammahdk) November 9, 2017