ಬರ್ನ್: 20 ವರ್ಷದ ಯುವಕನೊಬ್ಬ ತೀವ್ರವಾಗಿ ಹಸ್ತಮೈಥುನ ಮಾಡಿ ಶ್ವಾಸಕೋಶ ತೊಂದರೆಗೆ ಸಿಲುಕಿಕೊಂಡಿದ್ದಾನೆ.
ಸ್ವಿಟ್ಜರ್ಲ್ಯಾಂಡ್ ನಿವಾಸಿ 20 ವರ್ಷದ ಯುವಕ ಹಸ್ತಮೈಥುನವನ್ನು ಹೆಚ್ಚು ಮಾಡಿಕೊಂಡ ಪರಿಣಾಮ ಆತನಿಗೆ ಮಲಗುವಾಗ ಉಸಿರಾಟ ತೊಂದರೆ ಕಾಣಿಸಿಕೊಳ್ಳುತ್ತಿತ್ತು. ಅಲ್ಲದೇ ಹಠಾತ್ ಆಗಿ ಯುವಕನಿಗೆ ತೀಕ್ಷ್ಣವಾದ ಎದೆನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಹೋಗಿದ್ದಾನೆ. ಈ ಹಿನ್ನೆಲೆ ಎಕ್ಸ್‌ರೇ ಮಾಡಿಸಿಕೊಂಡಾಗ ವೈದ್ಯರೇ ಶಾಕ್ ಆಗಿದ್ದಾರೆ. ಎಕ್ಸ್‌ರೇಯಲ್ಲಿ ಯುವಕನ ಶ್ವಾಸಕೋಶದಲ್ಲಿ ಗಾಯವಾಗಿರುವುದು ಕಂಡುಬಂದಿದೆ. ಇದನ್ನೂ ಓದಿ: ಸಿನಿಮೀಯ ರೀತಿ ದರೋಡೆಕೋರನನ್ನೇ ಹಿಡಿದ ಮನೆಯವರು
Advertisement
Advertisement
ಪರೀಕ್ಷೆಯ ನಂತರ, ರೋಗಿಯ ಮುಖ ಊದಿಕೊಂಡಿದೆ ಎಂದು ವೈದ್ಯರು ಗಮನಿಸಿದ್ದಾರೆ. ಈ ವೇಳೆ ಅವನು ಉಸಿರಾಡುವಾಗ ಮತ್ತು ಹೊರಗೆ ಬಿಡುವಾಗ ಶಬ್ದಗಳ ಏರಿಪೇರು ಆಗುತ್ತಿರುವುದನ್ನು ಗಮನಿಸಿದ್ದಾರೆ.
Advertisement
ಎಲ್ಲ ಪರೀಕ್ಷಗಳ ನಂತರ ಯುವಕನಿಗೆ ಎದೆಯ ಕ್ಷ-ಕಿರಣವು ನ್ಯುಮೋಮೆಡಿಯಾಸ್ಟಿನಮ್(pneumomediastinum) ಎಂಬ ಅಪರೂಪದ ಕಾಯಿಲೆಯನ್ನು ಹೊಂದಿದ್ದಾನೆ ಎಂದು ಬಹಿರಂಗಪಡಿಸಿದರು. ಇದರಿಂದ ಮನುಷ್ಯನ ಗಾಳಿಯ ಚೀಲಗಳು ಹಾನಿಗೊಳಗಾಗಿದ್ದು, ಅವನಿಗೆ ಹೆಚ್ಚಿನ ಪ್ರಮಾಣದ ಆಮ್ಲಜನಕದ ಅಗತ್ಯವಿದೆ ಎಂದು ವಿವರಿಸಿದರು. ಶ್ವಾಸಕೋಶಗಳು ಅಥವಾ ಅನ್ನನಾಳಕ್ಕೆ ದೈಹಿಕ ಆಘಾತದಿಂದ ನ್ಯುಮೋಮೆಡಿಯಾಸ್ಟಿನಮ್ ಉಂಟಾಗಬಹುದು ಎಂದು ವೈದ್ಯರು ವಿವರಿಸಿದರು. ಇದನ್ನೂ ಓದಿ: ದೇವಸ್ಥಾನದ ಮೇಲೆ ದಾಳಿ ಮಾಡಿದ್ದು ಖಂಡನೀಯ: ಮುತಾಲಿಕ್
Advertisement
ಈ ರೀತಿಯ ಗಾಯವು ಯುವಕರಲ್ಲಿ ಸಂಭವಿಸುವ ಸಾಧ್ಯತೆ ಹೆಚ್ಚು. ಇದರಿಂದ ತೀವ್ರವಾದ ಆಸ್ತಮಾ ದಾಳಿ, ಶ್ರಮದಾಯಕ ವ್ಯಾಯಾಮ ಅಥವಾ ವಾಂತಿ ಬರುತ್ತೆ. ಪ್ರಸ್ತುತ ಯುವಕನನ್ನು ಅಬ್ಸರ್‌ವೇಷನ್)ದಲ್ಲಿ ಇಡಲಾಗಿದೆ. ಅದೃಷ್ಟವಶಾತ್ ಯುವಕ ಶೀಘ್ರವೇ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದರು.