ಬೆಂಗಳೂರು: 200 ಯೂನಿಟ್ ಉಚಿತ ವಿದ್ಯುತ್ (200 Unit Electricity Free) ಮತ್ತು ಮನೆಯ ಗೃಹಿಣಿಗೆ ಉಚಿತ 2 ಸಾವಿರ ರೂ. (Monthly Rs 2,000 For Female Head Of Every Household) ನೀಡುವ ಯೋಜನೆ ಪ್ರಕಟಿಸಿದ್ದ ಕರ್ನಾಟಕ ಕಾಂಗ್ರೆಸ್ (Karnataka Congress) ಈಗ ಷರತ್ತು ವಿಧಿಸಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ, ಪರಿಷತ್ ಪ್ರತಿಪಕ್ಷದ ನಾಯಕ ಬಿಕೆ ಹರಿಪ್ರಸಾದ್, ಆದಾಯ ತೆರಿಗೆ ಕಟ್ಟುವವರನ್ನು ಹೊರತುಪಡಿಸಿ ಉಳಿದ ಎಲ್ಲರಿಗೂ ಉಚಿತ ವಿದ್ಯುತ್ ನೀಡುತ್ತೇವೆ. ಎಲ್ಲಾ ಹೆಣ್ಣು ಮಕ್ಕಳಿಗೆ 2 ಸಾವಿರ ರೂ. ನೀಡುವುದಿಲ್ಲ. ಒಂದು ಕುಟುಂಬದ ಓರ್ವ ಯಜಮಾನಿಗೆ ಮಾತ್ರ 2 ಸಾವಿರ ರೂ. ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.
Advertisement
Advertisement
ಗುಂಡೂರಾವ್ ಅವರು ಈ ಹಿಂದೆಯೇ ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡಿದ್ದರು. ಈಗ ಹಣ ಇರುವುದರಿಂದಲೇ ಯೋಜನೆ ಮಾಡುತ್ತಿದ್ದೇವೆ. ನಮಗೆ ಕೊಡಲು ಸಾಧ್ಯವಾಗುತ್ತದೆ ಎಂಬ ಕಾರಣಕ್ಕೆ ಭರವಸೆ ನೀಡಿದ್ದೇವೆ ಎಂದು ಕಾಂಗ್ರೆಸ್ ಯೋಜನೆಯನ್ನು ಹರಿಪ್ರಸಾದ್ (BK Hariprasad) ಸಮರ್ಥಿಸಿಕೊಂಡರು. ಇದನ್ನೂ ಓದಿ: ಮಧ್ಯಾಹ್ನ ಆದ್ರೆ ಸೀತೆ ಕೂರಿಸಿಕೊಂಡು ಹೆಂಡ ಕುಡಿಯುತ್ತಿದ್ದ ರಾಮ- ಮತ್ತೆ ನಾಲಿಗೆ ಹರಿಬಿಟ್ಟ ಭಗವಾನ್
Advertisement
ಉಚಿತ ವಿದ್ಯುತ್ ಮತ್ತು ಗೃಹಿಣಿಯರಿಗೆ 2 ಸಾವಿರ ರೂ. ನೀಡುವ ಯೋಜನೆ ಘೋಷಣೆಯಾದ ಬೆನ್ನಲ್ಲೇ ಇಷ್ಟೊಂದು ಹಣ ಎಲ್ಲಿಂದ ತರುತ್ತಾರೆ? ಈ ಯೋಜನೆಗಳು ರಾಜ್ಯದ ಎಲ್ಲಾ ಜನರಿಗೆ ಅನ್ವಯವಾಗುತ್ತಾ? ಮಾನದಂಡ ಏನು ಇತ್ಯಾದಿ ಪ್ರಶ್ನೆಗಳು ಎದ್ದಿತ್ತು. ಈಗ ಈ ಪ್ರಶ್ನೆಗಳಿಗೆ ಕಾಂಗ್ರೆಸ್ ಷರತ್ತುಗಳನ್ನು ಪ್ರಕಟಿಸುವ ಮೂಲಕ ಉತ್ತರ ನೀಡಿದೆ.
Advertisement
ಎಷ್ಟು ಹಣ ಬೇಕು?
ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2000 ರೂ., ವಾರ್ಷಿಕ 24,000 ರೂ. ನೀಡಲಾಗುತ್ತದೆ. ಕಾಂಗ್ರೆಸ್ ಯೋಜನೆ ಜಾರಿಯಾದರೆ ತಿಂಗಳಿಗೆ 3,000 ಕೋಟಿ ರೂ., ವಾರ್ಷಿಕ 36,000 ಕೋಟಿ ರೂ. ಹಣವನ್ನು ಬಜೆಟ್‌ನಲ್ಲಿ ಮೀಸಲಿಡಬೇಕಾಗುತ್ತದೆ.
ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಇದೂ ಜಾರಿಯಾದರೆ ವಾರ್ಷಿಕ 9,000 ಕೋಟಿ ರೂ. ಬೇಕಾಗುತ್ತದೆ. ಎರಡೂ ಜಾರಿಯಾದರೆ ವಾರ್ಷಿಕ 45,000 ಕೋಟಿ ರೂ. ವೆಚ್ಚ ಆಗುತ್ತದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k