ಕನ್ನಡದ ವಿಕ್ರಾಂತ್ ರೋಣ ಸಿನಿಮಾದ ‘ರಾ ರಾ ರಕ್ಕಮ್ಮ’ ಹಾಡಿಗೆ ಸೊಂಟ ಬಳುಕಿಸಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ, ಬಾಲಿವುಡ್ ನಟಿ ನೋರಾ ಫತೇಹಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಇಬ್ಬರೂ ನಟಿಯರು ಸುಕೇಶ್ ಚಂದ್ರಶೇಖರ್ ವಿರುದ್ಧದದ 200 ಕೋಟಿ ವಂಚನೆ ಪ್ರಕರಣದ ಆರೋಪಿಗಳಾಗಿದ್ದಾರೆ ಎನ್ನುವುದು ವಿಶೇಷ. ಇದೇ ಕಾರಣಕ್ಕಾಗಿಯೇ ಜಾಕ್ವೆಲಿನ್ ಮೇಲೆ ನೋರಾ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
Advertisement
ಸುಕೇಶ್ ವಂಚನೆ ಪ್ರಕರಣದಲ್ಲಿ ಈ ನಟಿಯರ ಹೆಸರು ಕೇಳಿ ಬಂದಿತ್ತು. ಜಾರಿ ನಿರ್ದೇಶನಾಲಯ ಕೂಡ ಇಬ್ಬರನ್ನೂ ಕರೆಯಿಸಿ ವಿಚಾರಣೆಗೆ ಒಳಪಡಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೋರಾ ಫತೇಹಿ ವಿರುದ್ಧ ಜಾಕ್ವೆಲಿನ್ ಮಾನಹಾನಿ ಆಗುವಂತಹ ಮತ್ತು ದುರುದ್ದೇಶಪೂರಿತ ಕಾರಣಗಳನ್ನು ನೀಡುತ್ತಿದ್ದಾರಂತೆ. ಅದರಿಂದಾಗಿ ತಮಗೆ ಮಾನ ಹಾನಿ ಆಗುತ್ತಿದೆ ಎಂದು ನೋರಾ ಆರೋಪಿಸಿದ್ದಾರೆ. ಇದನ್ನೂ ಓದಿ: ‘ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್
Advertisement
Advertisement
ಈ ಇಬ್ಬರೂ ನಟಿಯರು ಮೂಲತಃ ವಿದೇಶಿಗರಾಗಿದ್ದು, ಬಾಲಿವುಡ್ ನಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿದ್ದಾರೆ. ಈ ಕಾರಣದಿಂದಾಗಿಯೇ ಇವರು ಸುಕೇಶ್ ಸಂಪರ್ಕಕ್ಕೂ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಲವು ಬಾರಿ ಈ ನಟಿಯರನ್ನು ಜಾರಿ ನಿರ್ದೇಶನಾಲಯವು ವಿಚಾರಣೆಗಾಗಿ ಕರೆದಿದೆ. ಆದರೆ, ಈ ಕೇಸ್ ಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ನಟಿಯರು ಹೇಳಿಕೆ ಕೊಡುತ್ತಲೇ ಬಂದಿದ್ದಾರೆ. ಸುಕೇಶ್ ತಮಗೆ ನೇರವಾಗಿ ಪರಿಚಯವೇ ಇಲ್ಲವೆಂದು ನೋರಾ ಹೇಳಿದ್ದರೆ, ಅವನಿಂದ ಯಾವುದೇ ಉಡುಗೊರೆ ಪಡೆದಿಲ್ಲ ಎಂದು ಜಾಕ್ವೆಲಿನ್ ವಾದಿಸಿದ್ದಾರೆ.
Advertisement
ಈ ಇಬ್ಬರೂ ನಟಿಯರು ಏನೇ ಹೇಳಿದರೂ, ಈಗಾಗಲೇ ಕೋರ್ಟ್ ಕಟಕಟೆಯಲ್ಲಿ ನಿಂತು ಬಂದಿದ್ದಾರೆ. ಜಾರಿ ನಿರ್ದೇಶನಾಲಯವು ಇಬ್ಬರ ಮೇಲೂ ಗುರುತರ ಆರೋಪ ಮಾಡಿ ಜಾರ್ಜ್ ಶೀಟ್ ಕೂಡ ಸಲ್ಲಿಸಲಾಗಿದೆ. ನೂರಾರು ಕೋಟಿಯ ವಂಚನೆಯ ಪ್ರಕರಣ ಇದಾಗಿದ್ದರಿಂದ, ಗಂಭೀರವಾಗಿ ಈ ಪ್ರಕರಣವನ್ನು ತಗೆದುಕೊಳ್ಳಲಾಗಿದೆ. ಇಬ್ಬರೂ ಇಕ್ಕಟ್ಟಿಗೆ ಸಿಲುಕಿದ್ದರೂ, ಒಬ್ಬರ ಮೇಲೆ ಒಬ್ಬರು ಆರೋಪ ಮಾಡಿ, ಬೇರೆ ಕಾರಣಗಳಿಂದಾಗಿ ಮತ್ತೆ ಕೋರ್ಟ್ ಮೆಟ್ಟಿಲು ಹತ್ತುವಂತಾಗಿದೆ.